March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನಗರ ಪಂಚಾಯತದ ಒಳಚರಂಡಿಗೆ ಬಿದ್ದ ದನ: ಅಗ್ನಿಶಾಮಕದವರ ಸಹಕಾರದಿಂದ ಮೇಲಕ್ಕೆ

ಬೆಳ್ತಂಗಡಿ: ಇಲ್ಲಿಯ ಕೃಷಿ ಇಲಾಖೆಯ ಬಳಿಯಲ್ಲಿ ನಗರ ಪಂಚಾಯತಕ್ಕೆ ಸೇರಿದ ಒಳಚರಂಡಿಗೆ ದನವೊಂದು ಬಿದ್ದು ಮೇಲೆ ಹತ್ತಲಾಗದೆ ಒದ್ದಾಡಿದ ಘಟನೆ ಇಂದು ನಡೆದಿದ್ದು, ನಂತರ ಬೆಳ್ತಂಗಡಿ ಅಗ್ನಿಶಾಮದ ದಳವದವರ ಸಹಕಾರದಿಂದ ದನವನ್ನು ಮೇಲೆತ್ತಲಾಯಿತು.


ಬೆಳ್ತಂಗಡಿ ನಗರದ ಒಳಗಚರಂಡಿ ಕೃಷಿ ಇಲಾಖೆ ಬಳಿಯಿಂದ ಹಾದುಹೋಗಿದ್ದು, ಒಳಚರಂಡಿಯ ಮೇಲ್ಗಡೆ ಸ್ಲೇಫ್ ಹಾಕದೆ ಹಲವು ವರ್ಷಗಳು ಕಳೆದಿದೆ. ಒಳಚರಂಡಿ ಓಪನ್ ಆಗಿದ್ದು, ಇಂದು ಬೆಳಿಗ್ಗೆ ಬೀಡಾಡಿ ದನವೊಂದು ಮೇಯುತ್ತಾ ಬಂದು ಒಳಚರಂಡಿಗೆ ಆಕಸ್ಮಿಕವಾಗಿ ಬಿದ್ದಿತ್ತು. ಮೇಲೆ ಹತ್ತಲಾಗದೆ ಒದ್ದಾಡುತ್ತಿದ್ದ ದನವನ್ನು ಕಂಡು ಸ್ಥಳೀಯರು ಕೃಷಿ ಇಲಾಖೆಯವರ ಹಾಗೂ ನಗರ ಪಂಚಾಯತದ ಗಮನಕ್ಕೆ ತಂದಿದ್ದರು. ಬಳಿಕ ಬೆಳ್ತಂಗಡಿ ಅಗ್ನಿಶಾಮಕದವರಿಗೆ ಮಾಹಿತಿ ನೀಡಿ, ಅವರು ಸ್ಥಳಕ್ಕೆ ಆಗಮಿಸಿ, ಜೆಸಿಬಿ ಮೂಲಕ ಒಳಚರಂಡಿಯಲ್ಲಿ ಸಿಲುಕಿಕೊಂಡಿದ್ದ ದನವನ್ನು ಮೇಲೆತ್ತಲಾಯಿತು. ಇಲ್ಲಿ ಈಗಾಗಲೇ ಮೂರ‍್ನಾಲ್ಕು ಇಂತಹ ಘಟನೆಗಳು ಈಗಾಗಲೇ ನಡೆದಿದೆ. ಕೃಷಿ ಇಲಾಖೆಯ ಅಧಿಕಾರಿಗಳು ನ.ಪಂ ಸದಸ್ಯ ಜಗದೀಶ್, ನ.ಪಂ ಕರುಣಾಕರ್ ಮತ್ತಿತರರು ಉಪಸ್ಥಿತರಿದ್ದರು. ಒಳಚರಂಡಿಗೆ ಮೇಲ್ಗಡೆ ಸ್ಲಾಬ್ ಹಾಕಲು 15ನೇ ಹಣಕಾಸು ಯೋಜನೆಯಲ್ಲಿ ಅನುದಾನ ಇಡಲಾಗಿದ್ದು, ಟೆಂಡರ್ ಹಂತದಲ್ಲಿದೆ. ಇದರ ಕಾಮಗಾರಿ ಶೀಘ್ರವಾಗಿ ನಡೆಯಲಿದೆ ಎಂದು ಜಗದೀಶ್ ಡಿ. ತಿಳಿಸಿದ್ದಾರೆ.

Related posts

ಅಟ್ಲಾಜೆ ದ.ಕ.ಜಿ.ಪ.ಕಿ.ಪ್ರಾ ಶಾಲೆಯಲ್ಲಿ ಅ೦ತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ದಿನಾಚರಣೆ

Suddi Udaya

ಕಾಂಗ್ರೆಸ್‌ ಕಾರ್ಯಕರ್ತರಾದ ಜೋಜಿ ಕಳೆಂಜ ಹಾಗೂ ಗಂಡಿಬಾಗಿಲಿನ ಅಜಿತ್ ಪಿ.ಎಮ್ ರವರು ಬಿಜೆಪಿ ಸೇರ್ಪಡೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ಸಾಹಿತ್ಯ ಸಮ್ಮೇಳನ: ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ 92ನೇ ಅಧಿವೇಶನ ಉದ್ಘಾಟಿಸಿದ ಶತಾವಧಾನಿ ಡಾ. ರಾ. ಗಣೇಶ್

Suddi Udaya

ಫೆ.1-5: ನಿಟ್ಟಡೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರ ಬರ್ಕಜೆಯಲ್ಲಿ 9ನೇ ವರ್ಷದ ಜಾತ್ರಾ ಮಹೋತ್ಸವ

Suddi Udaya

ಬಂಗಾಡಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!