ಬೆಳಾಲು: ಬೆಳಾಲು ಶ್ರೀ ಅಯ್ಯಪ್ಪ ಭಕ್ತವೃಂದದ ಸಮಿತಿ ರಚನೆಯು ಅ.22ರಂದು ಮಾಡಲಾಯಿತು.
ಸಮಿತಿಯ ಗೌರವ ಸಂಚಾಲಕರಾಗಿ ಗುರು ಸ್ವಾಮಿಗಳಾದ ಕೇಶವ, ಸುಧಾಕರ ಕೊಲ್ಪಾಡಿ, ಸೀತರಾಮ ಬಿ.ಎಸ್, ರವರುಗಳನ್ನು ಆಯ್ಕೆಮಾಡಲಾಯಿತು. ಸಮಿತಿಯ ಅಧ್ಯಕ್ಷರಾಗಿ ಶ್ರೀನಿವಾಸ ಗೌಡ ನೋಟರಿ ವಕಿಲರು, ಕಾರ್ಯದರ್ಶಿಯಾಗಿ ಶಶಿಧರ ಆಚಾರ್ಯ ಶಿಲ್ಪಿದಾರರು, ಉಪಾಧ್ಯಕ್ಷರಾಗಿ ಬೊಮ್ಮಣ್ಣ ಗೌಡ ಗುಂಡಿಗದ್ದೆ, ಕೋಶಧಿಕಾರಿಯಾಗಿ ಕೃಷ್ಣ ಬನಂದೂರು, ಜತೆಕಾರ್ಯದರ್ಶಿಯಾಗಿ ಸೀತರಾಮ ಕೊಡೋಟ್ಟು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರೀಶ್ ದರ್ಖಾಸು, ವಿಶ್ವನಾಥ ಬಾಯ್ತರು, ಚಂದ್ರಶೇಖರ , ಸಂಜೀವ ಪೂಜಾರಿ ಮಾಯ, ಮಾದವ ಗೌಡ ಪುಂಗೇತ್ತೀಲು, ಬಾಬು ಕೆರೆಕೋಡಿ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿಯ ಖಾಯಂ ಆಹ್ವಾನಿತ ಸದಸ್ಯರು ಹರೀಶ ಮುಂಡತ್ತಾರ್, ಗಣೇಶ್ ಅನಂತೋಡಿ, ಸತೀಶ್ ಗೌಡ ಎಳ್ಳು ಗದ್ದೆ, ವಿಘ್ನೇಶ್ ಅನಂತೋಡಿ, ರೂಪೇಶ್ ಪೊಸೊಟ್ಟು, ಅಶೋಕ್ ಕೆ.ಎಮ್ ಮೇಗಿನಮನೆ, ಯಶೋಧರ ಅನಂತೋಡಿ, ಶಿವಗಣೇಶ್, ದಿನೇಶ್ ದರ್ಖಾಸು, ರಮೇಶ್ ಶಾಂತಿಗದ್ದೆ ಇವರುಗಳನ್ನು ಆಯ್ಕೆಮಾಡಲಾಯಿತು.
ಅದರಂತೆ ಈ ವರ್ಷ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮವುನ್ನು ಅನಂತೋಡಿ ದೇವಸ್ಥಾನದ ವಠಾರದಲ್ಲಿ ಸೇವೆಗಳೊಂದಿಗೆ ಜನವರಿ 6 ರಂದು ನಡೆಸುವುದೆಂದು ನಿರ್ಧರಿಸಲಾಯಿತು.