ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಧರೆಗುರುಳಿದ 33 ಕೆವಿ ವಿದ್ಯುತ್ ಟವರ್ ದೊಂಡೋಲೆ ಪವರ್ ಪ್ರಾಜೆಕ್ಟ್ ನವರಿಗೆ ಸೇರಿದ ಕಾರು – ಬೈಕ್ ಜಖಂ: ಕಾರಿನೊಳಗೆ ಇದ್ದ ‌ಪವರ್ ಪ್ರಾಜೆಕ್ಟ್ ನ ಸಿಬ್ಬಂದಿ ಗಣೇಶ್ ಅಪಾಯದಿಂದ ಪಾರು

Suddi Udaya

ಬೆಳ್ತಂಗಡಿ:ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಬೆಳ್ತಂಗಡಿ-ಧರ್ಮಸ್ಥಳ 33 ಕೆ.ವಿವಿದ್ಯುತ್ ಸಂಪರ್ಕದ ಮುಖ್ಯ ಲೈನ್ ನ ಟವರ್ ಕುಸಿದು ಬಿದ್ದು ಒಂದು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಹಾನಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಭಾನುವಾರ ಸಂಜೆ ಜಡಿಮಳೆಗೆ ಕಿರಿಯಾಡಿ ಬಳಿ ಬೆಳ್ತಂಗಡಿ-ಧರ್ಮಸ್ಥಳ 33 ಕೆ.ವಿವಿದ್ಯುತ್ ಸಂಪರ್ಕದ ಮುಖ್ಯ ಲೈನ್ ವಿದ್ಯುತ್ ಟವರ್ ನೆಲದತ್ತ ಬಾಗುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಪವರ್ ಮ್ಯಾನ್ ಕೂಡಲೇ ಉಜಿರೆ ಉಪವಿಭಾಗದ ಸ.ಕಾ.ಇಂಜಿನಿಯರ್ ಕ್ಲೇಮೆಂಟ್ ಬೆಂಜಮಿನ್ ಬ್ರಾಗ್ಸ್ ಅವರಿಗೆ ಮಾಹಿತಿ ನೀಡಿದರು.

ಕೂಡಲೇ ಬೆಂಜಮಿನ್ ಅವರು ದೊಂಡೋಲೆಯ ಪವರ್ ಪ್ರಾಜೆಕ್ಟ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ತೆರಳಿದ್ದರು. ಪವರ್ ‌ಪ್ರೊಜೆಕ್ಟ್ ನ ಅಧಿಕಾರಿಗಳು ಒಂದು ಕಾರು ಮತ್ತು ಬೈಕ್ ನಲ್ಲಿ ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ವಾಲಿಕೊಂಡು ಬರುತ್ತಿದ್ದ ಟವರ್ ಕಾರು ಹಾಗೂ ಬೈಕ್ ನ ಮೇಲೆಯೇ ಬಿದ್ದಿತ್ತೇನ್ನಲಾಗಿದೆ. ಕಾರಿನಲ್ಲಿ ಪವರ್ ಪ್ರಾಜೆಕ್ಟ್ ನ ಗಣೇಶ್ ಎಂಬವರಿದ್ದು, ಸಣ್ಣ, ಪುಟ್ಟ ಗಾಯಕ್ಕೊಳಗಾಗಿ ಅಪಾಯದಿಂದ ಪಾರಾಗಿದ್ದಾರೆ. ಮೆಸ್ಕಾಂನ ತುರ್ತು ಸ್ಪಂದನೆ ಕಾರಣ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ. ಟವರ್ ಕುಸಿತದ ಕಾರಣ ಧರ್ಮಸ್ಥಳ ಭಾಗದ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

Leave a Comment

error: Content is protected !!