ಬಜಿರೆ: ಬೆಳ್ತಂಗಡಿ ತಾ| ಮಟ್ಟದ ಕ್ರೀಡಾಕೂಟದ ಉದ್ಘಾಟನೆ: ಹುಣ್ಸೆಕಟ್ಟೆ ಕ್ರೀಡಾ ಸಂಕೀರ್ಣಕ್ಕೆ ಸರಕಾರ ಅನುಮೋದನೆ ನೀಡಲಿ: ಶಾಸಕ ಹರೀಶ್ ಪೂಂಜ

Suddi Udaya

ವೇಣೂರು: ಕ್ರೀಡೆಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದವನು ನಾನು. ಕಳೆದ ಅವಧಿಯಲ್ಲಿ ಬೆಳ್ತಂಗಡಿ ಹುಣ್ಸೆಕಟ್ಟೆಯ ಪರಿಸರದಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸುಮಾರು 12 ಎಕ್ರೆ ಪ್ರದೇಶವನ್ನು ಕಾದಿರಿಸಿ ರೂ. 10 ಕೋಟಿ ಅನುದಾನ ಒದಗಿಸಲು ಆದೇಶ ಆಗಿತ್ತು. ಆದರೆ ಪ್ರಸ್ತುತ ಸರಕಾರ ಯೋಜನೆಗೆ ತಡೆಹಿಡಿದಿದೆ. ಕ್ರೀಡೆಗೆ ಒತ್ತುನೀಡುವ ನಿಟ್ಟಿನಲ್ಲಿ ಪ್ರಸ್ತುತ ಸರಕಾರ ಈ ಅನುದಾನವನ್ನು ತಕ್ಷಣ ಮಂಜೂರುಗೊಳಿಸಬೇಕು. ಈ ಮೂಲಕ ತಾಲೂಕಿನ ಕ್ರೀಡಾಳುಗಳಿಗೆ ಶಕ್ತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸರಕಾರವನ್ನು ಆಗ್ರಹಿಸಿದರು.


ದ.ಕ.ಜಿ.ಪಂ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಗ್ರಾ.ಪಂ. ವೇಣೂರು, ತಾ| ಮಟ್ಟದ ಕ್ರೀಡಾಕೂಟ ಸಂಘಟನಾ ಸಮಿತಿ ಬಜಿರೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಬಜಿರೆ ಸ.ಉ.ಪ್ರಾ. ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಜಿರೆ ಶಾಲೆಯಲ್ಲಿ ಜರಗಿದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಕ್ರೀಡಾಕೂಟದ ಹಾಗೂ ಪಿಯಂಶ್ರೀ ಯೋಜನೆಗೆ ಆಯ್ಕೆಯ ಅಧಿಕೃತ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪ್ರಸ್ತುತ ಅನುದಾನದಲ್ಲಿ ಬಜಿರೆ ಶಾಲೆಯ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 5 ಲಕ್ಷ ಅನುದಾನ ಒದಗಿಸುತ್ತೇನೆ ಎಂದು ಶಾಸಕರು ಘೋಷಿಸಿದರು.

ಪೆರಾಡಿ ಪ್ರಾ.ಕೃ.ಪ.ಸ .ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಅವರು ಮಾತನಾಡಿ, ಅಭಿವೃದ್ಧಿಯ ವಿಚಾರದಲ್ಲಿ ನಾವು ಯಾವುದೇ ರೀತಿಯ ರಾಜಕೀಯ ಮಾಡುವುದಿಲ್ಲ. ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಯೋಜನೆಗಳನ್ನು ರೂಪಿಸಿದೆ. ತಾಲೂಕಿಗೆ ಇರಿಸಲಾದ ಅಭಿವೃದ್ಧಿ ಅನುದಾನಗಳು ಕಾನೂನಾತ್ಮಕವಾಗಿದ್ದರೆ ಖಂಡಿತ ಅದನ್ನು ಸರಕಾರ ತಡೆಯೊಡ್ಡುವ ಕೆಲಸ ಮಾಡುವುದಿಲ್ಲ, ಶಾಲೆ, ದೇವಸ್ಥಾನಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ರಾಜ್ಯ ಸರಕಾರ ನೀಡುತ್ತಿದೆ ಎಂದರು.

ಸಮಾರಂಭದ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್‌ಸಿಂಹ ನಾಯಕ್ ನೆರವೇರಿಸಿದರು. ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ವೇಣೂರು ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ ಡಿ., ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಪಿ. ಪೂಜಾರಿ, ಗ್ರಾ.ಪಂ. ಸದಸ್ಯರಾದ ಲೋಕಯ್ಯ ಪೂಜಾರಿ, ಅರುಣ್ ಕ್ರಾಸ್ತಾ, ಸುನಿಲ್ ಕುಮಾರ್, ಲೀಲಾವತಿ, ಮಲ್ಲಿಕಾ ಕಾಶಿನಾಥ್, ಸುಜಾತ, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಜಗದೀಶ್, ಯಂ ವಿಜಯರಾಜ ಅಧಿಕಾರಿ ಮಾರಗುತ್ತು, ಸುರೇಶ್ ಕುಮಾರ್ ಆರಿಗ ಪೆರ್ಮಾಣುಗುತ್ತು, ಶೇಖರ ಕುಕ್ಕೇಡಿ, ಕೆ. ವಿಜಯ ಗೌಡ, ಸುಂದರ ಹೆಗ್ಡೆ ಬಿ.ಇ., ಕೆ. ಭಾಸ್ಕರ ಪೈ, ಜಯಂತ್ ಕೋಟ್ಯಾನ್, ಕಿರಣ್ ಮಂಜಿಲ, ರಾಘವೇಂದ್ರ ಭಟ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ ಎಸ್. ತುಳುಪುಳೆ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಧಾಕೃಷ್ಣ, ನಿತೀಚ್ ಎಚ್. ಕೋಟ್ಯಾನ್, ಸಿಆರ್‌ಪಿ ರಾಜೇಶ್, ಸುಧೀರ್ ಭಂಡಾರಿ,ತಾ| ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ತಾರಾಕೇಸರಿ, ಮಹಾಬಲ ಪೂಜಾರಿ ಪಚ್ಚೇರಿ, ರೋಹನ್ ಮೂಡಬಿದಿರೆ, ಜಯರಾಜ್ ಜೈನ್, ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದ ಶಿಕ್ಷಕರ ಸಂಘದ ವಿವಿಧ ಪದಾಧಿಕಾರಿಗಳಾದ ರಿಯಾಜ್, ಕಿಶೋರ್ ಕುಮಾರ್ ಎಚ್., ಕೃಷ್ಣಾನಂದ, ದೀಪಾವತಿ, ಮೋಹನ ಕುಮಾರ್, ರವಿರಾಜ್ ಕೊರಂಜ, ಮುಖ್ಯ ಶಿಕ್ಷಕಿ ಕಮಲಾಜಿ ಎಸ್. ಜೈನ್, ಕ್ರೀಡಾಕೂಟ ಸಂಘಟನ ಸಮಿತಿ ಗೌರವಾಧ್ಯಕ್ಷ ಶಶಿಕುಮಾರ್ ಇಂದ್ರ, ಅಧ್ಯಕ್ಷ ಲೋಕೇಶ್ ಪೂಜಾರಿ ಕೋರ್ಲೋಡಿ, ಕೋಶಾಧಿಕಾರಿ ನವೀನ್ ಪೂಜಾರಿ ಪಚ್ಚೇರಿ, ತಾಯಂದಿರ ಸಮಿತಿ ಅಧ್ಯಕ್ಷೆ ಜಯಶ್ರೀ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಯಲು ರಂಗಮಂದಿರದ ಉದ್ಘಾಟನೆ:
ಪಚ್ಚೇರಿ ಕುಟುಂಬಸ್ಥರು ಶಾಲೆಗೆ ರೂ. 5 ಲಕ್ಷ ವೆಚ್ಚದಲ್ಲಿ ದಿ| ಪ್ರವೀಣ್ ಪೂಜಾರಿ ಸ್ಮರಣಾರ್ಥ ನಿರ್ಮಿಸಿದ ಬಯಲು ರಂಗಮಂದಿರದ ಉದ್ಘಾಟನೆಯನ್ನು ದಾನಿ ಚಂದ್ರಾವತಿ ಧರ್ಣಪ್ಪ ಪೂಜಾರಿ ಪಚ್ಚೇರಿ ನೆರವೇರಿಸಿದರು. ಕ್ರೀಡಾಪುಟು ಕು| ಲಹರಿ ಕ್ರೀಡಾಪ್ರತಿಜ್ಞೆ ಬೋಧಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಶಾಸಕ ಹರೀಶ್ ಪೂಂಜ ಅವರು ಒದಗಿಸಿದ ಕ್ರೀಡಾಸಮವಸ್ತ್ರವನ್ನು ಅನಾವರಣಗೊಳಿಸಲಾಯಿತು.
ರಂಗಮಂದಿರದ ದಾನಿ ಚಂದ್ರಾವತಿ ಧರ್ಣಪ್ಪ ಪೂಜಾರಿ ಪಚ್ಚೇರಿ, ಎರಡು ದಿನಗಳಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಊಟದ ವ್ಯವಸ್ಥೆ ಕಲ್ಪಿಸಿರುವ ದಾನಿ ನಂದಿನಿ ಪೈ ಬೆಳ್ತಂಗಡಿ ಅವರ ಪುತ್ರ ನಿತಿನ್ ಪೈ, ವರ್ಗಾವಣೆಗೊಳ್ಳಲಿರುವ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಹಾಗೂ ಕ್ರೀಡಾಜ್ಯೋತಿ ತಂದ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆನಂದ ಅವರನ್ನು ಸಮ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಪ್ರಾಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ ನಿರೂಪಿಸಿ, ವಂದಿಸಿದರು.

Leave a Comment

error: Content is protected !!