ಬೆಳ್ತಂಗಡಿ: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇದರ ಕ್ಷೇತ್ರಾಡಳಿತ ಸಮಿತಿಯ ಮಹಾಸಭೆ ಗೆಜ್ಜೆಗಿರಿಯಲ್ಲಿ ಜರಗಿತು.
ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆಯವರು ದೇಶ ವಿದೇಶಗಳಲ್ಲಿ ನೆಲೆಸಿರುವ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನದ ಭಕ್ತಾದಿಗಳು ಸೇರಿ ನಿರ್ಮಿಸಿದ ಶ್ರೀ ಕ್ಷೇತ್ರ ಇಂದು ವಿಶ್ವಾದ್ಯಂತ ಭಕ್ತರನ್ನು ಆಕರ್ಷಿಸುತ್ತಿರುವ ಪುಣ್ಯ ಕ್ಷೇತ್ರವಾಗಿದೆ. ಶ್ರೀ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಬಗ್ಗೆ ಸಭೆಗೆ ತಿಳಿಸಿದರು.
ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ವಾರ್ಷಿಕ ವರದಿಯನ್ನು ಮಂಡಿಸಿದರು, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಲೆಕ್ಕಪತ್ರವನ್ನು ಮಂಡಿಸಿದರು. ಗೌರವಾಧ್ಯಕ್ಷರಾದ ರಾಜಶೇಖರ ಕೋಟ್ಯಾನ್ ರವರು ಶ್ರೀ ಕ್ಷೇತ್ರಕ್ಕೆ ಬರುವ ಯಾತ್ರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ವಿವರವಾಗಿ ಚರ್ಚಿಸಿದರು. ಆಡಳಿತ ಸಮಿತಿಯ ಕಾರ್ಯಕಾರಿ ಸದಸ್ಯರು ಗೆಜ್ಜೆಗಿರಿ ಮೇಳದ ಸಂಚಾಲಕರಾದ ನವೀನ್ ಸುವರ್ಣ ಸಜಿಪ ಶ್ರೀ ಕ್ಷೇತ್ರದ ಗೆಜ್ಜೆಗಿರಿ ಮೇಳ ಯಶಸ್ವಿ ದಾಖಲೆ ಪ್ರದರ್ಶನ ಕಂಡ ಬಗ್ಗೆ ಮೇಳದ ವರದಿಯನ್ನು ಒಪ್ಪಿಸಿದರು.
ಉಪಾಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ ಕ್ಷೇತ್ರಾಡಳಿತ ಸಮಿತಿಯು ಆರ್ಯುವೇದ, ಗಿಡಮೂಲಿಕೆಗಳ ಉತ್ಪನ್ನಗಳ ತಯಾರಿ, ಮಾರಾಟ, ಹಾಗೂ ಸ್ವಾವಲಂಬಿ ಉದ್ಯೋಗ ಕ್ಕೆ ಪ್ರೋತ್ಸಾಹ ನೀಡುವ ಬಗ್ಗೆ ಕಾರ್ಯ ಸೂಚಿಗಳನ್ನು ತಿಳಿಸಿದರು. ವಿಶೇಷವಾಗಿ ಈ ಸಭೆಯಲ್ಲಿ ಚಿತ್ತರಂಜನ್ ಕಂಕನಾಡಿ, ಮುಂಬೈ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷರಾದ ಹರೀಶ್ ಜಿ ಅಮೀನ್, ಕ್ಷೇತ್ರದ ಗೌರವಾಧ್ಯಕ್ಷ ರಾದ ಜಯಂತ ನಡುಬೈಲ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಂಬೈ ಭಾರತ್ ಬ್ಯಾಂಕ್ ನಿರ್ದೇಶಕ ರಾಗಿ ಆಯ್ಕೆಯಾದ ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷ ರಾದ ನಿತ್ಯಾನಂದ ಕೋಟ್ಯಾನ್, ಪ್ರಮುಖರಾದ ದಯಾನಂದ ಪೂಜಾರಿ ಕಲ್ವಾ ರವರನ್ನು ಅಭಿನಂದಿಸಲಾಯಿತು.