24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿ

ಬೆಳ್ತಂಗಡಿ ತಾಲೂಕು ರಾಮ ಕ್ಷತ್ರಿಯ ಸಂಘದ 22ನೇ ವಾರ್ಷಿಕೋತ್ಸವ – ರಾಮಕ್ಷತ್ರಿಯ ಮಹಿಳಾ ವೃಂದದ ಉದ್ಘಾಟನೆ – ರಾಮಕ್ಷತ್ರಿಯ ಯುವ ವೇದಿಕೆಯ ಉದ್ಘಾಟನೆ – ಸಂಭ್ರಮದ “ಕ್ಷತ್ರಿಯ ಸಂಗಮ” ಸಾಧಕರಿಗೆ ಸನ್ಮಾನ, ಹಿರಿಯರಿಗೆ ಗೌರವಾರ್ಪಣೆ

ಬೆಳ್ತಂಗಡಿ ತಾಲೂಕು ರಾಮ ಛತ್ರಿಯ ಸಂಘ ರಾಮನಗರ, ಬೆಳ್ತಂಗಡಿ ತಾಲೂಕು,ಇದರ 22ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ರಾಮಕ್ಷತ್ರಿಯ ಮಹಿಳಾ ವೃಂದದ ಉದ್ಘಾಟನೆ ಮತ್ತು ರಾಮಕ್ಷತ್ರಿಯ ಯುವ ವೇದಿಕೆಯ ಉದ್ಘಾಟನೆ “ಕ್ಷತ್ರಿಯ ಸಂಗಮ” ಕಾಯ೯ಕ್ರಮ ನ.‌5 ರಂದು ಆದಿತ್ಯವಾರ ಸುವರ್ಣ ಆರ್ಕೇಡ್ – ಸಪ್ತಪದಿ ಹಾಲ್, ಬೆಳ್ತಂಗಡಿಯಲ್ಲಿ ಆದ್ದೂರಿಯಾಗಿ ಜರುಗಿ ತು.

ಸಮಾರಂಭವನ್ನು ಹೆಚ್. ಆರ್. ಶಶಿಧರ ನಾಯಕ್, ಹೊಸನಗರ ಅಧ್ಯಕ್ಷರು, ವಿಶ್ವ ರಾಮಕ್ಷತ್ರಿಯ ಸಂಘ (ರಿ.) ಕುಂದಾಪುರ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಿ. ಚಂದ್ರಕಾಂತ, ಅಧ್ಯಕ್ಷರು, ರಾಮ ಕ್ಷತ್ರಿಯ ಸಂಘ, ಬೆಳ್ತಂಗಡಿ ವಹಿಸಿದ್ದರು.

ಮಹಿಳಾ ವೃಂದದ ಉದ್ಘಾಟನೆಯನ್ನು ಶ್ರೀಮತಿ ರೇಖಾ ಸುದೇಶ್ ರಾವ್ ಅಧ್ಯಕ್ಷರು, ರಾಮಕ್ಷತ್ರಿಯ ಸಂಘ, ಮೂಲ್ಕಿ-ಸುರತ್ಕಲ್ ನೇರವೇರಿಸಿದರು.ಯುವ ವೇದಿಕೆಯನ್ನು ಜಿತೇಂದ್ರ ಜೊತೆ ಕಾರ್ಯದರ್ಶಿ, ದ.ಕ. ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಗುರುಪ್ರಸಾದ್ ರಾವ್, ಅಧ್ಯಕ್ಷರು, ರಾಮಕ್ಷತ್ರಿಯ ಸಂಘ, ಕಾರ್ಕಳ, ಹರೀಶ್ ಪಡೀಲ್, ಮಾಲಕರು, ಭರಣಿ ಫುಡ್ ಹಾಗೂ ಬಿವರೇಜಸ್, ಶುದ್ಧ ಮಿನರಲ್ ವಾಟರ್, ಮಡಂತ್ಯಾರು, ಭುವನೇಶ್ ಪೂನಚ, ಹಿರಿಯ ಪ್ರಬಂಧಕರು, ನ್ಯಾಶನಲ್ ಥರ್ಮಲ್ ಪವರ್ ಕಾಪ್‌ರೇಶನ್, ಬೆಂಗಳೂರುರಂಜನ್ ಕಾಸರಗೋಡು, ಕನ್ನಡ ಚಲನಚಿತ್ರ ನಿರ್ದೇಶಕರು ಹಾಗೂ ನಟರು,ಪ್ರಮೋದ್ ಆರ್. ನಾಯಕ್‌, ಅಧ್ಯಕ್ಷರು, ದ.ಕ. ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟ (ರಿ.), ಮಂಗಳೂರು, ಸಿ.ಹೆಚ್. ಪ್ರಭಾಕರ್, ಅಧ್ಯಕ್ಷರು, ಶ್ರೀರಾಮ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಬೆಳ್ತಂಗಡಿ, ವಿಶ್ವನಾಥ ಆರ್. ನಾಯಕ್‌, ಸ್ಥಾಪಕ ಅಧ್ಯಕ್ಷರು, ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಬೆಳ್ತಂಗಡಿ ಭಾಗವಹಿಸಿದ್ದರು.

ಸನ್ಮಾನ : ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತರಾದ ಬಿ. ವಿಜಯ್ ಕುಮಾರ್, ಪೊಲೀಸ್ ಇಲಾಖೆ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾಯ೯ಕ್ರಮದಲ್ಲಿ ಸಮಾಜದ ಹಿರಿಯರಾದ ಶ್ರೀ ಮತಿ ಮತ್ತು ಜನಾರ್ದನ, ಬೆಳ್ತಂಗಡಿ, ಶ್ರೀಮತಿ ಮತ್ತು ಅಶೋಕ್ ಉಜಿರೆ, ಶ್ರೀ ಮತಿ ಮತ್ತು ಸೂರ್ಯಕಾಂತ ಬೆಳ್ತಂಗಡಿ, ಶ್ರೀಮತಿ ವಿಜಯಾ ಅಶೋಕ್ ಬೆಳ್ತಂಗಡಿ, ಶ್ರೀಮತಿ ಮತ್ತು ವಾಸುದೇವ ನಾಯಕ್ ಪೆರಿಂಜೆಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಗೌರವಾಧ್ಯಕ್ಷ ರತ್ನಾಕರ್ ಮಾಸ್ಟರ್, ಕಾಯ೯ದಶಿ೯ ಸಂತೋಷ್ ಕುಮಾರ್ ಎಸ್, ಮಹಿಳಾ ವೃಂದದ ಅಧ್ಯಕ್ಷೆ ಶ್ರೀಮತಿ ಕಲಾವತಿ ಶ್ರೀಧರ್, ಕಾಯ೯ದಶಿ೯ ಶ್ರೀಮತಿ ದಿವ್ಯಾ ಸಂತೋಷ್, ಯುವ ವೇದಿಕೆ ಅಧ್ಯಕ್ಷ ಲಿಖಿತ್ ಎಲ್, ಕಾಯ೯ದಶಿ೯ ಸ್ವಸ್ತಿಕ್ ಉಪಾಧ್ಯಕ್ಷ ಮೋಹನ್ ದಾಸ್ ಬೆಳ್ತಂಗಡಿ, ರಾಘವೇಂದ್ರ ರಾವ್ ಕೆ. ಅರಸಿನಮಕ್ಕಿ, ಕೋಶಾಧಿಕಾರಿ ಶ್ರೀಮತಿ ದಿವ್ಯಾ ಸಂತೋಷ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿ ವಿನೋದ್ ಕುಮಾರ್ ಸಿ.ಹೆಚ್ ಉಜಿರೆ, ಧೀರಜ್ ಬೆಳ್ತಂಗಡಿ, ಸಂಘಟನಾ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ಲಾಯಿಲ, ರಾಜೇಶ್ ಬೆಳ್ತಂಗಡಿ, ಕ್ರೀಡಾ ಕಾರ್ಯದರ್ಶಿಗಳಾದ‌ ಶ್ರೀಮತಿ ನಾಗಶ್ರೀ ಧೀರಜ್, ಶ್ರೀಮತಿ ಜಯಶ್ರೀ ಪ್ರಕಾಶ್, ಸಾಂಸ್ಕೃತಿಕ ಕಾಯ೯ದಶಿ೯ಗಳಾದ ಶ್ರೀಮತಿ ವೀಣಾ ಚಂದ್ರಕಾಂತ್, ಶ್ರೀಮತಿ ಲತಾ ಲಕ್ಷ್ಮೀನಾರಾಯಣ, ಶ್ರೀಮತಿ ಕಲಾವತಿ ಟೀಚರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾಯಿ ಚರಣ್ ಇವರ ಪ್ರಾಥ೯ನೆ ಬಳಿಕ ಚಂದ್ರಕಾಂತ್ ಸ್ವಾಗತಿಸಿದರು. ಸಿ.ಹೆಚ್ ಪ್ರಭಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ಬೆಳೆದು ಬಂದ ಹಾದಿಯ ಬಗ್ಗೆ ತಿಳಿಸಿ, ಹಿರಿಯರನ್ನು ನೆನಪಿದರು. ಕು| ಹಂಸಿಕಾ ವರದಿ ವಾಚಿಸಿದರು.

Related posts

ಪ್ರಕೃತಿ ವಿಸ್ಮಯ: ಒಂದೇ ಗೊನೆಯಲ್ಲಿ ಎರಡು ಬಾಳೆ ಹೂ(ಪೂಂಬೆ)

Suddi Udaya

ಪುಂಜಾಲಕಟ್ಟೆ-ಪುರಿಯ-ಕುಕ್ಕೇಡಿ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಛಂದಸ್ಸು: ಪರಿಚಯಾತ್ಮಕ ಕಾರ್ಯಗಾರ

Suddi Udaya
error: Content is protected !!