23.3 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಚಾರ್ಮಾಡಿಯಲ್ಲಿ ಕಾಡುಪ್ರಾಣಿ ಬೇಟೆ: ಬೆಳ್ತಂಗಡಿ ಅರಣ್ಯಾಧಿಕಾರಿಗಳ ತಂಡ ದಾಳಿ

ಬೆಳ್ತಂಗಡಿ : ಕಾಡುಪ್ರಾಣಿ ಬೇಟೆಯಾಡಿ ಮಾಂಸ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯಾಧಿಕಾರಿಗಳ ತಂಡ ದಾಳಿ ಮಾಡಿದೆ. ದಾಳಿ ವೇಳೆ ಮಾಂಸ ಸಮೇತ ಇಬ್ಬರು ಆರೋಪಿಗಳು ಪರಾರಿಯಾಗಿರುವ ಘಟನೆ ಬೆಳ್ತಂಗಡಿಯ ಚಾರ್ಮಾಡಿಯಲ್ಲಿ ನ.13 ರಂದು(ಇಂದು) ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಹೊಸಮಠ ಎಂಬಲ್ಲಿಯ ಗಿರೀಶ್.ಎಮ್.ಆರ್ ಎಂಬವರ ಮನೆಯಲ್ಲಿ ಕಾಡುಪ್ರಾಣಿ ಬೇಟೆಯಾಡಿ ಮಾಂಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ ನೇತೃತ್ವದ ತಂಡ ಇಂದು ಸಂಜೆ 5 ಗಂಟೆ ಸುಮಾರಿಗೆ ದಾಳಿ ಮಾಡಿದ್ದು ಈ ವೇಳೆ ಆರೋಪಿ ಗಿರೀಶ್.ಎಮ್.ಆರ್ ಮತ್ತು ಬಿಜು ಎಂಬಾತ ಮಾಂಸ ಸಮೇತ ಹಿಡಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಮನೆ ಹಿಂಭಾಗದಲ್ಲಿ ಮಾಂಸ ಮಾಡಲು ಉಪಯೋಹಿಸಿದ ಒಂದು ಬುಟ್ಟಿ , ಗೋಣಿ ಚೀಲಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದು. ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ.ಆರೋಪಿ ಗಿರೀಶ್ ಮೇಲೆ 2016 ರಲ್ಲಿ ಕಾಡುಪ್ರಾಣಿ ಬೇಟೆಯಾಡಿ ಬೆಳ್ತಂಗಡಿ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿ ಬಿದ್ದು ಬಂದೂಕು ಜಪ್ತಿಯಾಗಿ ಪ್ರಕರಣ ಕೋರ್ಟ್ ನಲ್ಲಿದೆ.ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ , ಡಿ.ಆರ್.ಎಫ್.ಓ ರವೀಂದ್ರ ಅಂಕಲಾಗಿ,ಡಿ.ಆರ್.ಎಫ್.ಓ ರವೀಂದ್ರ.ಕೆ ,ಡಿ.ಆರ್.ಎಫ್.ಓ ಪೂಜಾ,ಗಸ್ತು ಅರಣ್ಯ ಪಾಲಕ ಅಖಿಲೇಶ್, ಸತೀಶ್, ಪಾಂಡುರಂಗ ಕಮತಿ, ಸಂತೋಷ್.ಬಿ, ವಾಹನ ಚಾಲಕ ಕುಸಲಪ್ಪ ಗೌಡ, ಗೃಹರಕ್ಷಕ ದಳದ ಸಿಬ್ಬಂದಿ ಸೌಮ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಅರಣ್ಯ ಇಲಾಖೆ ವತಿಯಿಂದ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ: ಸಾರ್ವಜನಿಕರಿಗೆ ಕೊಕ್ಕಡ ಗ್ರಾ.ಪಂ. ಹಾಗೂ ಅರಣ್ಯ ಇಲಾಖೆಯ ವತಿಯಿಂದ ಎಚ್ಚರಿಕೆಯ ಸಂದೇಶ

Suddi Udaya

ಎಪಿಎಂಸಿ ನಿವೃತ್ತ ಕಾರ್ಯದರ್ಶಿ ವೆಂಕಪ್ಪ ಗೌಡ ಕೈಯಾಡಿ ನಿಧನ

Suddi Udaya

ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ವ್ಯವಹಾರ ಆಡಳಿತ ಆಯೋಜಿಸಿದ್ದ ‘ಏಕತ್ವಮ್’ ಅಂತರ್ ತರಗತಿ ಫೆಸ್ಟ್ ನ ಸಮಾರೋಪ ಸಮಾರಂಭ

Suddi Udaya

ಮಡಂತ್ಯಾರು ರಸ್ತೆಯ ಬದಿಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆೆ ಸಾರ್ವಜನಿಕರ ಒತ್ತಾಯ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಞವಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ಉದ್ಘಾಟನೆ

Suddi Udaya

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

Suddi Udaya
error: Content is protected !!