September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದಿಂದ ಆರೋಗ್ಯ ಇಲಾಖೆ ನೌಕರರಿಗೆ ಉಚಿತ ಸಮವಸ್ತ್ರ ವಿತರಣೆ

ಬೆಳ್ತಂಗಡಿ ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ. 46ಜನ ಡಿ ದರ್ಜೆ ನೌಕರರಿಗೆ ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿ ಇದರ ವತಿಯಿಂದ ಸಮವಸ್ತ್ರಗಳನ್ನು ಉಚಿತವಾಗಿ ಅ.30 ರಂದು ನೀಡಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ನಿವೃತ್ತಿಯಾಗುತ್ತಿರುವ ಶ್ರೀಮತಿ ಕಮಲ ಹಾಗೂ ವರ್ಗಾವಣೆಯಾದ ಶ್ರೀಮತಿ ಬಿ ರಶ್ಮಿ ಅವರನ್ನು ಗೌರವಿಸಲಾಯಿತು.

ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಬೆಂಗಳೂರು ಇದರ ಜಂಟಿ ಕಾರ್ಯದರ್ಶಿ ಜಯಕೀರ್ತಿ ಜೈನ್, ಸಮುದಾಯ ಆರೋಗ್ಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ/ಚಂದ್ರಕಾಂತ್, ಸಹಕಾರಿ ಸಂಘದ ಉಪಾಧ್ಯಕ್ಷ ಚಿದಾನಂದ ಹೂಗಾರ್, ನಿರ್ದೇಶಕರಾದ ಚಂದ್ರಶೇಖರ್, ಅಬ್ದುಲ್ ರಝಕ್, ಸಲಹೆಗಾರರಾದ ವಸಂತ ಸುವರ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವತ್ಸಲ ಜ್ಯೋತಿರಾಜ್, ಸಹಕಾರಿ ಸಂಘದ ನಿರ್ದೇಶಕರು, ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ತಾಲೂಕು ಆಡಳಿತ ಸೌಧ ದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

Suddi Udaya

ಉಜಿರೆ: ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘದ ನಿರ್ದೇಶಕರುಗಳ ಅವಿರೋಧ ಆಯ್ಕೆ

Suddi Udaya

ಕೆದ್ದುವಿನಲ್ಲಿ ಅನಾಥವಾಗಿದ್ದ ಬಾಡಜ್ಜನಿಗೆ ಆಶ್ರಯ ಕಲ್ಪಿಸಿದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆ

Suddi Udaya

ನಾರಾವಿ: ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ

Suddi Udaya
error: Content is protected !!