ಬೆಳ್ತಂಗಡಿ: ‘ ಉನ್ನತ ಶಿಕ್ಷಣ ಪಡೆದು, ಸಂಶೋಧನಾ ಕ್ಷೇತ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳಿವೆ. ಬಯೋ ಕೆಮಿಸ್ಟ್ರಿ ಅಧ್ಯಯನದಲ್ಲಿ ರಕ್ತದಲ್ಲಿರುವ ಸುಮಾರು ಎರಡು ಸಾವಿರ ಪ್ರೊಟೀನ್ ಗಳ ಗುಣಲಕ್ಷಣಗಳನ್ನು ಅರಿತು ದೇಹದ ಕಾಯಿಲೆಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಆವಿಷ್ಕಾರವಾಗಿದೆ. ಬಯೋಪ್ಸಿ ಮಾಡದೆ ದೇಹದೊಳಗಿನ ರೋಗ ಪತ್ತೆ ಮಾಡುವ ವಿಧಾನಕ್ಕೆ ಇದು ಪೂರಕವಾಗಿದೆ. ಜೀನ್ ಗಳ ರಚನೆ, ಪ್ರೊಟೀನ್ ಗಳ ರಚನೆ ಮೊದಲಾದ ಕ್ಷೇತ್ರಗಳಲ್ಲಿ ಇತ್ತೀಚಿನ ವೈದ್ಯಕೀಯ ಅಧ್ಯಯನ ಗಳು ಸೂಕ್ಷ್ಮಾತಿಸೂಕ್ಷ್ಮ ವಾಗಿ ಬೆಳೆಯುತ್ತಿವೆ ‘. ಎಂದು ಅಮೆರಿಕಾದ ಮೇರಿ ಲ್ಯಾಂಡ್ ನ ಪ್ರೋಟಿಯೋಮಿಕ್ಸ್ ಇಂಕಂಪ್ಲೀಟ್ ಒಮಿಕ್ಸ್ ಸಂಶೋಧನಾ ಕೇಂದ್ರದ ಉಪಾಧ್ಯಕ್ಷರಾದ ಡಾ. ರಘೋತ್ತಮ ಅವರು ಹೇಳಿದರು. ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಮೆರಿಕಾದ ಡೆಲ್ವಾರೆ ಯೂನಿವರ್ಸಿಟಿ ಯ ನ್ಯೂರಾಲಜಿಕ್ ಫಿಸಿಕಲ್ ಥೆರಪಿ ವಿಭಾಗದ ನಿರ್ದೇಶಕರಾದ ಡಾ. ಸೌಮ್ಯ ಅವರು ಮಾತನಾಡಿ ‘ ಶಸ್ತ್ರ ಚಿಕಿತ್ಸೆಯ ನಂತರ ದೇಹವನ್ನು ಪುನಃ ಸಾಮಾನ್ಯ ಸ್ಥಿತಿಗೆ ತರುವಲ್ಲಿ ಫಿಸಿಯೋಥೆರಪಿ ಮಹತ್ತ್ವವನ್ನು ವಿವರಿಸಿದರು.
ಸಂವಾದದ ಬಳಿಕ ವಿಜ್ಞಾನಿಗಳನ್ನು ಗೌರವಿಸಲಾಯಿತು.
ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ , ಆಡಳಿತಾಧಿಕಾರಿ ಪುರುಷೋತ್ತಮ್ , ಕ್ಯಾಂಪಸ್ ಮನೇಜರ್ ಶಾಂತಿರಾಜ್ ಜೈನ್, ಆಡಳಿತ ಮಂಡಳಿಯ ಸಹನಾ ಜೈನ್ , ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.