April 2, 2025
ತಾಲೂಕು ಸುದ್ದಿ

ತೆಕ್ಕಾರಿನ ಬಟ್ರಬೈಲು ಎಂಬಲ್ಲಿ ದೇವಸ್ಥಾನದ ಬಾವಿಯಲ್ಲಿ ಅತೀ ಪುರಾತನ ಶ್ರೀ ಕೃಷ್ಣ ದೇವರ ವಿಗ್ರಹ ಪತ್ತೆ

ಬೆಳ್ತಂಗಡಿ: ಸುಮಾರು ಏಳುನೂರು ವರುಷಗಳ ಹಿಂದೆ ಜನರಿಂದ ಆರಾಧನೆ ಪಡೆಯುತಿದ್ದ ಸುಮಾರು ಹನ್ನೆರಡನೇ ಶತಮಾನದ ಎಂದು ಹೇಳಲಾದ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹ ಇಂದು ನ.5ರಂದು ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲು ಎಂಬಲ್ಲಿ ದೇವಸ್ಥಾನದ ಬಾವಿಯಲ್ಲಿ ಪತ್ತೆಯಾಗಿದೆ.

ಬಾವಿಯಲ್ಲಿ ಸುಮಾರು ಹದಿನೈದು ಅಡಿ ಆಳದಲ್ಲಿ ಈ ಮೂರ್ತಿ ಪತ್ತೆಯಾಗಿದೆ. ಬಾವಿಯನ್ನು
ಯಂತ್ರದಲ್ಲಿ ತೋಡಿದಾಗ ಮೂರ್ತಿ ಕಂಡುಬಂದು ಊರ ಭಕ್ತರ ಸಂತಸಕ್ಕೆ ಪಾರವೇ ಇರಲಿಲ್ಲ. ದೇವಸ್ಥಾನವಿದ್ದ ಜಮೀನು ಅನ್ಯಮತೀಯ ವಶದಲ್ಲಿದ್ದು ಊರವರ ನಿರಂತರ ಪ್ರಯತ್ನದ ಫಲವಾಗಿ ಬೆಳ್ತಂಗಡಿಯ ಶಾಸಕರ ಶ್ರಮದಿಂದ ದೇವಸ್ಥಾನದ ನಿರ್ಮಾಣ ಉದ್ದೇಶ ಕ್ಕಾಗಿ ಕಳೆದ ಜುಲೈ ತಿಂಗಳಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಗೆ ಈ ಜಮೀನು ಮಂಜೂರುಗೊಳಿಸಿದ್ದರು.

ಆನಂತರ ಜಿಲ್ಲಾಧಿಕಾರಿ,ಊರಿನವರು ಶಾಸಕರ ನೇತೃತ್ವದಲ್ಲಿ ಸೇರಿ ಆ ಜಮೀನಿನ ಸಮೀಪದಲ್ಲಿ ಮಾರ್ಚ್ ನಲ್ಲಿ ದೇವರಕಟ್ಟೆ ನಿರ್ಮಿಸಿ ಭಜನೆ ಆರಂಭಿಸಲಾಯಿತು.ಈ ಮಧ್ಯೆ ನ್ಯಾಯಾಲಯದ ಮೆಟ್ಟಿಲೇರಿದ ಎದುರುವಾದಿಯಿಂದ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಅಡಚಣೆಯಾದಾಗ ಮತ್ತೆ ಶಾಸಕರ ಪ್ರಯತ್ನದಿಂದ ದೇವಸ್ಥಾನಕ್ಕೆ ಮಂಜೂರುಗೊಂಡ ಜಮೀನು ನೊಂದಿಗೆ ಆ ವ್ಯಕ್ತಿಯ ಜಮೀನು ನೀಡುವುದಾಗಿ ಆ ವ್ಯಕ್ತಿ ಮುಂದೆ

ಬಂದಾಗ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆದ ಕನಸು ಮತ್ತೆ ಚಿಗುರೊಡೆದು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಇಂದು ಭೂಗರ್ಭದಲ್ಲಿ ಹುದುಗಿದ್ದ ಕುರುಹುಗಳಿಗಾಗಿ ದೇವಸ್ಥಾನವಿದ್ದ ಈಶಾನ್ಯ ಭಾಗದ ಬಾವಿಇದ್ದ ಜಾಗ ಪರಿಶೀಲಿಸಿ ಶೋಧನಡೆಸಿ ಅಗೆದಾಗ ದೇವರ ಭಗ್ನಗೊಂಡ ವಿಗ್ರಹ, ದೀಪಸ್ತಂಭ, ಗರ್ಭಗುಡಿಯ ಮೆಟ್ಟಿಲಿನ

ವಿನ್ಯಾಸಗೊಳಿಸಿದ ಕಲ್ಲಿನ ಕುರುಹುಗಳು ಕಂಡುಬಂತು.
ಮತ್ತಷ್ಟು ದೇವಸ್ಥಾನದ ಅವಶೇಷಗಳು ತೆಕ್ಕಾರಿನಲ್ಲಿ ನೇತ್ರಾವತಿ ನದಿ ತಡದಿಲ್ಲಿ ನದಿಗೆ ಇಳಿಯುವ ಜಾಗಕ್ಕೆ ಬಳಸಲಾಗಿದೆ. ಬಹಳ ವರುಷಗಳಿಂದ ಇಲ್ಲಿಯ ಜನರು ದೇವಸ್ಥಾನ ಇತ್ತೆಂಬ ನಂಬಿಕೆ ಹುಸಿಯಾಗಲಿಲ್ಲ. ಧೃಡವಾದ ನಂಬಿಕೆಗಳು ಸತ್ಯವಾದ ವಿಚಾರ ಎಂಬುದಕ್ಕೆ ಇದೇ ದೃಷ್ಟಾಂತ.‌ ಸ್ಥಳಕ್ಕೆ ಜಿಲ್ಲಾ ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ನವೀನ್ ನೆರಿಯ, ಅಕ್ಕಪಕ್ಕದ ಊರ ಭಕ್ತರು ದೇವರ ವಿಗ್ರಹ ಪರಿಶೀಲಿಸಿ ನಮಿಸಿದರು.

Related posts

ಜು.6: ದ.ಕ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ರಾಜ್ಯಮಟ್ಟದ ಜನಪದ ಗೀತಗಾಯನ ಸ್ಪರ್ಧೆ :ವಾಣಿ ಪ.ಪೂ. ಕಾಲೇಜಿನ ರೋವರ್ಸ್- ರೇಂಜರ್ಸ್ ತಂಡ ಪ್ರಥಮ ಸ್ಥಾನ

Suddi Udaya

ಉಜಿರೆ : ದ್ವಿಚಕ್ರ ವಾಹನಗಳು ಡಿಕ್ಕಿ: ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ವೇಣೂರು ತಾಲೂಕು ಕೇಂದ್ರದಿಂದ ವಿವಿಧ ಉಪವಸತಿಗಳಿಗೆ ರಾಮಮಂತ್ರಾಕ್ಷತೆಯ ಕಲಶಗಳ ಹಸ್ತಾಂತರ

Suddi Udaya

ಪದ್ಮಂಜ ಸಹಕಾರಿ ಸಂಘದ ರೈತ ಭವನ ಮತ್ತು ರೈತ ಗೋದಾಮು ಕಟ್ಟಡ ಉದ್ಘಾಟನೆ

Suddi Udaya

ಕು.ಸೌಜನ್ಯ ಪ್ರಕರಣ: ಮರು ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಸೆ. 8ರಂದು (ಇಂದು)ಹೈಕೋರ್ಟಿನಲ್ಲಿ ವಿಚಾರಣೆ

Suddi Udaya
error: Content is protected !!