24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ : ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಡಂತ್ಯಾರ್ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆ ಧರ್ಮಸ್ಥಳದ ವಿದ್ಯಾರ್ಥಿಗಳು ಒಟ್ಟು ಐದು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿರುತ್ತಾರೆ.

ಹತ್ತನೇ ತರಗತಿಯ ಕುಮಾರಿ ಪ್ರಜ್ಞಾ ಕನ್ನಡ ಭಾಷಣ ಪ್ರಥಮ, ಎಂಟನೇ ತರಗತಿಯ ಕುಮಾರಿ ವಿನನ್ಯ ಸಂಸ್ಕೃತ ಭಾಷಣ ಪ್ರಥಮ, ಹತ್ತನೇ ತರಗತಿಯ ಕುಮಾರಿ ಹರ್ಷಿತ ಛದ್ಮವೇಷ ಪ್ರಥಮ, ಎಂಟನೇ ತರಗತಿಯ ಕುಮಾರಿ ಪಂಚಮಿ ಚಿತ್ರಕಲೆ ಪ್ರಥಮ, ಸ್ಥಾನಗಳನ್ನು ಗಳಿಸಿ, ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಹಾಗೂ 9ನೇ ತರಗತಿಯ ಖೈರುನ್ನೀಸಾ ಹಿಂದಿ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿರುತ್ತಾರೆ.

ಮುಖ್ಯೋಪಾಧ್ಯಾಯರ ಮಾರ್ಗದರ್ಶನದಲ್ಲಿ ಅಧ್ಯಾಪಕ ಬಂಧುಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.

Related posts

ಬೆಳ್ತಂಗಡಿ: ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜಾತ್ರೋತ್ಸವ ಸಮಿತಿಯ ನೂತನ ಪದಾದಿಕಾರಿಗಳ ಆಯ್ಕೆ

Suddi Udaya

ದ.ಕ. ಲೋಕಸಭಾ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಗೆಲುವು

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಕಳೆಂಜದಲ್ಲಿ ರಾಜೇಶ್ ಎಂ.ಕೆ ಯವರ ಮೇಲೆ ನಡೆದ‌ ಕೊಲೆ ಯತ್ನ ಖಂಡನೀಯ: ಬಿಜೆಪಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರೇಮಚಂದ್ರ ಕೆ.

Suddi Udaya

ಗೇರುಕಟ್ಟೆ ಫ್ರೆಂಡ್ಸ್ ಮತ್ತು ಗಲ್ಫ್ ಗೈಸ್ ವತಿಯಿಂದ ಜಿ.ಪಿ.ಎಲ್ – 2024 ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya
error: Content is protected !!