April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿಯಲ್ಲಿ ನೂತನವಾಗಿ ಪ್ರಾರಂಭಿಸಿದ ಡ್ರೀಮ್ ಡೀಲ್ ಗ್ರೂಪ್ಸ್ ಉದ್ಘಾಟನೆ

ಬೆಳ್ತಂಗಡಿ: ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಡ್ರೀಮ್ ಡೀಲ್ ಗ್ರೂಪ್ ನ ಬೆಳ್ತಂಗಡಿ ಬ್ರಾಂಚ್ ನ ಉದ್ಘಾಟನೆಯು ನಗರ ಪಂಚಾಯತ್ ಬಿಲ್ಡಿಂಗ್ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ನಡೆಯಿತು.

ನೂತನ ಡಿಡಿ ಗ್ರೂಪ್ ನ್ನು ಬೆಳ್ತಂಗಡಿ ಚರ್ಚ್ ನ ಧರ್ಮಗುರುಗಳಾದ ರೇ.ಫಾ| ಕ್ಲಿಪರ್ಡ್ ಸೈಮನ್ ಪಿಂಟೋ ಉದ್ಘಾಟಿಸಿ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಖಿಲರ್ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎ ನಝೀರ್, ನ್ಯಾಯವಾದಿ ಶಶಿಕಿರಣ್ ಜೈನ್ ಬೆಳ್ತಂಗಡಿ, ಡಿಡಿ ಗ್ರೂಪ್ಸ್ ಆಡಳಿತ ನಿರ್ದೇಶಕ ಸುಹೇಲ್, ಮೊಬೈಲ್ ಪ್ಯಾಲೇಸ್ ಮಾಲಕ ಉಮೇಶ್ ಪೂಜಾರಿ ಉಪಸ್ಥಿತರಿದ್ದು ಶುಭಕೋರಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಇಮ್ತಿಯಾಜ್ ಬೆಳ್ತಂಗಡಿ, ಸುಹೇಲ್ ಸಮಕ್ ಡೈನ್ ಬೆಳ್ತಂಗಡಿ, ಕಿಶಾನ್ ಭಟ್ ಕಟೀಲು,ಬದ್ರುದ್ದೀನ್ ಶಾಜ್ ಕಲೆಕ್ಷನ್ ಬೆಳ್ತಂಗಡಿ,ನಿತೇಶ್ ಎಸ್.ವಿ ಮೊಬೈಲ್ ಬೆಳ್ತಂಗಡಿ, ನಿಜಾಮ್ ರೋಯಲ್ ಝೋನ್ ಬೆಳ್ತಂಗಡಿ, ಪುತ್ತ ಬೆಳ್ತಂಗಡಿ ಹಾಗೂ ಇತರರು ಉಪಸ್ಥಿತರಿದ್ದು ಶುಭಕೋರಿದರು.

ರಾಯಲ್ ಝೋನ್ ಮಾಲಕ, ನಿರೂಪಕ ಮಹಮ್ಮದ್ ನಿಸಾರ್ ಸ್ವಾಗತಿಸಿ, ವಂದಿಸಿದರು. ಸಂಸ್ಥೆಯ ಪಾಲುದಾರರು ಅತಿಥಿ ಗಣ್ಯರನ್ನು ಸತ್ಕರಿಸಿದರು.

ಡಿಡಿ ಗ್ರೂಪ್ಸ್ ಸಂಸ್ಥೆಯು ಲಕ್ಕಿ ಸ್ಕೀಮ್ ನ್ನು ಮಾಡುತ್ತಿದ್ದು ರಾಜ್ಯಾದ್ಯಂತ ಹಲವಾರು ಶಾಖೆಗಳನ್ನು ತೆರದಿದ್ದಾರೆ. ತಿಂಗಳಿಗೆ ಒಂದು ಸಾವಿರದಂತೆ 20 ಕಂತು ಪಾವತಿಸಲು ಅವಕಾಶವಿದೆ. ಲಕ್ಕಿ ಡ್ರಾದಲ್ಲಿ ವಿಜೇತರಿಗೆ ಕಾರು, ದ್ವಿಚಕ್ರ ವಾಹನ, ಬಂಗಾರ, ಎಲೆಕ್ಟ್ರಾನಿಕ್ ಮುಂತಾದ ವಸ್ತುಗಳು ಸಿಗುತ್ತದೆ. ಕಂತು ಪಾವತಿಸಿ ಯಾವುದೇ ಬಹುಮಾನ ಬಾರದಿದ್ದರು ಕಟ್ಟಿದ ಮೊತ್ತದ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕರು ತಿಳಿಸಿದರು.

Related posts

8ನೇ ವರ್ಷದ ಮಂಗಳೂರು ಕಂಬಳಕ್ಕೆ ಅದ್ದೂರಿ ಚಾಲನೆ: ರಾಮ – ಲಕ್ಷ್ಮಣ ಜೋಡುಕರೆಯಲ್ಲಿ ಪಂದ್ಯಾಟ

Suddi Udaya

ಪಡುಬಿದ್ರೆಯಲ್ಲಿ ಭೀಕರ ರಸ್ತೆ ಅಪಘಾತ: ಅರಸಿನಮಕ್ಕಿ ಪುರುಷೋತ್ತಮ್ ಅಭ್ಯಂಕರ್ ರವರ ಪತ್ನಿ ಶ್ರೀಮತಿ ಸುಮಂಗಳ ಮೃತ್ಯು

Suddi Udaya

ನ.10 ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರೆಖ್ಯದಲ್ಲಿ ಮೊಳಗಲಿದೆ ಹಿಂದುತ್ವದ ಘರ್ಜನೆ

Suddi Udaya

ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

Suddi Udaya

ಬೆಳ್ತಂಗಡಿ :ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಮತ್ತು ರವಿಶಂಕರ್ ಗುರೂಜಿ

Suddi Udaya

ಮಚ್ಚಿನ: ಮಾಣೂರು ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಬಾಲಾಲಯದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಕಲಶಾಭಿಷೇಕ

Suddi Udaya
error: Content is protected !!