24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಪಂಪ್‌ಸೆಟ್‌ಗಳು ಮತ್ತು ನೀರಿನ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ

ಬೆಳ್ತಂಗಡಿ : ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬೆಳ್ತಂಗಡಿ ( ಕೃಷಿ ಇಲಾಖೆ) ಯಲ್ಲಿ ಅ.31ರಂದು
“ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಮತ್ತು ಕರ್ನಾಟಕ ರಿನ್ಯೂವಬಲ್ ಎನರ್ಜಿ ಡೆವಲಪ್‌ಮೆಂಟ್ ಲಿಮಿಟೆಡ್ (KREDL) ಸಹಯೋಗದಲ್ಲಿ “ಸ್ಟಾರ್ ಲೇಬಲ್ ಹೊಂದಿರುವ ಮತ್ತು ವಿದ್ಯುತ್ ದಕ್ಷತೆಯುಳ್ಳ ಕೃಷಿ ಪಂಪ್‌ಸೆಟ್‌ಗಳು ಮತ್ತು ನೀರಿನ ಸಂರಕ್ಷಣೆ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಸುಮಾರು 98 ಜನ ರೈತರು ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದು,, ಪುರುಷ ಮತ್ತು ಮಹಿಳಾ ರೈತರು ಹಾಗೂ ಸಂಪನ್ಮೂಲ ವ್ಯಕ್ತಿಗಳು ದೀಪ ಬೆಳಗಿಸುವ ಮೂಲಕ ತರಬೇತಿ ಪ್ರಾರಂಭಗೊಂಡಿತು. ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥರು ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಶೈಲಜ ಎ.ಎನ್ ರವರು, ರೈತರು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸ್ವಾಗತಿಸಿದರು.

ಶಿವಮೊಗ್ಗದಿಂದ ( JNNCE | ಡಾ|| ಅಜ್ಜಣ್ಣ, ಉಡುಪಿಯಿಂದ ಡಾ|| ನಾರಾಯಣ ಶೆಣೈ ( MIT) ಹಾಗೂ SDMEC, ಉಜಿರೆಯಿಂದ ಡಾ|| ಸತ್ಯನಾರಾಯಣ, ಡಾ|| ಸುಬ್ರಹ್ಮಣ್ಯ, ಡ| ಕೃಷ್ಣಪ್ರಸಾದ್‌ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ರೈತರಿಗೆ ಬಹಳಷ್ಟು ಉಪಯುಕ್ತ ಮಾಹಿತಿ ನೀಡಿದರು. ಅಲ್ಲದೆ ಉಜಿರೆಯ ಶಿವಪ್ರಸಾದ್ ರವರು ಪಂಪ್ ಸೆಟ್ ದುರಸ್ಥಿ ಬಗ್ಗೆ ಪ್ರಾತ್ಯಕ್ಷತೆ ನೀಡಿದರು.

ತರಬೇತಿಯ ಅಂತ್ಯದಲ್ಲಿ ಕೃಷಿ ಅಧಿಕಾರಿ (ಪ್ರಭಾರ) ಆದ ಗಣೇಶ್ ರವರು ವಂದಿಸಿದರು.

Related posts

ತೋಟಾತ್ತಾಡಿ:ಜುಗಾರಿ ಅಡ್ಡೆಗೆ ಪೊಲೀಸರ ದಾಳಿ

Suddi Udaya

ಪುಂಜಾಲಕಟ್ಟೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕದ ಮಹಾಸಭೆ

Suddi Udaya

ಕರ್ನಾಟಕ ರಾಜ್ಯ ದಲಿತ ಹಕ್ಕು ಸಮಿತಿಯ ರಾಜ್ಯ ಸಮಿತಿಗೆ ಈಶ್ವರಿ ಪದ್ಮುಂಜ ಆಯ್ಕೆ

Suddi Udaya

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅ.8 ರಿಂದ ಅ.24 ರವರೆಗೆ ದಸರಾ ರಜೆ

Suddi Udaya

ಚಾರ್ಮಾಡಿ ಪರಿಸರದಲ್ಲಿ ಕಾಡಾನೆಗಳ ಹಾವಳಿ : ಕೃಷಿ ಹಾನಿ

Suddi Udaya

ಉಜಿರೆ ಗ್ರಾ.ಪಂ. ಅಮೃತ ಸಭಾಂಗಣ ಉದ್ಘಾಟನೆ

Suddi Udaya
error: Content is protected !!