32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಿಜೃಂಭಣೆಯ ನವರಾತ್ರಿ ಉತ್ಸವ ಸಂಪನ್ನ

ದೇಯೀ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ನವರಾತ್ರಿ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿ ಅ. 24ರಂದು ಸಂಪನ್ನಗೊಂಡಿತು.

ಅ.15 ರಂದು ಬೆಳಿಗ್ಗೆ ಗಣಪತಿಯ ಹವನ, ತೆನೆ ಕಟ್ಟುವ ಮೂಲಕ ಆರಂಭಗೊಂಡು ಮಹಾಪೂಜೆ ಮಾತೇ ದೇಯೀ ಬೈದೆತಿಗೆ 10 ದಿವಸಗಳಲ್ಲಿ ವಿಶೇಷ ಅಲಂಕಾರ ಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ಭಕ್ತರಿಗೆ ವಿವಿಧ ಸೇವೆ ಸಲ್ಲಿಸುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಅ 24ರಂದು ಸರಸ್ವತಿ ಪೂಜೆ ಹಾಗೂ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು.
ನವರಾತ್ರಿ ಸಂದರ್ಭದಲ್ಲಿ ಸುಮಾರು 31 ವಿವಿಧ ಭಜನಾ ತಂಡಗಳಿಂದ ಶ್ರೀಕ್ಷೇತ್ರದಲ್ಲಿ ಭಜನೆ ಸಂಕೀರ್ತನೆ ನಡೆಯಿತು.


ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಾದ ಕಂಕನಾಡಿ ಗರಡಿ ಅಧ್ಯಕ್ಷರಾದ ಚಿತ್ತರಂಜನ್ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಮೂರ್ತೆದಾರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ನಾರಾಯಣ ಗುರು ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹರಿಶ್ಚಂದ್ರ ಕಟ್ಪಾಡಿ, ಮುಂಬೈ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ ಅಮೀನ್, ಉಪಾಧ್ಯಕ್ಷರಾದ ಸುರೇಶ್ ಪೂಜಾರಿ. ಭಾರತ್ ಕೋ ಆಪರೇಟಿವ್ ಬ್ಯಾಂಕಿನ ನೂತನ ಸದಸ್ಯರಾದ ನಿತ್ಯಾನಂದ ಕೋಟ್ಯಾನ್ ,ದಯಾನಂದ ಪೂಜಾರಿ ಕಲ್ವ, ದುಬೈ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಗೋವಾ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಹಾಸ ಅಮೀನ್,. ಪುತ್ತೂರಿನ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಉಪಾಧ್ಯಕ್ಷ ರವಿ ಪೂಜಾರಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಡಾ ರಾಜಾರಾಮ್, ಶ್ರೀ ಕ್ಷೇತ್ರ ಗೆಜ್ಜೇಗಿರಿ ಮೇಳದ ಸಂಚಾಲಕರಾದ ನವೀನ್ ಸುವರ್ಣ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸದಸ್ಯರಾದ ಹರೀಶ್ ಸಾಲಿಯಾನ್ ಬಜಗೋಳಿ, ಎಸ್ ಆರ್ ಮಸಾಲೆ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶೈಲೇಂದ್ರ ಸುವರ್ಣ, ರಾಜೇಂದ್ರ ಉಚ್ಚಿಲ, ಕಾನೂನು ಸಲಹೆಗಾರರಾದ ನವನೀತ ಹಿಂಗಾಣಿ, ಕ್ಷೇತ್ರದ ವಕ್ತಾರ ರಾಜೇಂದ್ರ ಚಿಲಿಂಬಿ, ಆಂತರಿಕ ಲೆಕ್ಕ ಪರಿಶೋಧಕ ಶೇಖರ ಬಂಗೇರ, ಅಭಿವೃದ್ಧಿ ಸಮಿತಿಯ ಜಯರಾಮ್ ಬಂಗೇರ,ಶ್ರೀ ನಾರಾಯಣ ಮಚ್ಚಿನ, ನಿತೇಶ್ ವೇಣೂರು, ನಿತ್ಯಾನಂದ ನಾವರ, ಜೈ ವಿಕ್ರಮ ಕಲ್ಲಾಪು, ಶ್ರೀಕುಮಾರ್ ಇರುವೈಲು, ಮುಖ್ಯ ಅರ್ಚಕರಾದ ಶಿವಾನಂದ ಶಾಂತಿ, ಮುಂತಾದ ಗಣ್ಯರು ಹಾಜರಿದ್ದ ರೆಂದು ಕ್ಷೇತ್ರದ ಅಧ್ಯಕ್ಷ ಪೀತಾಂಬರ ಹೆರಾಜೆ ಯವರು ತಿಳಿಸಿದರು.

Related posts

ಅ.31: ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ದೀಪಾವಳಿ ದೋಸೆಹಬ್ಬ ಹಾಗೂ ಗೋ ಪೂಜಾ ಉತ್ಸವ

Suddi Udaya

ಪೋಲಿಸ್ ಇಲಾಖೆಯಲ್ಲಿ ಎ ಎಸ್ ಐ ಯಾಗಿ ಸೇವಾ ನಿವೃತ್ತಿ ಹೊಂದಿದ ಸ್ಯಾಮುವೆಲ್ ಎಂ.ಐ. ನೆಲ್ಯಾಡಿರವರಿಗೆ ಸನ್ಮಾನ

Suddi Udaya

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ವತಿಯಿಂದ ಧನಸಹಾಯ ಹಸ್ತಾಂತರ

Suddi Udaya

ಅಥ್ಲೆಟಿಕ್ ಕ್ರೀಡಾಕೂಟ: ಉಜಿರೆ ಎಸ್.ಡಿ.ಎಮ್ ಕಾಲೇಜಿನ ವಿದ್ಯಾರ್ಥಿನಿ ಚಂದ್ರಿಕಾರಿಗೆ ಬೆಳ್ಳಿ ಪದಕ

Suddi Udaya

ಇಂದು ಸಂಜೆ ಬಹುನಿರೀಕ್ಷಿತ ದಸ್ಕತ್ ತುಳು ಚಲನಚಿತ್ರದ ಟೀಸರ್ ಬಿಡುಗಡೆ

Suddi Udaya

ಇಂದಿನಿಂದ ಧರ್ಮಸ್ಥಳ- ಪಾಂಗಳ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಾರಂಭ

Suddi Udaya
error: Content is protected !!