ಶಿಶಿಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ .ಟ್ರಸ್ಟ್ ಬೆಳ್ತಂಗಡಿ ತಾಲೂಕು ಹೊಲಿಗೆ ತರಬೇತಿ ಕೇಂದ್ರವು ನ.2 ರಂದು ಶಿಶಿಲ ಗ್ರಾಮದ ನಾಗನಡ್ಕ ಸಮುದಾಯ ಭವನದಲ್ಲಿ ಉದ್ಘಾಟಿಸಲ್ಪಟ್ಟಿತು.
ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಶಿಶಿಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ್ ಮೂಡೆತ್ತಾಯ ನೆರವೇರಿಸಿ ಗ್ರಾಮೀಣ ಭಾಗದ ಮಹಿಳೆಯರು ಹೊಲಿಗೆ ತರಬೇತಿಯನ್ನು ಪಡೆದು ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶವನ್ನು ಮಾತೃಶ್ರೀ ಅಮ್ಮನವರು ನೀಡಿದ್ದು ಇದರ ಸದುಪಯೋಗವನ್ನು ಪಡೆಯುವಂತೆ ತಿಳಿಸಿದರು. ಶಿಶಿಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಧೀನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮ ಶುಭ ಹಾರೈಸಿದರು.
ಸಭೆಯಲ್ಲಿ ಸಮನ್ವಯಾಧಿಕಾರಿಗಳಾದ ಮಧುರ ಪ್ರಾಸ್ತವಿಕವಾಗಿ ಮಾತನಾಡಿದರು.
ಮೇಲ್ವಿಚಾರಕರಾದ ಶಶಿಕಲಾ ಅವರು ಒಬ್ಬ ಹೆಣ್ಣು ಸ್ವಾವಲಂಬಿಯಾಗಿ ಬದುಕುವುದರ ಬಗ್ಗೆ ಮತ್ತು ಹೊಲಿಗೆ ಕಲಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು. ಹೊಲಿಗೆ ತರಬೇತಿಯ ಶಿಕ್ಷಕಿಯಾದ ಗೀತಾ ರವರು ತರಬೇತಿಯ ನಿಯಮದ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿ ನೀಡಿದರು. ವೇದಿಕೆಯಲ್ಲಿ ಹೇವಾಜೆ ಒಕ್ಕೂಟ ಅಧ್ಯಕ್ಷರಾದ ಕೃಷ್ಣಪ್ಪರವರು ಉಪಸ್ಥಿತರಿದ್ದರು. ಹೇವಾಜೆ ಸೇವಾಪ್ರತಿನಿಧಿಯಾದ ರಶ್ಮಿತಾರವರು ಸ್ವಾಗತಿಸಿ, ಶಿಶಿಲ ಸೇವಾಪ್ರತಿನಿಧಿ ಗಾಯತ್ರಿಯವರು ಧನ್ಯವಾದವಿತ್ತರು.