ಉಜಿರೆ: ನಮ್ಮ ನಾಡಿನ ಪ್ರಸಿದ್ಧ ದೇವೀ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಿಂದ ಆಶ್ವಯುಜ ಮಾಸದ ಹುಣ್ಣಿಮೆಯಂದು ಅ. 28 ರಂದು ಹೊರಟು ಸಾಯಂಕಾಲ ಮಂಗಳೂರಿನ ಕದ್ರಿ ಶ್ರೀ ಮಂಜುನಾಥನ ಸನ್ನಿಧಿಗೆ ಆಗಮಿಸಿ ಅ.29 ಭಾನುವಾರ ಬೆಳಿಗ್ಗೆ ಕದ್ರಿಯಿಂದ ಹೊರಟ ಯಾತ್ರೆ ಮಧ್ಯಾಹ್ನ 1 ಗಂಟೆಗೆ ಉಜಿರೆಯ ಜನಾರ್ದನ ಸ್ವಾಮಿ ದೇವಾಲಯವನ್ನು ತಲುಪಿದಾಗ ಉಜಿರೆಯಲ್ಲಿ ರಥಯಾತ್ರೆಗೆ ಅದ್ದೂರಿ ಸ್ವಾಗತ ನೀಡಿ ರಥಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಧರ್ಮ ಜಾಗೃತಿ ಸಮಿತಿ ಸಂಚಾಲಕ ಶಶಿಧರ ಶೆಟ್ಟಿ ನವಶಕ್ತಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಡಾ.ಎಲ್ ಹೆಚ್.ಮಂಜುನಾಥ್, ಅನಿಲ್ ಕುಮಾರ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಇಲ್ಲಿಂದ ಮಧ್ಯಾಹ್ನ 3 ಗಂಟೆಗೆ ಪಾದಯಾತ್ರೆಯ ಮೂಲಕ ಹೊರಟು ನಮ್ಮ ನಾಡಿನ ಪ್ರಸಿದ್ಧ ಶ್ರದ್ಧಾಕೇಂದ್ರವಾದ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಬಂದು ಪ್ರಾರ್ಥನೆಯೊಂದಿಗೆ ಧರ್ಮ ಸಂರಕ್ಷಣಯಾತ್ರೆ ಸಂಪನ್ನಗೊಳ್ಳಲಿದೆ.