23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ಎಕ್ಸೆಲ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

‘ ಸಾಹಿತ್ಯ, ಸಂಸ್ಕೃತಿ, ವ್ಯಾಪಾರ ವ್ಯವಹಾರ ಎಲ್ಲದರಲ್ಲೂ ಕನ್ನಡಿಗರು ಜಗತ್ತಿನಲ್ಲೇ ಅನನ್ಯ ಸಾಧನೆ ಮಾಡಿದ್ದಾರೆ ‘ ಎಂದು ವಿಶ್ರಾಂತ ಮುಖ್ಯೋಪಾಧ್ಯಾಯ, ಎಕ್ಸೆಲ್ ವಿದ್ಯಾ ಸಂಸ್ಥೆಗಳ ಕ್ಯಾಂಪಸ್ ಮನೇಜರ್ ಶಾಂತಿರಾಜ್ ಜೈನ್ ಹೇಳಿದರು. ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ‘ ಕನ್ನಡಿಗರ ಶೌರ್ಯ, ಸಾಹಸ ಮೆಚ್ಚಿಕೊಳ್ಳುವಂತೆ, ಔದಾರ್ಯ, ಸಜ್ಜನಿಕೆಗಳನ್ನು ಕೂಡಾ ನಾವು ಕೊಂಡಾಡ ಬೇಕಿದೆ ‘ ಎಂದವರು ಹೇಳಿದರು.

ವಿದ್ಯಾರ್ಥಿನಿಯರು ನಾಡು – ನುಡಿ ಹಿರಿಮೆ ಬಣ್ಣಿಸುವ ಹಾಡುಗಳನ್ನು ಹಾಡಿದರು.

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಎಕ್ಸೆಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಜಯರಾಂ ಸ್ವಾಗತಿಸಿ, ಉಪನ್ಯಾಸಕಿ ದಿಶಾ ಸಿ ಜೆ ವಂದಿಸಿದರು. ಉಪನ್ಯಾಸಕ ರಂಜಿತ್ ನಿರೂಪಿಸಿದರು.

Related posts

ಮಲ್ಲೊಟ್ಟು -ಕೊಯ್ಯೂರು ವಿದ್ಯುತ್ ಫೀಡರ್ ನಲ್ಲಿ ಪರಿಹಾರ ಕಾಣದ ವಿದ್ಯುತ್ ಸಮಸ್ಯೆ.

Suddi Udaya

ಪಾರೆಂಕಿ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿಯಿಂದ ಭಜಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಕರಾಯ: ಭಗವಾನ್ ಶಿರಡಿ ಸಾಯಿ ಸತ್ಯ ಸಾಯಿ ಸೇವಾ ಕ್ಷೇತ್ರದಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ನ.26- ನ.30: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಸಂತ ತೆರೇಸಾ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಉರುವಾಲು:32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya
error: Content is protected !!