September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಆಭರಣ ಜ್ಯುವೆಲರಿಗೆ ಐಟಿ ದಾಳಿ ಪ್ರಕರಣ: ಬೆಳ್ತಂಗಡಿ ಆಭರಣ ಶಾಪ್ ನ ಐಟಿ ದಾಳಿ ಮುಕ್ತಾಯ

ಬೆಳ್ತಂಗಡಿ : ಕರ್ನಾಟಕದಲ್ಲಿರುವ ಎಲ್ಲಾ ಆಭರಣ ಜ್ಯುವೆಲರಿ ಮಳಿಗೆ ಸಂಸ್ಥೆ ಮೇಲೆ ಅ.31 ರಿಂದ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆಯಲ್ಲಿ ತೊಡಗಿದ್ದರು. ಬೆಳ್ತಂಗಡಿಯ ಆಭರಣ ಜ್ಯುವೆಲರಿ ಶಾಪ್ ನಲ್ಲಿ ಸತತ ನಾಲ್ಕು ದಿನಗಳ ಕಾರ್ಯಾಚರಣೆ ನಡೆಸಿ ನ.4 ಬೆಳಗ್ಗಿನ ಜಾವ 2:30 ಕ್ಕೆ ಬೆಂಗಳೂರು ಐಟಿ ಕಚೇರಿಗೆ ಅಧಿಕಾರಿಗಳು ವಾಪಸ್ ಹೋಗಿದ್ದಾರೆ.

ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಭರಣಿ ಕಟ್ಟಡದಲ್ಲಿರುವ ಆಭರಣ ಚಿನ್ನದ ಮಳಿಗೆ ಮೇಲೆ ಎರಡು ಇನೋವಾ ಕಾರಿನಲ್ಲಿ ಬೆಂಗಳೂರು ಐಟಿ ಕಚೇರಿಯಿಂದ ಬಂದ ಚೈನೈ , ಆಂದ್ರಪ್ರದೇಶ, ತಮಿಳುನಾಡು, ಕೊಚ್ಚಿ ಸೇರಿದಂತೆ ಒಂಭತ್ತು ಜನ ಅಧಿಕಾರಿಗಳು ಅ.31 ರಂದು ಬೆಳಗ್ಗೆ 6 ಗಂಟೆಯಿಂದ ನ.3 ರ ರಾತ್ರಿವರೆಗೆ ಒಟ್ಟು ನಾಲ್ಕು ದಿನ ದಾಳಿ ಮಾಡಿ ಚಿನ್ನಾಭರಣ ಹಾಗೂ ದಾಖಲೆ ಪರಿಶೀಲನೆ ನಡೆಸಿದ್ದರು. ನಾಲ್ಕು ದಿನಗಳಿಂದ ಐಟಿ ದಾಳಿಯಿಂದ ಆಭರಣ ಜ್ಯುವೆಲರಿ ಶಾಪ್ ಬಂದ್ ಮಾಡಿ ಗ್ರಾಹಕರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು.

ಉಡುಪಿಯ ಆಭರಣ ಶಾಪ್ ಗಳಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮವಾಗಿ ಶೇಖರಿಸಿಟ್ಟ ಚಿನ್ನದ ಗಟ್ಟಿಯನ್ನು ಐಟಿ ಅಧಿಕಾರಿಗಳಿಗೆ ಪತ್ತೆಯಾಗಿದ್ದು. ಅಲ್ಲಿಯ ದಾಳಿ ಐದನೇ ದಿನಕ್ಕೆ ಮುಂದುವರಿದಿದೆ ಎಂದು ಐಟಿ ಮೂಲಗಳು ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಟೀಂ ಅಭಯಹಸ್ತ ಇದರ ಸಮಾಲೋಚನಾ ಸಭೆ

Suddi Udaya

ಕಾಶಿಪಟ್ಣ: ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Suddi Udaya

ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ:ವೇಣೂರು ಸರ್ಕಾರಿ ಪದವಿ ಪೂರ್ವ(ಪ್ರೌಢಶಾಲಾ ವಿಭಾಗ ) ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ನಾವೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ

Suddi Udaya

ಉರುವಾಲು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಹುಣ್ಸೆಕಟ್ಟೆ ಕಡೆಮಾರು ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ಮಹಾಪೂಜೆ

Suddi Udaya
error: Content is protected !!