ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಇದರ 2022-2023ನೇ ಸಾಲಿನ ವಾರ್ಷಿಕ ಮಹಾಸಭೆಯು ವಾಣಿ ಶಿಕ್ಷಣ ಸಂಸ್ಥೆ ಗಳ ಸಭಾಭವನ ಹಳೇಕೋಟೆ ಬೆಳ್ತಂಗಡಿಯಲ್ಲಿ ನ.5ರಂದು ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಪೂವಜೆ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಪದ್ಮ ಗೌಡ ಬೆಳಾಲು, ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ,ಕಾರ್ಯದರ್ಶಿ ಗಣೇಶ್ ಗೌಡ, ಪೂರ್ವಾಧ್ಯಕ್ಷ ಸೋಮೇ ಗೌಡ, ಕೋಶಾಧಿಕಾರಿ ಬಾಲಕೃಷ್ಣ ಗೌಡ ಬಿರ್ಮೋಟ್ಟು , ಗೋಪಾಲಕೃಷ್ಣ ಗೌಡ ಗುಲ್ಲೋಡಿ, ಉಷಾ ವೆಂಕಟರಮಣ ಗೌಡ, ಧರ್ನಪ್ಪ ಗೌಡ ಬಂದಾರು, ವಿಜಯ ಗೌಡ ನ್ಯಾಯತರ್ಪು, ರವೀಂದ್ರ ಪೆರ್ಮುದೆ, ಡಿ. ಎಂ. ಗೌಡ ಉಜಿರೆ, ಪ್ರಸನ್ನ ಕುಮಾರ್ ಬಾರ್ಯ, ಹರೀಶ್ ಗೌಡ ಬಂದಾರು, ಯಶವಂತ ಗೌಡ ಬೆಳಾಲು, ಯುವರಾಜ್ ಅನಾರ್, ಕೃಷ್ಣಪ್ಪ ಗೌಡ ಸವಣಾಲು, ಸುಭಾಷಿನಿ ಜನಾರ್ಧನ ಗೌಡ ಉಪಸ್ಥಿತರಿದ್ದರು.

ಸಭೆಯ ನೋಟೀಸ್ ನು ಉಪಾಧ್ಯಕ್ಷ ನಾರಾಯಣ ಗೌಡ ಓದಿದರು. ಕಾರ್ಯದರ್ಶಿ ಗಣೇಶ್ ಗೌಡ ವರದಿ ಓದಿದರು. ಬಾಲಕೃಷ್ಣ ಗೌಡ ಬಿರ್ಮೋಟ್ಟು 2022-23ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ಯುವರಾಜ್ ಅನಾರು ಬೈಲಾ ತಿದ್ದುಪಡಿ ಓದಿದರು. ಸ್ಪಂದನ ಸೇವಾ ಸಂಘದ ಬಗ್ಗೆ ಉಪನ್ಯಾಸಕ ಮೋಹನ್ ಗೌಡ ವಿವರಿಸಿದರು. ಮುಂದಿನ ವರ್ಷದ ಅಭಿವೃದ್ಧಿ ವಿಷಯದ ಬಗ್ಗೆ ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ ಮಾತನಾಡಿದರು. ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಸಂಘ ಕೈಗೊಂಡ ಕೆಲಸ ಬಗ್ಗೆ ವಿವರಿಸಿದರು.

ಈ ಸಂಧರ್ಭ ಆರ್ಥಿಕವಾಗಿ ಸಂಕಷ್ಟ ಗೊಳಗಾದ ಚಾರ್ಮಾಡಿಯ ಶಿವಪ್ರಸಾದ್, ಮಿತ್ತಬಾಗಿಲು ಜನಾರ್ಧನ, ಲೀಲಾವತಿ ಕಾನರ್ಪ, ಉನ್ನತ ಶಿಕ್ಷಣಕ್ಕಾಗಿ ರಕ್ಷಿತಾ ಕೆಂಬರ್ಜೆ, ಚಾರ್ಮಾಡಿ ನಿತಿನ್ ರವರಿಗೆ ಸ್ಪಂದನಾ ಸೇವಾ ಸಂಘದ ವತಿಯಿಂದ ಸಹಾಯಧನ ವಿತರಿಸಲಾಯಿತು.

ಕಟ್ಟಡ ನಿರ್ಮಾಣ ಬಗ್ಗೆ ಸಂಘಕ್ಕೆ ಹಂತ ಹಂತವಾಗಿ ರೂ.1ಲಕ್ಷ ಕೊಡುವುದಾಗಿ ಘೋಷಿಸಿದ ಪೂರ್ವಾಧ್ಯಕ್ಷ ಸೋಮೇ ಗೌಡ ರೂ.25ಸಾವಿರದ ಚೆಕ್ ನೀಡಿದರು. ಪ್ರಕಾಶ್ ಅಪ್ರಮೇಯ ಉಜಿರೆ ರೂ.50ಸಾವಿರ ನೀಡುವುದಾಗಿ ಹೇಳಿದರು. ದಾಸಪ್ಪ ಗೌಡ ಕಾಂಜಾನು ರೂ.25ಸಾವಿರದ ಚೆಕ್ ನೀಡಿದರು.ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಗೌಡ ಮರಕಡ ಹಾಗೂ ಕಾರ್ಯದರ್ಶಿ ನವೀನ್ ರವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭ ಯುವ ವೇದಿಕೆಯ ಸಂಚಾಲನಾ ಸಮಿತಿಯ ಅಧ್ಯಕ್ಷ ರನ್ನಾಗಿ ಚಂದ್ರಕಾಂತ ನಿಡ್ಡಾಜೆರವರನ್ನು ಆಯ್ಕೆ ಮಾಡಲಾಯಿತು.ಕು. ಸಿಂಚನ, ಕು. ಅಭಿಜ್ಞಾ, ಕು. ಜಯಶ್ರೀ ಪ್ರಾರ್ಥಿಸಿದರು. ಸಂಘದ ಜತೆ ಕಾರ್ಯದರ್ಶಿ ಶ್ರೀನಾಥ್ ಕೆ. ಎಂ. ಸ್ವಾಗತಿಸಿದರು. ವಕೀಲರಾದ ಗೋಪಾಲಕೃಷ್ಣ ಧನ್ಯವಾದವಿತ್ತರು. ಮಹಾಬಲ ಗೌಡ ಹಾಗೂ ಮೋಹನ್ ಗೌಡ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!