25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯಿಂದ ರೂ.6.96 ಲಕ್ಷ ವಂಚನೆ

ಬೆಳ್ತಂಗಡಿ: ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯೊಬ್ಬರು ಚಾಟಿಂಗ್ ಮೂಲಕ ವಿಶ್ವಾಸ ಗಳಿಸಿ, ಯುವಕನೋರ್ವನಿಂದ ರೂ.6.96 ಲಕ್ಷ ಪಡೆದು ವಂಚಿಸಿದ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ ಪ್ರಕರಣ ವರದಿಯಾಗಿದೆ.


ಬರಾಯ ಕನ್ಯಾಡಿ ಗ್ರಾಮದ ಗುರಿಪಳ್ಳ ಎನೀರುಪಲ್ಕೆ ನಿವಾಸಿ, ಸತೀಶ್ ಗೌಡ ಎಂಬವರು ವಂಚನೆಗೆ ಒಳಗಾದ ಯುವಕರಾಗಿದ್ದಾರೆ. ಸತೀಶ್ ಗೌಡ ಅವರು ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಫೇಸ್‌ಬುಕ್ ಮೂಲಕ ಮಹಿಳೆಯೋರ್ವರ ಪರಿಚಯವಾಗಿತ್ತು. ಈ ಮಹಿಳೆ ಚಾಟಿಂಗ್ ಮೂಲಕ ಸತೀಶ್ ಗೌಡರವರ ವಿಶ್ವಾಸವನ್ನು ಗಳಿಸಿ, ವಿವಿಧ ಕಾರಣಗಳನ್ನು ನೀಡಿ, ಬೇರೆ, ಬೇರೆ ಖಾತೆಗಳಿಗೆ ಒಟ್ಟು ರೂ.6,96,500 ಹಣವನ್ನು ಪಡೆದು ವಂಚಿಸಿರುವುದಾಗಿ ಸತೀಶ್ ಗೌಡ ಅವರು ನೀಡಿದ ದೂರಿನಂತೆ ದ.ಕ.ಜಿಲ್ಲಾ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ.33/2023 ಕಲಂ : 66(ಅ) 66 (ಆ)ಯಂತೆ ಪ್ರಕರಣ ದಾಖಲಾಗಿದೆ.

Related posts

ವಾರದ ಸಂತೆ ಮಾರುಕಟ್ಟೆಗೆ ಮೀಸಲಿರಿಸಿದ ಜಮೀನನ್ನು ಸ್ವಾಧೀನಪಡಿಸಿಕೊಂಡ ತಣ್ಣೀರುಪಂತ ಗ್ರಾ.ಪಂ.

Suddi Udaya

ಬಂದಾರು ಗ್ರಾಮ ಓಟೆಚ್ಚಾರಿನಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಮತ್ತು ಸೊತ್ತುಗಳಿಗೆ ಹಾನಿ

Suddi Udaya

ಬೆಳ್ತಂಗಡಿ: ಟೆಲಿಗ್ರಾಮ್ ಆಪ್ ಮೂಲಕ ಹಣ ವರ್ಗಾಹಿಸಿ ಮೋಸ: ಓಡಿಲ್ನಾಳ ನಿವಾಸಿ ಸುರೇಶ್ ನಾಯ್ಕ ರಿಗೆ ರೂ. 3.46 ಲಕ್ಷ ವಂಚನೆ

Suddi Udaya

ಗೋಳಿಯಂಗಡಿ ಮಿನ್ಹಾಜುಲ್ ಹುದಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ವಿವಾಹ ಕಾರ್ಯಕ್ರಮ

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆ: ಕಲಾನಿಕೇತನ ಡಾನ್ಸ್ ಪೌಂಡೇಶನ್ ಬೆಳ್ತಂಗಡಿ ಘಟಕಕ್ಕೆ ಶೇ. 100 ಫಲಿತಾಂಶ

Suddi Udaya

ಪಟ್ರಮೆ: ರಸ್ತೆ ಅಭಿವೃದ್ದಿಗಾಗಿ ಹೋರಾಟ ಸಮಿತಿ ರಚನೆ

Suddi Udaya
error: Content is protected !!