23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದ.ಕ. ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ

ಬೆಳ್ತಂಗಡಿ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ 2023-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಅ.31 ರಂದು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಆಡಿಟೋರಿಯಂನಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್. ಕೆ. ಪಿ. ಎ. ದಕ್ಷಿಣ ಕನ್ನಡ ಉಡುಪಿ ಸಂಚಾಲಕರಾದ ಕರುಣಾಕರ ಕಾನ0ಗಿ ನೆರವೇರಿಸಿದರು ಎಸ್. ಕೆ. ಪಿಎ .ಕನ್ನಡ-ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಅಧ್ಯಕ್ಷ ತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ., ಜಿಲ್ಲಾ ಕಟ್ಟಡ ಸಮಿತಿಯ ಅಧ್ಯಕ್ಷ ಆನಂದ ಎನ್ ಬಂಟ್ವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಎಸ್.ಕೆ.ಪಿ.ಎ ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಎಸ್.ಕೆ.ಪಿ.ಎ ಬೆಳ್ತಂಗಡಿ ವಲಯದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಸುವರ್ಣ, ಗೌರವ ಉಪಸ್ಥಿತರಾಗಿ ಪಾಲ್ಗೊಂಡಿದ್ದರು.


ಕಾರ್ಯಕ್ರಮದಲ್ಲಿ ಗುರುವಾಯನಕೆರೆಯ ವೈಭವ್ ಮಾಲಕರು ಮತ್ತು ದಾನಿಗಳಾದ ಸೀತರಾಮ ಬಿ.ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಸುಬ್ರಹ್ಮಣ್ಯ ಕೆ.ಜಿ, ಅಧ್ಯಕ್ಷರಾದ ಅಶೋಕ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾದ ಹರ್ಷ ಬಳ್ಳಮಂಜ, ಕೋಶಾಧಿಕಾರಿಯಾದ ಹರೀಶ್ ಕೊಳ್ತಿಗೆ, ನಿಯೋಜಿತ ಗೌರವಾಧ್ಯಕ್ಷರಾದ ಜಗದೀಶ ಜೈನ್, ನಿಯೋಜಿತ ಅಧ್ಯಕ್ಷರಾದ ಸಿಲ್ವಿಯಾ ಕೊರ್ಡೇರೋ ಉಪಸ್ಥಿತರಿದ್ದರು.

ಸಂಘದ ಸ್ಥಾಪಕಧ್ಯಕ್ಷ ಪಾಲಾಕ್ಷ ಪಿ ಸುವರ್ಣ ಸ್ವಾಗತಿಸಿ, ಚಂದ್ರಹಾಸ ನಿರೂಪಿಸಿ, ನಿಯೋಜಿತ ಪ್ರಧಾನ ಕಾರ್ಯದರ್ಶಿ ವಿಜಯ ಹೆಚ್. ಪ್ರಸಾದ್ ಧನ್ಯವಾದವಿತ್ತರು.

Related posts

ಧರ್ಮಸ್ಥಳ : ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕಾಮಧೇನು ಸಂಘದ ಸದಸ್ಯರಿಂದ ಆಟಿಡೊಂಜಿ ದಿನ

Suddi Udaya

ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ

Suddi Udaya

ಗುರುವಾಯನಕೆರೆ: ಶಕ್ತಿನಗರ ನಿವಾಸಿ ರಮೇಶ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಗೇರು ಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಶಿಲನ್ಯಾಸ

Suddi Udaya

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಾಹನಗಳ ಬ್ಯಾಟರಿ ಹಾಗೂ ಡಿಸೇಲ್ ಕಳ್ಳತನ

Suddi Udaya

ಆರಂಬೋಡಿ: ಪಾಣಿಮೇರುನಲ್ಲಿ ಅಕ್ರಮ ಮರಳು ಸಾಗಾಟ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!