36.9 C
ಪುತ್ತೂರು, ಬೆಳ್ತಂಗಡಿ
April 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿರ್ಲಾಲು ಗರಡಿ – ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

ಬೆಳ್ತಂಗಡಿ : ಇಲ್ಲಿನ ಶಿರ್ಲಾಲಿನಲ್ಲಿರುವ ಶಿರ್ಲಾಲು – ನಲ್ಲಾರು – ಕರಂಬಾರು ಗ್ರಾಮಗಳ ಕೂಡುವಿಕೆಯಿಂದ ನಡೆಯುವ ಬೆರ್ಮೆರ್ ಬೈದೆರ್ಲೆ ಗರಡಿ ಇದರ 2023 -24 ನೇ ಸಾಲಿನ ವಾರ್ಷಿಕ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆಯು ಶಿರ್ಲಾಲು ಗರಡಿ ವಠಾರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗರಡಿಯ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಪುದ್ದರಬೈಲು ವಹಿಸಿ ಮಾತನಾಡಿ ಜಾತ್ರಾಮಹೋತ್ಸವದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ 2023-24 ನೇ ಸಾಲಿನ ಜಾತ್ರಾ ಸಮಿತಿಯನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಜಾತ್ರಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಪೂಜಾರಿ, ಆಡಳಿತ ಮಂಡಳಿಯ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಕಟ್ಟ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಬಿಲ್ಲವ ಜಂಟಿ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಗರಡಿ ಭಕ್ತರು ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಂ.ಕೆ ಸ್ವಾಗತಿಸಿ ವಂದಿಸಿದರು.

Related posts

ಬೆಳ್ತಂಗಡಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಭೆ

Suddi Udaya

ಉಜಿರೆ: ಸೀತಾಪಹಾರ – ಜಟಾಯು ಮೋಕ್ಷ ತಾಳಮದ್ದಳೆ

Suddi Udaya

ಉಜಿರೆ ಆಟೋ ಚಾಲಕರ ಮಹಾಸಭೆ

Suddi Udaya

ವಾಲಿಬಾಲ್ ಪಂದ್ಯಾಟದಲ್ಲಿ ಸತತ 9ನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಂದಾರು ಶಾಲೆಯ ವಿದ್ಯಾರ್ಥಿಗಳಿಗೆ ಬೆಳ್ತಂಗಡಿಯಲ್ಲಿ ಅದ್ದೂರಿ ಸ್ವಾಗತ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸನತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ

Suddi Udaya

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನಿಂದ ರೂ.2 ಲಕ್ಷ ದೇಣಿಗೆ

Suddi Udaya
error: Content is protected !!