24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ,(ಸಿ.ಬಿ.ಎಸ್.ಇ) ಕನ್ನಡ ರಾಜ್ಯೋತ್ಸವ

ಉಜಿರೆ : “ಮಾತೃಭಾಷೆ ಮತ್ತು ರಾಜ್ಯ ಭಾಷೆ ಎರಡೂ ಭಾಷೆಗಳನ್ನು ಸಮಾನವಾಗಿ ಕಾಣಬೇಕು. ನಮ್ಮ ಜೀವನದಲ್ಲಿ ವಿದ್ಯೆಯ ಜೊತೆಗೆ ವಿನಯವು ಮುಖ್ಯ, ವಿನಯವಿಲ್ಲವಾದಲ್ಲಿ ವಿದ್ಯೆಯು ವ್ಯರ್ಥವಾಗುತ್ತದೆ.” ಎಂದು ಎಸ್.ಡಿ.ಎಮ್ ಪದವಿ ಪೂರ್ವ ಕಾಲೇಜು, ಉಜಿರೆಯ ಕನ್ನಡ ಉಪನ್ಯಾಸಕರಾದ ಮಹಾವೀರ್ ಜೈನ್ ಹೇಳಿದರು.

 ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ,(ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ''ಕರ್ನಾಟಕ ೫೦ರ ಸಂಭ್ರಮ" ಎಂಬ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಜಿಲ್ಲೆಗಳ ವೇಷಭೂಷಣ, ಸಮೂಹ ಗಾಯನ, ಕಗ್ಗ, ವಚನ, ಕಥೆ, ಕವನಗಳ ಪ್ರಸ್ತುತಿ, ಹುಲಿ ಕುಣಿತ, ನೃತ್ಯ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯಕ್ ಕೆ. ಜಿ ವಹಿಸಿದ್ದರು. ವಿದ್ಯಾರ್ಥಿಗಳಾದ ತನುಶ್ರೀ ಮತ್ತು ಸಮ್ಮೇದ್ ಕಾರ್ಯಕ್ರಮ ನಿರೂಪಿಸಿ, ಪೃಥ್ವಿ ಸ್ವಾಗತಿಸಿ, ವಂಶಿ ವಂದಿಸಿದರು.

Related posts

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಾಂಸ್ಕೃತಿಕ ವೈಭವ

Suddi Udaya

ಮುಂಡಾಜೆ: ಚಿತ್ಪಾವನ ಸಂಘಟನೆಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುಶ್ಮಾ ಶಶಾಂಕ ಭಿಡೆ

Suddi Udaya

ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ರವರಿಂದ ಮತ ಚಲಾವಣೆ

Suddi Udaya

ಉಜಿರೆ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ ವನಿತಾ ವಿ.ಶೆಟ್ಟಿ, ಕಾರ್ಯದರ್ಶಿಯಾಗಿ ಸುದೇಶ್ ಶೆಟ್ಟಿ ಆಯ್ಕೆ

Suddi Udaya

ಬಳಂಜ: ಶ್ರೀ ಶಾರದೋತ್ಸವದ ಅಂಗವಾಗಿ ವಾಲಿಬಾಲ್ ಪಂದ್ಯಾಟ, ಯುವ ಉದ್ಯಮಿ ರಾಕೇಶ್ ಹೆಗ್ಡೆಯವರಿಂದ ಕ್ರೀಡಾಂಗಣ ಉದ್ಘಾಟನೆ

Suddi Udaya

ಮಚ್ಚಿನ: ಮುಡಿಪಿರೆ ರಸ್ತೆ ದುರಸ್ತಿ

Suddi Udaya
error: Content is protected !!