ಬೆಳ್ತಂಗಡಿ:ಇದೊಂದು ಅತ್ಯಂತ ವಿಚಿತ್ರ ಮನಕಲಕುವ ಕಥೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ-ಮೂಡುಬಿದಿರೆ ತಾಲೂಕಿನ ಗಡಿಭಾಗ ಮರೋಡಿ ಗ್ರಾಮದ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಕುಟುಂಬ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಹುಡುಗ. ಮನೆಯ ಕಡು ಬಡತನದ ಕಾರಣ ಪಿಯುಸಿ ಹಂತದಲ್ಲೇ ಶಿಕ್ಷಣ ಮೊಟಕುಗೊಳಿಸಿ ಉದ್ಯೋಗದ ಕಡೆ ಮುಖ ಮಾಡಿದ. ಆದರೆ ವಿಧಿ ಅದಕ್ಕೂ ಕತ್ತರಿ ಹಾಕಲು ಮುಂದೆ ಬಂತು. ಕೆಲಸಕ್ಕೆ ಸೇರಿದ ಒಂದೇ ತಿಂಗಳಲ್ಲಿ ಆತನಿಗೆ ಅನಿರೀಕ್ಷಿತ ಆರೋಗ್ಯ ಬಾಧೆಯೊಂದು ಎದುರಾಯಿತು.
ಆರಂಭದಲ್ಲಿ ಆತನ ಸ್ವರ ಸಣ್ಣದಾಯಿತು. ವಾತಾವರಣದ ಬದಲಾವಣೆ ಆಗಿರಬಹುದು ಎಂದು ಸುಮ್ಮನಿದ್ದ ಕುಟುಂಬಸ್ಥರು ಸ್ವರ ಸರಿ ಆಗದೇ ಇದ್ದಾಗ ವೈದ್ಯರ ಸಲಹೆ ಪಡೆಯಲು ಮುಂದಾದಾಗ ಬೆಚ್ಚಿಬೀಳಿಸುವ ಘಟನೆ ಎದುರಾಯಿತು. ಆತನ ಧ್ವನಿ ಪೆಟ್ಟಿಗೆಯಲ್ಲಿ ಗೆಡ್ಡೆ ಬೆಳೆದು ಸ್ವರವೇ ಸಂಪೂರ್ಣ ಸ್ತಬ್ಧವಾಗಿ ಹೋಗಿದೆ.
Carotid body tumor ಎಂಬ ವಿಚಿತ್ರ ಖಾಯಿಲೆ. ಈಗ ಅತೀ ಶೀಘ್ರದಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ಅನಿವಾರ್ಯತೆ ಎದುರಾಗಿದೆ. ಬರೋಬ್ಬರಿ 8 ಲಕ್ಷ ರೂಪಾಯಿ. ಇದರಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿ ಆಯುಷ್ಮಾನ್ ಯೋಜನೆಯಲ್ಲಿ ಸಿಗಬಹುದು. ಹಾಗೆ ಹೀಗೆ ಅವರು ಇವರು ಎಂದರೂ 2 ಲಕ್ಷ ರೂಪಾಯಿ ಸಂಗ್ರಹ ಆಗಬಹುದು. ಮತ್ತೆ ಲಕ್ಷಾಂತರ ರೂಪಾಯಿಗಳ ಅಗತ್ಯವಿದೆ. ಹೀಗಾಗಿ ನಿಮ್ಮ ಕಾಲ ಬುಡಕ್ಕೆ ಬಂದಿದ್ದೇವೆ.
ನಾವು ಹಾಕುವ ಒಂದಷ್ಟು ಮೊತ್ತ ಆತನ ಆರೋಗ್ಯ ಮಾತ್ರವಲ್ಲ ಕುಟುಂಬವನ್ನೇ ಅಪಾಯದ ಅಂಚಿನಿಂದ ಪಾರು ಮಾಡಬಹುದು ದಯವಿಟ್ಟು ಸಹೃದಯ ಬಂದುಗಳು ಇವರಿಗೆ ಚಿಕಿತ್ಸೆಗೆ ಆರ್ಥಿಕ ಸಹಕಾರ ನೀಡಬೇಕಾಗಿ ವಿನಂತಿ.
ಹೆಸರು ವಿಘ್ನೇಶ್. ತಾಯಿ ಚಂಪಾ ಹಾಗೂ ತಂದೆ ಸುಧಾಕರ. ದೂರವಾಣಿ ಹಾಗೂ ಗೂಗಲ್ ಪೇ ಸಂಖ್ಯೆ 7022942521. ಇಲ್ಲಿ ಸ್ಕ್ಯಾನರ್ ಹಾಕಿದ್ದೇವೆ. ಅದಕ್ಕೂ ವೈದ್ಯಕೀಯ ನೆರವು ಹಾಕಬಹುದು. ಅವಶ್ಯಕತೆ ಇದ್ದರೆ ಅವರಿಗೆ ಕರೆಮಾಡಿ ವಿಚಾರಿಸಬಹುದು.
ತಮ್ಮ ಸಹಾಯದ ನಿರೀಕ್ಷೆಯಲ್ಲಿ ನಾವು ಮಾತ್ರವಲ್ಲ, ನಮ್ಮ ತಂಡ ಹಾಗೂ ಆತನ ಕುಟುಂಬವಿದೆ… ಶೇರ್ ಮಾಡಿ ಜೀವ ಉಳಿಸಿ, ದಯವಿಟ್ಟ “ಭಿಕ್ಷಾಂದೇಹಿ” ಸುನಿಲ್ ಪಣಪಿಲ