April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ : ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯಾರಂಭ

ಕಲ್ಮಂಜ: ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ ಕಾರ್ಯಾರಂಭ ನವೆಂಬರ್ 1,2023 ನೇ ಬುಧವಾರ ನೆರವೇರಿತು.

ಅ ಮೂಲಕ ದೇವರಗುಡ್ಡೆ ಭಾಗದ ಜನರ ಬಹುವರ್ಷಗಳ ಕನಸು ಈಡೇರಿದಂತೆ ಆಗಿದೆ.ಸಂಘದ ಅಧ್ಯಕ್ಷ ರಮೇಶ್ ಗೌಡ ಗುಲ್ಲೋಡಿಯವರು ಹಾಲು ಶೇಖರಣೆ ಮೂಲಕ ಕಾರ್ಯಾರಂಭ ಮಾಡಿದರು.

ಉಪಾಧ್ಯಕ್ಷರಾದ ಸೂರ್ಯನಾರಾಯಣ ಹೊಳ್ಳ ಮತ್ತು ದ.ಕ.ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಸತೀಶ್ ರಾವ್ ಅವರು ಸದಸ್ಯರಿಗೆ ಷೇರು ಪ್ರಮಾಣ ಪತ್ರ ಹಂಚಿಕೆ ಮಾಡಿದರು.

ಈ ಸಂದರ್ಭ ಒಕ್ಕೂಟದ ವಿಸ್ತರಣಾಧಿಕಾರಿ ಯಮುನಾ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಚಿನ್ ಗೌಡ ಕಲ್ಮಂಜ ಹಾಗೂ ನಿರ್ದೇಶಕರಾದ ಶಿವಪ್ರಸಾದ್,ರಾಧಾಕೃಷ್ಣ ಗೌಡ,ಮಂಜುನಾಥ್ ಗುಡಿಗಾರ್,ಗೀತಾ ನಾಯ್ಕ,ಪುಷ್ಪವತಿ,ಶ್ರೀನಿವಾಸ ಗೌಡ,ಗಂಗಾಧರ ಗೌಡ,ದೇಜಪ್ಪ ಪೂಜಾರಿ,ರಾಘವೇಂದ್ರ ವಿಷ್ಣು ನಾಯ್ಕ್ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಮಲ,ಗಣ್ಯರಾದ ಪೃಥ್ವಿಶ್ ಧರ್ಮಸ್ಥಳ,ಕೃಷ್ಣಪ್ಪ ಗುಡಿಗಾರ್,ತುಕಾರಾಮ ಸಾಲಿಯಾನ್,ಸುಂದರ ಗೌಡ ಹಾಗೂ ಸಂಘದ ಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ಸಹಕಾರಿ ಸಂಘದ  ವಾರ್ಷಿಕ ಮಹಾಸಭೆ

Suddi Udaya

ಚಂದ್ರಯಾನ -3 ಯಶಸ್ವಿಗಾಗಿ ಕಳೆಂಜ ಶ್ರೀ ಸದಾಶಿವೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಕರ್ನಾಟಕ ಜಾನಪದ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ರಚನೆ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಮಿತ್ತಬಾಗಿಲು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಿಶೇಷ ತರಗತಿ ಕಾರ್ಯಕ್ರಮದ ಉದ್ಘಾಟನೆ

Suddi Udaya

ಕರುಣಾಶ್ರಯ ಸೇವಾ ಟ್ರಸ್ಟ್‌ನಿಂದ ವಾರದ ಒಂದು ದಿನದ ಸೇವಾ ಕಾರ್ಯಕ್ರಮ: ಗುಂಡೂರಿ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ದಿನಸಿ ಸಾಮಾಗ್ರಿ ವಿತರಣೆ

Suddi Udaya
error: Content is protected !!