25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿಚಂದ್ರ ಬಿ ಸಾಲಿಯಾನ್ ಇವರಿಗೆ ಕಲಾರತ್ನ ಗೌರವ ಪುರಸ್ಕಾರ

ಮಂಗಳೂರು: ಇತ್ತೀಚೆಗೆ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ಖ್ಯಾತ ರಂಗಭೂಮಿ ಕಲಾವಿದ, ನಾಟಕ ರಚನೆಕಾರ ರವಿಚಂದ್ರ ಬಿ ಸಾಲಿಯಾನ್ ಇವರಿಗೆ ಮಂಗಳೂರಿನ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ವತಿಯಿಂದ ರಂಗಭೂಮಿಯಲ್ಲಿ ಮಾಡಿದ ಮಹಾ ಸಾಧನೆಗಾಗಿ ಕಲಾ ರತ್ನ ಪ್ರಶಸ್ತಿ ನೀಡಿ ನ.4ರಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿದರು.

ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಸಮಾಜದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಮಂಗಳೂರಿನ ಅತ್ತಾವರದಲ್ಲಿ ನಡೆಯಿತು.

ರವಿಚಂದ್ರ ಬಿ ಸಾಲಿಯಾನ್ ವೇಣೂರು ಇವರು ರಂಗಭೂಮಿಯಲ್ಲಿ ಕಳೆದ 35 ವರ್ಷಗಳಿಂದ ತೊಡಗಿಸಿಕೊಂಡು ಸುಮಾರು 30ನಾಟಕಗಳನ್ನು ರಚಿಸಿದ್ದಾರೆ ಇವರ ನಾಟಕಗಳು ಕರಾವಳಿ ಮಾತ್ರವಲ್ಲದೇ, ದೂರದ ಮುಂಬೈಯಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಸ್ತ್ರೀ ಪಾತ್ರದಾರಿಯಾಗಿ ಇವರು ಕರಾವಳಿಯ ನಾಟಕ ರಂಗದಲ್ಲಿ ಅದ್ಬುತ ಸಾಧನೆ ಮಾಡಿರುವ ಇವರಿಗೆ ಅದೆಷ್ಡೋ ಪ್ರಶಸ್ತಿಗಳು ಅರಸಿ ಬಂದಿವೆ.

ವೇಣೂರಿನಲ್ಲಿ ಫಲ್ಗುಣಿ ಕಲಾತಂಡ ಎಂಬ ನಾಟಕ ತಂಡವನ್ನು ಎರಡು ದಶಕಗಳ ಹಿಂದೆ ತನ್ನ ಸ್ನೇಹಿತ ಹೇಮಂತ್ ಕುಮಾರ್ ಭಟ್ ಬಡಕೋಡಿ ಇವರೊಂದಿಗೆ ಕಟ್ಟಿ ಆ ತಂಡದ ಮೂಲಕ ಜಿಲ್ಲೆಯಾದ್ಯಂತ ಕಲಾ ಸೇವೆ ನೀಡುತ್ತಿದ್ದಾರೆ.

Related posts

ವೇಣೂರು: ನೇಮಕ್ಕು ನಿಧನ

Suddi Udaya

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಧರ್ಮಸ್ಥಳದಲ್ಲಿ ಆಮಂತ್ರಣ ಪತ್ರ ಬಿಡುಗಡೆ

Suddi Udaya

ಹಣ ದ್ವಿಗುಣ ಮಾಡುವುದಾಗಿ ಮೋಸ ಮಾಡಿದ ಪ್ರಕರಣ: ನೊಂದ ಮಹಿಳೆ ವೀಟಾ ಮರೀನಾ ಡಿಸೋಜ ನದಿಗೆ ಹಾರಿ ಆತ್ಮಹತ್ಯೆ

Suddi Udaya

ನಾರಾವಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟ

Suddi Udaya

ಉಜಿರೆ :ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ

Suddi Udaya

ಕನ್ಯಾಡಿ: ಬಸ್ ಹಾಗೂ ಕಾರಿನ ನಡುವೆ ಅಪಘಾತ

Suddi Udaya
error: Content is protected !!