23.6 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರೇಷ್ಮೆರೋಡ್ ಶಕ್ತಿ ಯುವಕ ಮಂಡಲದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಪ್ರಯುಕ್ತ ಭೂಮಿ ಪೂಜೆ

ಗೇರುಕಟ್ಟೆ: ಶಕ್ತಿ ಯುವಕ ಮಂಡಲ ರೇಷ್ಮೆರೋಡ್ ಗೇರುಕಟ್ಟೆ, ಇದರ ರಜತ ಮಹೋತ್ಸವದ ಪ್ರಯುಕ್ತ ಶಕ್ತಿ ಯುವಕಮಂಡಲ ಮತ್ತು ಮಹಾದಾನಿಗಳ ಸಹಕಾರದೊಂದಿಗೆ ಬಡ ಕುಟುಂಬದ ಶ್ರೀಮತಿ ಸೀತಾ ಇವರಿಗೆ ಮನೆ ನಿರ್ಮಿಸಿ ಕೊಡುವ ಪ್ರಯುಕ್ತ ಭೂಮಿ ಪೂಜೆಯನ್ನು ಅ. 24 ರಂದು ನಡುಮನೆ ಶ್ರೀನಿವಾಸ ಪುರೋಹಿತರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯಿತಿನ ಅಧ್ಯಕ್ಷ ದಿವಾಕರ ಪೂಜಾರಿ ಭಾಗವಹಿಸಿ ಶುಭ ಹಾರೈಸಿದರು. ಶಕ್ತಿ ಯುವಕಮಂಡಲದ ಅಧ್ಯಕ್ಷ ಉಮೇಶ್ ಕುಲಾಲ್, ಕುವೆಟ್ಟು ಗ್ರಾಮ ಪಂಚಾಯಿತಿನ ಸದಸ್ಯರಾದ ಸದಾನಂದ ಮೂಲ್ಯ, ಪ್ರಧಾನ ಕಾರ್ಯದರ್ಶಿಯಾದ ತಾರಾನಾಥ ನಾಯ್ಕ್, ಕಾರ್ಯದರ್ಶಿಯಾದ ಸಂತೋಷ ಭಾರ್ಗವಿ, ಕ್ರೀಡೆ ಕಾರ್ಯದರ್ಶಿಯಾದ ಸುದೇಶ್ ಆರ್ ಗೌಡ, ಮಾಧ್ಯಮ ಕಾರ್ಯದರ್ಶಿಯಾದ ಸತೀಶ್ ಸಾಲಿಯಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾದ ಯೋಗೀಶ್ ಕುಮಾರ್, ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ದೇವಣ್ಣ ಮೂಲ್ಯ, ಕಳಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರಾದ , ಸಿರಿಲ್ ಪಿಂಟೋ ಹಾಗೂ ಶಕ್ತಿ ಯುವಕಮಂಡಲದ ಪದಾಧಿಕಾರಿಗಳು, ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

Related posts

ಬೆಳ್ತಂಗಡಿ: ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರಿಂದ ಸ್ವಚ್ಛತಾ ಕಾರ್ಯ

Suddi Udaya

ಕೊರಿಂಜ ಪಂಚಲಿಂಗೇಶ್ವರ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ: ಬ್ರಹ್ಮಕುಂಭಾಭಿಷೇಕ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವೆಯಾಟ ಪ್ರಾರಂಭದ ಸಭಾ ಕಾರ್ಯಕ್ರಮ

Suddi Udaya

ಮಾಜಿ ಮುಖ್ಯ ಮಂತ್ರಿ ಹೆಚ್. ಡಿ ಕುಮಾರ ಸ್ವಾಮಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ನಿಡ್ಲೆ ಬೂತ್ ಗೆ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಭೇಟಿ

Suddi Udaya

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆ: ಗುರುವಾಯನಕೆರೆ ಎರ್ಡೂರು ಬಳಿ ‘ಶ್ರೀರಾಮನಗರ’ ನಾಮಫಲಕ ಅನಾವರಣ

Suddi Udaya
error: Content is protected !!