April 2, 2025
ಗ್ರಾಮಾಂತರ ಸುದ್ದಿ

ಬೆಳ್ತಂಗಡಿ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ: ಸ್ಪರ್ಧಾತ್ಮಕ ಉದ್ಯೋಗ ಮಾರ್ಗದರ್ಶನ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟನೆ

ಬೆಳ್ತಂಗಡಿ: ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ, ಕುಲಾಲ/ ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಇವರ ಸಹಯೋಗದೊಂದಿಗೆ ಕುಲಾಲ ಸಾಂತ್ವನ ನಿಧಿ ಸಮಿತಿ ವತಿಯಿಂದ ಸ್ಪರ್ಧಾತ್ಮಕ ಉದ್ಯೋಗ ಮಾರ್ಗದರ್ಶನ ಮತ್ತು ತರಬೇತಿ ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ ಉದ್ಘಾಟಿಸಿದರು.
ಬಳಿಕ ಸ್ಪರ್ಧಾತ್ಮಕ ಉದ್ಯೋಗ ಮಾರ್ಗದರ್ಶನವನ್ನು ಜೂನಿಯರ್ ಕಾಲೇಜು ಬೆಳ್ತಂಗಡಿ ಉಪನ್ಯಾಸಕರಾದ ಗಣೇಶ್ ಭಟ್ ನೀಡಿದರು.

Chartered Accountant ಅಭಿನವ್ ಕುಲಾಲ್ ಇವರು CA ಕಂಪ್ಲೀಟ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಮಾರ್ಗದರ್ಶನ ನೀಡಿದರು. ಉದ್ಯಮಿ ಲೋಕೇಶ್ ಕುಲಾಲ್ ಉದ್ಯಮದ ಬಗ್ಗೆ , ನಿವೃತ್ತ ಉಪತಾಶಿಲ್ದಾರ್ ಎಚ್. ಪದ್ಮ ಕುಮಾರ್ ಕಂದಾಯ ಇಲಾಖೆಯ ಬಗ್ಗೆ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಪಂಚಾಯತ್ ರಾಜ್ ಬಗ್ಗೆ ಮಾಹಿತಿ ನೀಡಿದರು. ವಾಣಿಜ್ಯ ತೆರಿಗೆ ಅಧಿಕಾರಿ ಯತೀಶ್ ಸಿರಿಮಜಲ್, ಶಿಕ್ಷಕ ಶ್ರೀ ಜಗನ್ನಾಥ್ ಕುಲಾಲ್, ವಿಶಾಲ್ ಹಾಗೂ ಹರೀಶ್ ಇವರುಗಳು ವಿದ್ಯಾರ್ಥಿಗಳ ಜೊತೆ ನೇರ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.ಕಾರ್ಯಕ್ರಮವನ್ನ ಯತೀಶ್ ಸಿರಿಮಜಲು ಸ್ವಾಗತಿಸಿ, ಜಗನ್ನಾಥ್ ಕುಲಾಲ್ ವಂದಿಸಿದರು. ಉಪನ್ಯಾಸಕ ಸುಧೀರ್ ಕೆಎನ್ ಕಾರ್ಯಕ್ರಮ ನಿರೂಪಿಸಿದರು.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ

Suddi Udaya

ಜು.8 : ಬೆಳ್ತಂಗಡಿ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರಿಗೆ ಅಭಿನಂದನೆ

Suddi Udaya

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

Suddi Udaya

ಬೆಳ್ತಂಗಡಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದಲ್ಲಿ 50 ನೇ ವರ್ಷದ ಸಂಭ್ರಮಾಚರಣೆ

Suddi Udaya

ನ್ಯಾಯತರ್ಪು ಸ್ವಸಹಾಯ ಸಂಘದ ಲಾಭಾಂಶ ವಿತರಣೆ

Suddi Udaya

ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆ

Suddi Udaya
error: Content is protected !!