23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂಎಲ್ಸಿ ಹರೀಶ್ ಕುಮಾರ್ ಪಿಕ್ಸ್

ಮಂಗಳೂರು: ಕೆಲವೇ ತಿಂಗಳಲ್ಲಿ ಬರಲಿರುವ ಲೋಕಸಭೆ ಎಲೆಕ್ಷನ್ ಕಾವು ಜೋರಾಗಿದೆ. ದಿನದಿಂದ ದಿನಕ್ಕೆ ಅಭ್ಯರ್ಥಿಗಳು ಯಾರು ಸಮರ್ಥ ಎಂಬುದರ ಲೆಕ್ಕಾಚಾರದಲ್ಲಿ ಆಯಾ ಪಕ್ಷದವರು ಸನ್ನದ್ಧರಾಗಿದ್ದರೆ. ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಆಯಾ ಕ್ಷೇತ್ರಗಳಲ್ಲಿ ಕುತೂಹಲ ಕೌತುಕ ಹೆಚ್ಚಾಗಿದೆ.


ಲೋಕಸಭಾ ಚುನಾವಣೆಯ 2024 ದ.ಕ. ಜಿಲ್ಲೆಯ ಲೋಕಸಭಾ ಕ್ಷೇತ್ರ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳು ಯಾರಾಗಬಹುದೆಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಅಷ್ಟೇ ಅಲ್ಲ ದ.ಕ. ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಅಖಾಡ ಒಂದು ರೂಪ ಪಡೆದುಕೊಳ್ಳುತ್ತಿದೆ.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಮ್ಮೆ ಆಯ್ಕೆಯಾಗುವುದು ಪಕ್ಕ. ಸಂಘಟನಾತ್ಮಕವಾಗಿ ನಳಿನ್ ಪ್ರಬಲವಾಗಿರುವುದೇ ಹಾಗೂ ಹೈಕಮಾಂಡ್ ಕೃಪಾಕಟಾಕ್ಷ ಈ ಆಯ್ಕೆಗೆ ಕಾರಣ ಎನ್ನಲಾಗುತ್ತಿದೆ. ಇನ್ನೊಂದು ಕಡೆ ಮಂಗಳೂರಿನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿ ಹಾಲಿ ಎಂಎಲ್ಸಿ ಹರೀಶ್ ಕುಮಾರ್ ಆಯ್ಕೆ ಆಗುವ ಸಾಧ್ಯತೆ ಬಹುತೇಕವಾಗಿ ಎದ್ದು ಕಾಣುತ್ತಿದೆ.

ವಿಧಾನ ಪರಿಷತ್ತಿನಲ್ಲಿ ಜನಸಾಮಾನ್ಯರ ರೆವಿನ್ಯೂ ವಿಷಯಗಳಿಗೆ ಸಂಬಂಧಪಟ್ಟಂತೆ ಹಲವಾರು ಪ್ರಶ್ನೆಗಳನ್ನು ಎತ್ತಿರುವುದು ಹಾಗೂ ಪಕ್ಷದ ಒಳಗೆ ಎಲ್ಲರೊಂದಿಗೆ ಆತ್ಮೀಯತೆಯಿಂದ ಇರುವುದು. ಯಾರೊಂದಿಗೂ ವೈರತ್ವವಿಲ್ಲದ ಹರೀಶ್ ಕುಮಾರ್ ಅವರಿಗೆ ಪ್ಲಸ್ ಪಾಯಿಂಟ್ ಎನ್ನಲಾಗುತ್ತಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಅತ್ಯಂತ ಜನಪ್ರಿಯತೆಯನ್ನು ಕಂಡವರು. ಎಲ್ಲರೊಂದಿಗೆ ಅತ್ಯಂತ ಸರಳತೆಯಿಂದ ಕೂಡಿಕೊಂಡು ಪಕ್ಷವನ್ನ ಬೆಳೆಸಿದ ಹೆಮ್ಮೆ ಕರಾವಳಿಗರಲ್ಲಿ ಕೇಳಿ ಬರುವ ಮಾತು. ಇವರಿಗೆ ಮತ್ತೊಂದು ಪ್ಲಸ್ ಪಾಯಿಂಟ್ ಜಾತಿ ಲೆಕ್ಕಾಚಾರ.
ಬಿಲ್ಲವ ಸಮುದಾಯಕ್ಕೆ ಸೇರಿದ ಇವರು ಪ್ರಬಲ ನಾಯಕನೂ ಹೌದು. ಜಾತಿ ಬೆಂಬಲವೂ ಹರೀಶ್ ಕುಮಾರ್ ಮೇಲಿದೆ. ಹೀಗಿರುವಾಗ ಕಾಂಗ್ರೆಸ್ ನಿಂದ ದ.ಕ. ಜಿಲ್ಲೆ ಲೋಕಸಭಾ ಕ್ಷೇತ್ರಕ್ಕೆ ಹರೀಶ್ ಕುಮಾರ್ ಪ್ರಬಲ ಪೈಪೋಟಿ ಕೊಡಬಲ್ಲ ಅಭ್ಯರ್ಥಿ ಎಂಬುದು ಪಕ್ಕ.
ಈ ಬಾರಿ ಹರೀಶ್ ಕುಮಾರ್ ಅವ್ರನ್ನ ಕಾಂಗ್ರೆಸ್ ದ.ಕ‌. ಲೋಕ ಅಭ್ಯರ್ಥಿಯಾಗಿ ಬಹುತೇಕ ಫೈನಲ್ ಮಾಡುವುದು ಪಕ್ಕ ಆಗಿದೆ.
ಉಡುಪಿ ಚಿಕ್ಕಮಗಳೂರು ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಎರಡು ಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದು ರಣತಂತ್ರವನ್ನು ರೂಪಿಸುತ್ತಿವೆ. ಬಂದಿರುವ ಮಾಹಿತಿಗಳ ಪ್ರಕಾರ ಪರಸ್ಪರ ಸ್ಪರ್ಧೆಗೆ ಒಂದು ಹಂತದ ಅಖಾಡ ಸಿದ್ಧವಾಗಿದೆ ಎನ್ನಲಾಗಿದೆ.

Related posts

ಬೆಳ್ತಂಗಡಿಯ ಇಬ್ಬರು ವಕೀಲರು ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya

ಬದಿನಡೆ ಪುಂಡಿಕಲ್ ಕುಕ್ಕು ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ,ಧಾರ್ಮಿಕ ಉಪನ್ಯಾಸ

Suddi Udaya

ಉಪ್ಪಿನಂಗಡಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಮಾಹಿತಿ

Suddi Udaya

ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದ ಕೋರಿಜಾತ್ರೆ

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರಿಗೆ ಮೊಹರೆ ಹನುಮಂತರಾಯ ಪ್ರಶಸ್ತಿ

Suddi Udaya
error: Content is protected !!