ಹೊಸಂಗಡಿ ಗ್ರಾಮ ಪಂಚಾಯತ್ ನ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ನ. 05 ರಂದು ಒಂದನೇ ವಾರ್ಡಿನ ಕುರ್ಲೋಟ್ಟು ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.

ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ಶ್ರಮಾದಾನಕ್ಕೆ ಚಾಲನೆ ನೀಡಿದರು. ಸದಸ್ಯರಾದ ಅಬ್ದುಲ್ ರಹಿಮಾನ್ ರವರು ಶ್ರಮದಾನದ ನೇತೃತ್ವ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸ್ವಾಗತಿಸಿದರು.
ಕುರ್ಲೋಟ್ಟು ವಿನಿಂದ ಹೊಸಂಗಡಿ ಪಂಚಾಯತ್ ವರೆಗಿನ ರಸ್ತೆಗಳ ಇಕ್ಕೆಲಗಳಲ್ಲಿ ಬಿದ್ದಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಯಿತು. ಕುರ್ಲೋಟ್ಟು ಐದು ಸೆಂಟ್ಸ್ ಕಾಲನಿ, ಅಂಗಡಿ ಮುಗ್ಗಟ್ಟು ಗಳಲ್ಲಿ ಹಾಗೂ ಕುರ್ಲೋಟ್ಟು ಮತ್ತು ಪದ್ದಂದಡ್ಕ ಗಳ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಚ ಗೊಳಿಸಲಾಯಿತು.


ಆಶಾ ಕಾರ್ಯಕರ್ತೆ , ಪಂಚಾಯತ್ ಸಿಬ್ಬಂದಿಗಳು, ಸ್ಥಳೀಯ ಸುಮಾರು 75 ಸ್ವಯಂ ಸೇವಕರು, ವಿದ್ಯಾರ್ಥಿಗಳು, ಬಿಎಸ್.ಡ್ಲ್ಯೂ ವಿದ್ಯಾರ್ಥಿ ಶ್ರಮದಾನದಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಿದರು,