ಬೆಳ್ತಂಗಡಿ: ಶನಿವಾರ ರಾತ್ರಿ ಆಗಸದಲ್ಲಿ ಖಗೋಳ ವಿಸ್ಮಯ ನಡೆಯಲಿದ್ದು, ಅ.28ಕ್ಕೆ ಚಂದ್ರಗ್ರಹಣ (Lunar Eclipse 2023) ನಡೆಯಲಿದ್ದು, ಅಕ್ಟೋಬರ್ 29ಕ್ಕೂ ಇದರ ಪ್ರಭಾವ ತಟ್ಟಲಿದೆ. ಜ್ಯೋತಿಷ್ಯದ ಪ್ರಕಾರ ಗ್ರಹಣ ಅಮಂಗಳ, ಸೂತಕದ ಛಾಯೆ ಎನ್ನುವ ನಂಬಿಕೆ ಇದೆ. ಈ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿದ್ದು ಭಾರತದಲ್ಲಿಯೂ ಗೋಚರಿಸಲಿದೆ.
ಗ್ರಹಣದ ಅವಧಿ (ವಿಜ್ಞಾನಿಗಳ ಪ್ರಕಾರ): ಅಕ್ಟೋಬರ್ -28ರ ರಾತ್ರಿ 11.30ಕ್ಕೆ ಸಂಭವಿಸಿ ಅಕ್ಟೋಬರ್ 29 ರ 2.30ರವರೆಗೆ ಇರಲಿದೆ. ಗ್ರಹಣದ ಅವಧಿ (ಜ್ಯೋತಿಷಿಗಳ ಪ್ರಕಾರ): ಮಧ್ಯರಾತ್ರಿ 1.04 ಕ್ಕೆ ಆರಂಭ. 2:22ಕ್ಕೆ ಅಂತ್ಯವಾಗಲಿದೆ ಎಂದಿದೆ.
ರಾಹುಗ್ರಸ್ಥ ಚಂದ್ರಗ್ರಹಣ ಎನ್ನಲಾಗಿದ್ದು, ಭಾರತದಲ್ಲೂ ಗೋಚರಿಸಲಿದೆ. ಶರದ್ ಪೂರ್ಣಿಮೆಯ ರಾತ್ರಿಯಲ್ಲಿ ಈ ಗ್ರಹಣ ಸಂಭವಿಸಲಿದ್ದು, ಗಜಕೇಸರಿ ಯೋಗದಲ್ಲಿ ಈ ಬಾರಿ ಚಂದ್ರಗ್ರಹಣ ಸಂಭವಿಸಲಿದ್ದು ಎಂದು ಜೋತಿಷ್ಯ ಶಾಸ್ತ್ರ ಹೇಳಿದೆ.
ಸಾಮಾನ್ಯವಾಗಿ ಗಜಕೇಸರಿ ಯೋಗದಲ್ಲಿ ಗ್ರಹಣ ಬಹಳ ಅಪರೂಪವಾಗಿದೆ. 30 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಗ್ರಹಣ ಇದಾಗಿದೆ. ವಿಜ್ಞಾನಿಗಳ ಪಾಲಿಗೆ ಇದು ವಿಸ್ಮಯವಾಗಲಿದೆ.