24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿ

ಭಾರತೀಯ ಸೇನೆಯಲ್ಲಿ ಸುಮಾರು 29 ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಸೈನಿಕ ಕುಕ್ಕೇಡಿಯ ಚಂದ್ರಹಾಸ ಪೂಜಾರಿ ನಿಧನ: ತಿಂಗಳ ಅಂತರದಲ್ಲಿ ‌ ಪತಿ -ಪತ್ನಿ ಸಾವು

ಬೆಳ್ತಂಗಡಿ: ಭಾರತೀಯ ಸೇನೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತಿ ಹೊಂದಿದ್ದ ಕುಕ್ಕೇಡಿ ಹರೇ ರಾಮ್ ನಿವಾಸದ ಚಂದ್ರಹಾಸ ಪೂಜಾರಿ (74 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಒಂದು ತಿಂಗಳ ಹಿಂದೆ ಚಂದ್ರಹಾಸ ಪೂಜಾರಿಯವರ ಪತ್ನಿ ಬೇಬಿ ನಿಧನರಾಗಿದ್ದು , ತಿಂಗಳೊಳಗೆ ಗಂಡ ಹೆಂಡತಿ ಸಾವನ್ನಪಿದ್ದು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ಚಂದ್ರಹಾಸ ಪೂಜಾರಿಯವರು ಭಾರತೀಯ ಸೇನೆಯಲ್ಲಿ ಸುಮಾರು 29 ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದರು.

1971 ರಲ್ಲಿ ಭಾರತ- ಪಾಕಿಸ್ಥಾನ ಯುದ್ದದಲ್ಲಿ ಭಾಗವಹಿಸಿ ಸೇನೆಯಿಂದ ಪದಕ ಪಡೆದುದು ಇವರ ಹೆಗ್ಗಳಿಕೆಯಾಗಿದೆ.

ಮೃತರು ಒರ್ವ ಪುತ್ರ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಕನ್ಯಾಡಿ-2 ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬಂದಾರು: ಮೈರೋಳ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಸಂಭ್ರಮ

Suddi Udaya

ಆ.28 : ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿಯ ಕ್ಷೇತ್ರ ಪ್ರತಿನಿಧಿ (ARC) ಸಭೆ

Suddi Udaya

ಉಜಿರೆ: ಮಾಚಾರು ದರ್ಖಾಸು ನಿವಾಸಿ ಸುಂದರಿ ನಿಧನ

Suddi Udaya

ಮರೋಡಿ ಗ್ರಾ.ಪಂನಿಂದ ಪೆರಾಡಿಯಲ್ಲಿ ನಿರ್ಮಿಸಲಾದ ರೂ.5.60 ಲಕ್ಷ ವೆಚ್ಚದ ಸೋಲಾರ್ ದೀಪ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

Suddi Udaya

ಬೆಳಾಲು ಗ್ರಾಮ ಪಂಚಾಯತ್‌ನಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!