ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ವಕೀಲರ ಸಂಘದ ನೇತೃತ್ವದಲ್ಲಿ – ವಸಂತ ಮರಕಡ ಅಧ್ಯಕ್ಷತೆಯ 2023-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ

ಬೆಳ್ತಂಗಡಿ: ವಕೀಲರ ಸಂಘ ಬೆಳ್ತಂಗಡಿ ಇದರ 2023-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನ. 4ರಂದು ಬೆಳ್ತಂಗಡಿ ಎಸ್.ಡಿ.ಎಂ ಕಲಾ ಭವನದಲ್ಲಿ ಜರುಗಿತು. ‌‌ಅಧ್ಯಕ್ಷತೆಯನ್ನು ದೇವರಾಜು ಎಚ್.ಎಂ. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ, ಬೆಳ್ತಂಗಡಿ ವಹಿಸಿದ್ದರು.

ಉದ್ಘಾಟನೆಯನ್ನು ಮಹೇಶ್ ಕಜೆ ವಕೀಲರು, ಇಡಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇರವೇರಿಸಿದರು. ಮುಖ್ಯ ಅತಿಥಿಗಳಾಗಿ ಸಂದೇಶ್ ಕೆ. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ, ಬೆಳ್ತಂಗಡಿ, ವಿಜಯೇಂದ್ರ ಟಿ.ಹೆಚ್ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಬೆಳ್ತಂಗಡಿ , ಶ್ರೀಹರಿ ಮುಗೇರಾಯ ನ್ಯಾಯವಾದಿ, ಕಾರ್ಕಳ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಕೆ. ಪೃಥ್ವಿರಾಜ್ ರೈ ಅಧ್ಯಕ್ಷರು, ವಕೀಲರ ಸಂಘ ಮಂಗಳೂರು, ಎಂ.ಕೆ. ದೇವೇಂದ್ರ ಕುಮಾರ್ ಅಧ್ಯಕ್ಷರು, ವಕೀಲರ ಸಂಘ ಮೂಡುಬಿದಿರೆ, ಕೃಷ್ಣಪ್ಪ ಉಪಾಧ್ಯಕ್ಷರು, ವಕೀಲರ ಸಂಘ ಪುತ್ತೂರು, ನಾರಾಯಣ ಕೆ.ಅಧ್ಯಕ್ಷರು, ವಕೀಲರ ಸಂಘ ಸುಳ್ಯ ರಾಜೇಶ್ ಬೊಳ್ಳುಕಲ್ಲು ಉಪಾಧ್ಯಕ್ಷರು, ಬಂಟ್ವಾಳ ವಕೀಲರ ಸಂಘ ಭಾಗವಹಿಸಿದ್ದರು. ನೂತನ ಅಧ್ಯಕ್ಷ ವಸಂತ ಮರಕಡ, ನವೀನ್ ಬಿ.ಕೆ. ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ‌ಅಶೋಕ್ ಕರಿಯನೆಲ, ಜೊತೆ ಕಾರ್ಯದರ್ಶಿ ವಿನಯ್ ಕುಮಾರ್, ಕೋಶಾಧಿಕಾರಿ ಪ್ರಶಾಂತ್ ಎಂ.ಅಲೋಶಿಯಸ್ ಎಸ್. ಲೋಬೋ ಅಧ್ಯಕ್ಷರು ಹಿರಿಯ ವಕೀಲರ ಸಮಿತಿ, ಸ್ವರ್ಣಲತಾ ಕಾಯದಶಿ೯, ಸದಸ್ಯ ಶಶಿಕಿರಣ್ ಜೈನ್ ಪದಗ್ರಹಣ ಸ್ವೀಕರಿಸಿದರು. ಶೈಲೇಶ್ ಆರ್.ಠೋಸರ್ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು. ಧನಂಜಯ ರಾವ್ ಕಾಯ೯ಕ್ರಮ ನಿರೂಪಿಸಿದರು. ನೂತನ ಕಾಯ೯ದಶಿ೯ ನವೀನ್ ಬಿ.ಕೆ ಧನ್ಯವಾದವಿತ್ತರು.ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಕೀಲರ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

Related posts

ಕೊಯ್ಯೂರು: ಮಲೆಬೆಟ್ಟು ಬದಿನಡೆ ಶ್ರೀ ವನದುರ್ಗ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya

ಗೇರುಕಟ್ಟೆ ಪರಪ್ಪು ಎಸ್.ಎಸ್.ಎಫ್ ಯೂನಿಟ್ ನ ಸದಸ್ಯರು ಸಾಹಿತ್ಯೋತ್ಸವದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ನ್ಯಾಯತರ್ಪು ಒಕ್ಕೂಟದ ಸಂಘದ ತ್ರೈಮಾಸಿಕ ಸಭೆ

Suddi Udaya

ರಂಝಾನ್ ಪ್ರಯುಕ್ತ ಮದ್ದಡ್ಕದಲ್ಲಿ ವಿಶಿಷ್ಟ ಕಾರ್ಯಕ್ರಮ: 50 ಕುಟುಂಬಕ್ಕೆ ರಂಝಾನ್ ಕಿಟ್ , 25 ಕುಟುಂಬಕ್ಕೆ “ಝಕಾತ್ ದಾನ ನಿಧಿ”, ಶೈಕ್ಷಣಿಕ ನಿಧಿ‌ ಹಸ್ತಾಂತರ

Suddi Udaya

ಮಚ್ಚಿನ: ಅಪಾಯದಂಚಿನಲ್ಲಿರುವ ವಿದ್ಯುತ್ ಕಂಬ

Suddi Udaya
error: Content is protected !!