23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆಯಿಂದ ಧರ್ಮಸ್ಥಳಕ್ಕೆ ಧರ್ಮಸಂರಕ್ಷಣ ಪಾದಯಾತ್ರೆ: 1,46,000 ಭಕ್ತಾದಿಗಳು ಧರ್ಮಸಂರಕ್ಷಣೆ ಯಾತ್ರೆಯ ದಿನ ಅನ್ನಪ್ರಸಾದ ಸ್ವೀಕರಿಸಿರುವುದು ವಿಶೇಷ: ಶಶಿಧರ ಶೆಟ್ಟಿ, ನವಶಕ್ತಿ

ಉಜಿರೆ:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಸಂರಕ್ಷಣೆಯ ಸದುದ್ದೇಶದಿಂದ ‘ಧರ್ಮಸಂರಕ್ಷಣ ಸಮಿತಿ’ಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ಕ್ಷೇತ್ರದ ಭಕ್ತರು ಕೈಗೊಂಡ ‘ಧರ್ಮಸಂರಕ್ಷಣ ಯಾತ್ರೆ’ ಮತ್ತು ‘ಪಾದಯಾತ್ರೆ’ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಧರ್ಮಜಾಗೃತಿ ಸಮಿತಿ ಸಂಚಾಲಕ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಲ್ಲೂರಿನಿಂದ ಮೊದಲ್ಗೊಂಡು ಮಂಗಳೂರಿನ ಕದ್ರಿ ದೇವಸ್ಥಾನ, ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಬಂದ “ಧರ್ಮಸಂರಕ್ಷಣ ರಥ”ವನ್ನು ಉಜಿರೆಯಲ್ಲಿ ಧರ್ಮಸಂರಕ್ಷಣ ಮತ್ತು ಧರ್ಮಜಾಗೃತಿ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಎದುರುಗೊಂಡರು. ಇವರನ್ನು ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಕ್ಷೇತ್ರದ ಭಕ್ತರು ಕೂಡಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲಕ್ಷದ ಸಂಖ್ಯೆಯಲ್ಲಿ ಪಾದಯಾತ್ರೆ ಮಾಡಿಕೊಂಡು ಬಂದಿರುವುದು ಹಾಗೂ ತಮ್ಮ ಧರ್ಮಕ್ಷೇತ್ರದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ಸಾರಿರುವುದು ಯಾತ್ರೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದವರು ತಿಳಿಸಿದರು.

ಈ ಯಾತ್ರೆಗೆ ಭಕ್ತಿಪೂರ್ವಕ ಆಶೀರ್ವಾದಗಳನ್ನಿತ್ತು ಹಾರೈಸಿದ ಮತ್ತು ಭಾಗವಹಿಸಿದ ಸ್ವಾಮೀಜಿಗಳೆಲ್ಲರಿಗೂ ನಮನಗಳು, ಮಾರ್ಗದರ್ಶನ ನೀಡಿ, ಮುನ್ನಡೆಸಿದ ಅಪ್ಪಣ್ಣ ಹೆಗ್ಡೆ ಬಸ್ರುರು, ಜನಾರ್ದನ ಸ್ವಾಮಿ ದೇವಳದ ಅನುವಂಶಿಕ ಮೊಕ್ತೇಸರರಾದ ಶರತ್ ಕೃಷ್ಟ ಪಡ್ವೇಟ್ನಾಯ ಇವರೆಲ್ಲರ ಶ್ರಮಕ್ಕೆ ಯಾತ್ರೆಯ ಯಶಸ್ಸಿನ ರೂಪದ ಶ್ರಮ ಸಂದಿದೆ.

ಪಕ್ಷಬೇಧವಿಲ್ಲದೆ ಪಾಲ್ಗೊಂಡು ಬೆಂಬಲ ನೀಡಿದ ಎಲ್ಲಾ ಲೋಕಸಭಾ ಸದಸ್ಯರುಗಳು ಮತ್ತು ಶಾಸಕರುಗಳಿಗೆ, ಸಹಕಾರ ನೀಡಿದ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಪೊಲೀಸ್, ಹೋಮ್ ಗಾರ್ಡ್-ನ ಸರ್ವ ಸಿಬ್ಬಂದಿಗೆ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ. ಇವರ ಜೊತೆ ಯಾತ್ರೆಯನ್ನು ಮುನ್ನಡೆಸಿದ ಹಿರಿಮೆ ಹೊತ್ತ ವಸಂತ ಗಿಳಿಯಾರ್, ರಾಕೇಶ್ ಶೆಟ್ಟಿ ಮತ್ತು ಅವರ ತಂಡಕ್ಕೆ ಸಮಿತಿ ಕೃತಜ್ಞತೆ ಸಲ್ಲಿಸುತ್ತಿದೆ ಎಂದರು.

ಯಾತ್ರೆಯುದ್ದಕ್ಕೂ ಅದರ ವ್ಯವಸ್ಥೆಯ ಚುಕ್ಕಾಣಿ ಹೊತ್ತು ಸಹಕರಿಸಿದ ಬೆಳ್ತಂಗಡಿ, ಉಜಿರೆ ಮತ್ತು ಧರ್ಮಸ್ಥಳದ ಉದ್ಯಮಿ ಮತ್ತು ವರ್ತಕರಿಗೆ, ಟ್ರಾಫಿಕ್ ವ್ಯವಸ್ಥೆಯಲ್ಲಿ ಕೈ ಜೋಡಿಸಿದ ಬದುಕು ಕಟ್ಟೋಣ ಬನ್ನಿ ಮತ್ತು ಶೌರ್ಯ ತಂಡಗಳಿಗೆ, ಊಟದ ವ್ಯವಸ್ಥೆಯಲ್ಲಿ ಸಹಕರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರ್ವ ಸಿಬ್ಬಂದಿ ಮತ್ತು ಸದಸ್ಯರಿಗೆ, ವಸತಿ ವ್ಯವಸ್ಥೆಯಲ್ಲಿ ನೆರವಾದ ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಯ ಶಾಲಾ-ಕಾಲೇಜುಗಳ ಸಿಬ್ಬಂದಿಗೆ ಸಮಿತಿ ಆಭಾರಿಯಾಗಿದ್ದೇವೆ.ಜೊತೆಗೆ ಪತ್ರಿಕಾ ಮತ್ತು ದೃಶ್ಯ ಮಾಧ್ಯಮದ ಮಿತ್ರರಿಗೆ, ಸ್ವಯಂಸೇವಕರಾಗಿ ಸಹಕರಿಸಿದ ವಿದ್ಯಾರ್ಥಿಗಳಿಗೆ, ಉಜಿರೆ ಹಾಗೂ
ಧರ್ಮಸ್ಥಳ ಪಂಚಾಯತ್ ಗಳ ಅಧಿಕಾರಿಗಳು, ಪದಾಧಿಕಾರಿಗಳು, ಸಿಬ್ಬಂದಿಗೆ ಪಾದಯಾತ್ರಿಗಳಿಗೆ ಧರ್ಮಸ್ಥಳ ದೇವಾಲಯದ
ಸರ್ವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸರ್ವ ನಾಗರಿಕರಿಗೆ ಕೃತಜ್ಞತೆಗಳು.

ಯಾತ್ರೆಯ ಯಶಸ್ಸಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಧರ್ಮಜಾಗೃತಿ ಸಮಿತಿಯು ಹೃದಯಪೂರ್ವಕ ಅಭಿನಂದನೆಗಳನ್ನು ಈ ಮೂಲಕ ಸಲ್ಲಿಸುತ್ತಿದೆ ಎಂದಿದ್ದಾರೆ.

ಬಾಕ್ಸ್
1,46,000 ಭಕ್ತಾದಿಗಳು ಧರ್ಮಸಂರಕ್ಷಣೆ ಯಾತ್ರೆಯ ದಿನ ಅನ್ನಪ್ರಸಾದ ಸ್ವೀಕರಿಸಿರುವುದು ವಿಶೇಷ. ಮುಖ್ಯವಾಗಿ ಯಾತ್ರೆಯ ಸದುದ್ದೇಶವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಮಿತಿಯ ಕರೆಗೆ ಓಗೊಟ್ಟು ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ಭಕ್ತಿಪೂರ್ವಕ ಪ್ರಣಾಮಗಳು.

  • ಶಶಿಧರ ಶೆಟ್ಟಿ, ನವಶಕ್ತಿ, ಗುರುವಾಯನಕೆರೆ ಸಂಚಾಲಕರು, ಧರ್ಮಜಾಗೃತಿ ಸಮಿತಿ

Related posts

ತಾಲೂಕು ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿ: ಶ್ರೀ ಧ.ಮಂ. ಆಂ.ಮಾ. ಶಾಲೆಗೆ ಹಲವು ಪ್ರಶಸ್ತಿಗಳು

Suddi Udaya

ಗಡಾಯಿಕಲ್ಲು ಚಾರಣಕ್ಕೆ ಮುಂದಿನ ಆದೇಶದವರೆಗೆ ನಿಷೇಧ

Suddi Udaya

ನಡ: ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ

Suddi Udaya

ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ

Suddi Udaya

ಮದ್ದಡ್ಕ: ಅಂಬುಲೆನ್ಸ್ ಮತ್ತು ಆಟೋ ರಿಕ್ಷಾ ಡಿಕ್ಕಿ: ಚಾಲಕರು ಪ್ರಾಣಾಪಾಯದಿಂದ ಪಾರು

Suddi Udaya

ಗರ್ಡಾಡಿ: ಗಾಳಿ ಮಳೆಗೆ ಮನೆಗೆ ಮರ ಬಿದ್ದು ಅಪಾರ ಹಾನಿ

Suddi Udaya
error: Content is protected !!