23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಗುರುವಾಯನಕೆರೆ: ಮಹಿಳೆಗೆ ಜೀವಬೆದರಿಕೆ, ಹಲ್ಲೆ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಗುರುವಾಯನಕೆರೆ : ಗುರುವಾಯನಕೆರೆ ದರ್ಗಾ ಬಳಿ ಮಹಿಳೆ ಮತ್ತು ಆಕೆಯ ಪತಿ ಸ್ಕೂಟರ್‌ ನಲ್ಲಿ ತೆರಳುತ್ತಿದ್ದಾಗ ,ಕಾರಿನಲ್ಲಿ ಬಂದ ಆರೋಪಿಗಳ ವಿರುದ್ದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ವಿಚಾರವಾಗಿ ತಕರಾರು ತೆಗೆದು, ಮಹಿಳೆಗೆ ಹಾಗು ಅವರ ಪತಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಒಡ್ಡಿರುವುದಲ್ಲದೇ, ಹಲ್ಲೆ ನಡೆಸಿರುವ ಘಟನೆ ನ.11 ರಂದು ವರದಿಯಾಗಿದೆ.

ನ .11ರಂದು ಮಹಿಳೆಯು ತನ್ನ ಪತಿಯೊಂದಿಗೆ ಸ್ಕೂಟರ್‌ ನಲ್ಲಿ ಕುವೆಟ್ಟು ಗ್ರಾಮದ ಗುರುವಾಯನಕೆರೆ ದರ್ಗಾ ಬಳಿ ತೆರಳುತ್ತಿದ್ದಾಗ, ಕಾರಿನಲ್ಲಿ ಬಂದ ಆರೋಪಿಗಳಾದ ಗೋಳಿಯಂಗಡಿಯ ಆಸೀಪ್‌ ,ಹಂಝತ್‌ ಖರ್ರೆ, ನೌಷದ್‌ ,ಲತೀಫ್‌ ಎಂಬವರುಗಳು, ಮಹಿಳೆ ಬರುತ್ತಿದ್ದ ಸ್ಕೂಟರನ್ನು ತಡೆದು ನಿಲ್ಲಿಸಿ, ಆರೋಪಿಗಳ ವಿರುದ್ದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ವಿಚಾರವಾಗಿ ತಕರಾರು ತೆಗೆದು, ಮಹಿಳೆಗೆ ಹಾಗು ಅವರ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಒಡ್ಡಿರುವುದಲ್ಲದೇ, ಹಲ್ಲೆ ನಡೆಸಿರುತ್ತಾರೆ.

ಬಳಿಕ ಆರೋಪಿಗಳು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ 112/2023 ಕಲಂ 341,323,354,504,506 r/w 34 ಭಾ ದಂ ಸಂ. ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಕುತ್ಲೂರು: ಬಜಿಲಪಾದೆಯಲ್ಲಿ ಚಿರತೆ ಪತ್ತೆ

Suddi Udaya

ಮಡಂತ್ಯಾರು ನಲ್ಲಿ ಅಮಿತ್ ಶಾ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Suddi Udaya

ಶಿಬಾಜೆ: ಕಾಡುಹಿತ್ತಿಲು ನಿವಾಸಿ ಶಂಕರನಾರಾಯಣ ಭಟ್ ನಿಧನ

Suddi Udaya

ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರ ವ್ಯಾಪ್ತಿಯ ಶಾಲೆಯ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ವಾಣಿ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು

Suddi Udaya

ಗುರುದೇವ ಮಠದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಮೊಗ್ರು: ಸರಕಾರಿ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!