24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೌಟುಂಬಿಕ ವಿಚಾರದಲ್ಲಿ ಕಲಹ: ಮಾವನಿಗೆ ಸ್ಕೂಟರ್ ನಲ್ಲಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿದ ಅಳಿಯ: ಮಿತ್ತಬಾಗಿಲು ಕಂಬಳದಡ್ಡದಲ್ಲಿ ನಡೆದ ಘಟನೆ

ಬೆಳ್ತಂಗಡಿ: ಕೌಟುಂಬಿಕ ವಿಚಾರದಲ್ಲಿ ಸ್ವತಹಾ ಅಳಿಯನೇ ಮಾವನಿಗೆ ಸ್ಕೂಟರ್ ನಲ್ಲಿ ಡಿಕ್ಕಿ ಹೊಡೆಸಿ ಕೊಲೆ ಯತ್ನ ನಡೆಸಿದ ಘಟನೆ ಮಿತ್ತಬಾಗಿಲು ಕಂಬಳದಡ್ಡ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ‌‌ಕಂಬಳದಡ್ಡ ನಿವಾಸಿ ಕೆ.ಹೆಚ್ ಇಬ್ರಾಹಿಂ (60ವ) ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರ ಸ್ವಂತ ಅಳಿಯ ಮುಹಮ್ಮದ್ ಶಾಫಿ ಎಂಬವರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ವಿವರ: ಮಿತ್ತಬಾಗಿಲು ಗ್ರಾಮದ ನಿವಾಸಿ ಮಹಮ್ಮದ್‌ ರಫೀಕ್ ಎಂಬವರು ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನಲ್ಲಿ ನ .2 ರಂದು ತನ್ನ ತಂದೆ ಕೆ ಎಚ್‌ ಇಬ್ರಾಹಿಂ ಶಾಫಿ (60ವ) ರವರು, ಕಾಜೂರು ಮಸೀದಿಯಲ್ಲಿರುವ ಕಾರ್ಯಕ್ರಮದ ನಿಮಿತ್ತ, ಮಕ್ಕಳು ಹೆಂಗಸರನ್ನು ಅವರ ಅಕ್ಕನ ಮನೆಗೆ ಬಿಡಲು ಹೋದವರು, ರಾತ್ರಿಯವರೆಗೆ ಮನೆಗೆ ಬಾರದೇ ಇರುವುದರಿಂದ ಈ ಬಗ್ಗೆ ವಿಚಾರಿಸಲು, ಸ್ಕೂಟರಿನಲ್ಲಿ ಕಂಬಳದಡ್ಡು ಎಂಬಲ್ಲಿಗೆ ತಲುಪಿದಾಗ, ಸ್ವಲ್ಪ ದೂರದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಸ್ಕೂಟರೊಂದು ವ್ಯಕ್ತಿಯೊಬ್ಬರಿಗೆ ಡಿಕ್ಕಿಯಾಗಿ ಬೊಬ್ಬೆ ಕೇಳುತ್ತಿದ್ದು, ಕೂಡಲೇ ಅಲ್ಲಿಗೆ ಹೋಗಿ ನೋಡಿದಾಗ ,ನನ್ನ ತಂದೆ ಡಾಮಾರು ರಸ್ತೆಯಲ್ಲಿ ಬಿದ್ದಿದ್ದು, ನನ್ನ ತಂಗಿಯ ಗಂಡನಾದ ಮಹಮ್ಮದ್‌ ಶಾಫಿ, ತನ್ನ ತಂದೆಗೆ ಕೈಯಿಂದ ಹೊಡೆಯುತ್ತಿದ್ದು, ನನ್ನನ್ನು ನೋಡಿ ಆರೋಪಿಯು ನನ್ನ ಸ್ಕೂಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿ ಮಹಮ್ಮದ್‌ ಶಾಫಿಯು ತಂದೆಯವರನ್ನು ಸ್ಕೂಟರ್‌ ನಿಂದ ಡಿಕ್ಕಿ ಹೊಡೆದು ಕೊಲೆ ಮಾಡುವ ಪ್ರಯತ್ನ ಮಾಡಿರುವುದಾಗಿ ಆರೋಪಿಸಿ ಬೆಳ್ತಂಗಡಿ ಪೊಲೀಸ್ ರಿಗೆ ದೂರು ನೀಡಿದ್ದಾರೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 109/2023 ಕಲಂ; 279,326,323,307 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು ,ತನಿಖೆ ನಡೆಸಲಾಗುತ್ತಿದೆ.

Related posts

ಮಡಂತ್ಯಾರು: ರಚನಾ ಸಿಲ್ಕ್ ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

Suddi Udaya

ಬೆಳ್ತಂಗಡಿ ತಾ.ಪಂ. ನಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾನ ಅರಿವು ಕಾರ್ಯಕ್ರಮ ಮತ್ತು ಮತದಾನ ಜಾಗೃತಿ ಜಾಥಾ

Suddi Udaya

ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಹಾಗೂ ಅರಣ್ಯ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Suddi Udaya

ಎಕ್ಸೆಲ್ ಗೆ ಎಸ್ ಡಿ ಎಂ ನ ಎಕ್ಸ್ ಪಿರಿಯ ವಿಜ್ಞಾನ ಮೇಳದಲ್ಲಿ ಚಾಂಪಿಯನ್ ಶಿಪ್

Suddi Udaya

ಬೆಳ್ತಂಗಡಿ: ಶ್ರೀ ಕ್ಷೇ.ಧ. ಗ್ರಾ. ಯೋಜನೆ ತಾಲೂಕು ಮಹಿಳಾ ಜ್ಞಾನವಿಕಾಸ ನೇತೃತ್ವದ್ಲಲಿ ಸೃಜನಶೀಲ ಕಾರ್ಯಕ್ರಮ

Suddi Udaya

ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬ

Suddi Udaya
error: Content is protected !!