22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿ

ಕುಂಬಾರರ ಸೇವಾ ಸಂಘದ ಮಾಸಿಕ ಸಭೆ: ಸಂಘದ ಅಧ್ಯಕ್ಷ ಹೆಚ್. ಪದ್ಮಕುಮಾರ್ ಅಧ್ಯಕ್ಷತೆ

ಬೆಳ್ತಂಗಡಿ : ಕುಂಬಾರರ ಸೇವಾ ಸಂಘದ ಮಾಸಿಕ ಸಭೆಯು ನ.12ರಂದು ಸಂಘದ ಸದಸ್ಯರಾದ ಸಂಜೀವ ಎನ್. ರವರ ಮನೆಯಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಹೆಚ್. ಪದ್ಮಕುಮಾರ್ ರವರು ವಹಿಸಿದ್ದರು. ಪ್ರಾರಂಭದಲ್ಲಿ ಸಂಘದ ಕಾರ್ಯದರ್ಶಿ ರಾಜು ಬಿ. ಹೆಚ್. ರವರು ಸ್ವಾಗತಿಸಿದರು. ಅಧ್ಯಕ್ಷರು ದೀಪಾವಳಿಯ ಶುಭಾಶಯಗಳೊಂದಿಗೆ ಮಾತನಾಡುತ್ತಾ, ಎಲ್ಲ ಸದಸ್ಯರು ಮುಂದಿನ ಸಭೆಯಲ್ಲಿ ಭಾಗವಸುವಂತೆ ವಿನಂತಿಸಿದರು. ಉಪಾಧ್ಯಕ್ಷರಾದ ಕೃಷ್ಣಪ್ಪ ರವರು ಸಂಘಕ್ಕೆ ಟೇಬಲ್ ಒಂದನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು. ಸಂಘದ ಕೋಶಧಿಕಾರಿ ಸಂಜೀವ ರವರು ಉಚಿತವಾಗಿ 5 ಚೇರ್, ಅಧ್ಯಕ್ಷರು 10 ಚೇರ್, ಹರೀಶ್ 5 ಚೇರ್, ವಸಂತ ಹೇಬೆ 1, ಭಾಸ್ಕರ್ 1, ಸಂಜೀವ ಹೇಬೆ 1, ಹಾಗೂ ಸಾಂತಪ್ಪ ಸಂಜಯ ನಗರ 3 ಮತ್ತು ಬೊಮ್ಮಯ್ಯ ಉದಯ ನಗರ 1 ಚಯರ್ ಗಳನ್ನು ನೀಡುವುದಾಗಿ ಹೇಳಿದರು.ದಾನಿಗಳಿಗೆ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ಮಾಡುವ ಬಗ್ಯೆ ಚಿಂತಿಸಲಾಗುವುದೆಂದು ತಿಳಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ವಂದಿಸಿದರು.

Related posts

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಕಲಿಕಾ ಹಬ್ಬ

Suddi Udaya

ನಡ ಸರಕಾರಿ ಪ್ರೌಢಶಾಲೆಗೆ “ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಅಭ್ಯುದಯ ಉತ್ತಮ ಶಾಲಾ ಪ್ರಶಸ್ತಿ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ಘಟಕದಿಂದ ಅನುಗ್ರಹ ವೃದ್ದಾಶ್ರಮದಲ್ಲಿ ಮಹಿಳಾ ದಿನಾಚರಣೆ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

Suddi Udaya

ಉಜಿರೆ: ಕುಂಜರ್ಪದಲ್ಲಿ 4ನೇ ವರ್ಷದ ದುರ್ಗಾಪೂಜೆ

Suddi Udaya

ಇಳಂತಿಲ ಗ್ರಾ. ಪಂ. ನ ಪ್ರಭಾರ ಅಧ್ಯಕ್ಷರಾಗಿ ಸವಿತಾ ಹೆಚ್. ಅಧಿಕಾರ ಸ್ವೀಕಾರ

Suddi Udaya
error: Content is protected !!