ಕೊಕ್ಕಡ: ಬಯಲು ಆಲಯ ಖ್ಯಾತಿಯ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮವು ನ.3 ರಂದು ಸೌತಡ್ಕ ದೇವಸ್ಥಾನದಲ್ಲಿ ನಡೆಯಿತು.
ರೂ. 9.98 ಲಕ್ಷ ವೆಚ್ಚದಲ್ಲಿ ಕೆನರಾ ಬ್ಯಾಂಕ್ ನ ಅನುದಾನದಿಂದ ನೂತನವಾಗಿ ನಿರ್ಮಾಣಗೊಳ್ಳಲಿರುವ ಸೇವಾ ಕೌಂಟರ್ ಕಟ್ಟಡ ಕಾಮಗಾರಿಯ ಶಿಲಾನ್ಯಾಸ ಹಾಗೂ ದೇವಳದ ಭಕ್ತರಾದ ಉದಯರಾಜ್ ಪೆರ್ಮುದೆ ಇವರ ಸೇವಾರ್ಥ ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನವಾದ ಶಿಲಾಮಯ ಅಶ್ವತ್ಥ ಕಟ್ಟೆ ಕಾಮಗಾರಿಯ ಶಿಲಾನ್ಯಾಸವನ್ನು ದೇವಸ್ಥಾನದ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಹಾಗೂ ಸುಬ್ರಹ್ಮಣ್ಯ ತೋಡ್ತಿಲ್ಲಾಯ ನೇತೃತ್ವದಲ್ಲಿ ನೆರವೇರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ರೂ. 25,000/- ಕೊಕ್ಕಡ ಕೆನರಾ ಬ್ಯಾಂಕ್‌ನ (CSR FUND) ಅನುದಾನದಿಂದ ಸೌತಡ್ಕ “ಶಿಶು ಮಂದಿರದ ಮಕ್ಕಳಿಗೆ ಕಲಿಕಾ ಆಟಿಕೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಕೆನರಾ ಬ್ಯಾಂಕಿನ ನಿವೃತ್ತ ಡಿಜಿಎಮ್ ಉದಯ ಭಟ್, ಕೊಕ್ಕಡ ಬ್ಯಾಂಕಿನ ಮಾನೇಜರ್ ಅಂಕಿತ್, ಎಜಿಎಮ್ ನರೇಂದ್ರ ರೆಡ್ಡಿ, ನೆಲ್ಯಾಡಿ ಕೆನರಾ ಬ್ಯಾಂಕಿನ ಮಾನೇಜರ್ ವಿಪಿನ್, ಉದಯ್ ರಾಜ್ ಪೆರ್ಮುದೆ , ಆರ್.ಎಸ್ ಎಸ್ ಮುಖಂಡ ಕೃಷ್ಣ ಭಟ್ , ಮುಖ್ಯಕಾರ್ಯನಿರ್ವಾಹಣಾಧಿಕಾರಿ ದಯಾನಂದ ಹೆಗ್ಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೊಕ್ಕಡ ಸಹಕಾರಿ ಬ್ಯಾಂಕಿನ ಕುಶಾಲಪ್ಪ ಗೌಡ, ಕೊಕ್ಕಡ ಗ್ರಾ,ಪಂ. ಅಧ್ಯಕ್ಷೆ ಬೇಬಿ , ಉಪಾಧ್ಯಕ್ಷ ಪ್ರಭಾಕರ, ಸದಸ್ಯರು, ವ್ಯವಸ್ಥಾಪನ ಸಮಿತಿಯ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಸ್ವಾಗತಿಸಿದರು. ಪುರಂದರ ಕೆ ಕಡಿರ ಧನ್ಯವಾದವಿತ್ತರು.