ಬೆಳ್ತಂಗಡಿ: ಬಾಲವಿಕಾಸ ಸಮಿತಿ, ಸುದೆಮುಗೇರು ಇದರ ಆಶ್ರಯದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ಎಂಬಲ್ಲಿ
ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರಿಗೆ ಗೌರವಾರ್ಪಣೆ ಮತ್ತು ದಾನಿಗಳಿಗೆ ಸನ್ಮಾನ ಸಮಾರಂಭ ನ. 14ರಂದು ವೈವಿಧ್ಯಮಯವಾಗಿ ಜರುಗಿತು.
ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಅಂಗನವಾಡಿ ಮಕ್ಕಳು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಗರ ಪಂಚಾಯತ್ ಹಿರಿಯ ಸದಸ್ಯ ಡಿ. ಜಗದೀಶ್ ಅವರು ವಹಿಸಿ, ಸುದೇಮುಗೇರು
ಅಂಗನವಾಡಿಗೆ ಸ್ವಂತ ಕಟ್ಟಡ ಬೇಕೆಂಬ ಈ ಭಾಗದ ಜನರ ಬೇಡಿಕೆ ಈಡೇರಿದೆ. ಕಟ್ಟಡ ನಿರ್ಮಾಣಕ್ಕೆ ಇಲಾಖೆ ಜೊತೆಗೆ ಧ್ವಜಸ್ತಂಭ ಸೇರಿದಂತೆ ಮೂಲಭೂತ ಸೌಕರ್ಯ ದಗಿಸಲು ಹಲವಾರು ಮಂದಿ ದಾನಿಗಳು ಸಹಾಯ ಮಾಡಿದ್ದಾರೆ. ಅಂಗನವಾಡಿಯನ್ನು ಸುವ್ಯವಸ್ಥಿತ ರೀತಿಯಲ್ಲಿ ಇಟ್ಟುಕೊಳ್ಳುವುದು ಬಾಲವಿಕಾಸ ಸಮಿತಿ ಮತ್ತು ಊರವರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮುಖ್ಯ ಅಭ್ಯಾಗತರಾಗಿ ಸಿ.ಡಿ.ಪಿ.ಒ ಪ್ರಿಯಾ ಆಗ್ನೇಸ್, ಪುಂಜಾಲಕಟ್ಟೆ ಪದವಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ಗಣಪತಿ ಭಟ್ ಕುಳಮವ೯, ನ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ನಾಯ್ಕ,
ಬೆಳ್ತಂಗಡಿ ತಾ.ಪಂ ವ್ಯವಸ್ಥಾಪಕ ಪ್ರಶಾಂತ್ ಡಿ. ಬಳೆಂಜ, ನ.ಪಂ ಮುಖ್ಯಾಧಿಕಾರಿ ರಾಜೇಶ್, ಇಂಜಿನಿಯರಿಂಗ್ ಮಹಾವೀರ ಆರಿಗಾ , ನ.ಪಂ ಮಾಜಿ ನಾಮನಿರ್ದೇಶನ ಸದಸ್ಯ ಮೆಹಬೂಬ್, ಅಂಗನವಾಡಿಗಳ ಮೇಲ್ವಿಚಾರಕಿ ಗುಲಾಬಿ, ಅಂಗನವಾಡಿ ಕಾರ್ಯಕರ್ತೆ ದಿವ್ಯಾ ಶೇಖರ್ ಭಾಗವಹಿಸಿದ್ದರು.
ಸಮಾರಂಭದಲ್ಲಿ ಪೌರಕಾರ್ಮಿಕರಾದ
ಅಶೋಕ್, ಸುರೇಶ್, ಸತೀಶ್, ಗುರುವ, ಸದಾನಂದ, ಬಟ್ಯ, ಹರೀಶ್, ವಸಂತ, ಚಂದ್ರಭೂವಿ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು . ವ್ಯವಸ್ಥೆ ನಿವ೯ಹಣೆ ಮೇಲ್ವಿಚಾರಕ ಕರುಣಾಕರ ಇವರನ್ನು ಗುರುತಿಸಿ ಸಲಾಯಿತು.
ಅಂಗನವಾಡಿಗೆ ಧ್ವಜಸ್ತಂಭ ಕೊಡುಗೆಯಾಗಿ ನೀಡಿದ ಉಮೇಶ್ ಸುದೇಮುಗೇರು ಮೆಸ್ಕಾಂ ಬಂಟ್ವಾಳ, ಮಕ್ಕಳಿಗಾಗಿ 50 ಕುರ್ಚಿಗಳನ್ನು ದಿ| ಸುರೇಶ್ ರಾವ್ ಸ್ಮರಣಾರ್ಥ ಕೊಡುಗೆಯಾಗಿ ನೀಡಿದ
ಅವರ ಮಕ್ಕಳು ಅನ್ನಪೂರ್ಣ ಮೆಡಿಕಲ್ಸ್ ಧಮ೯ಸ್ಥಳ, ಸಂತೋಷ್ ಶೆಟ್ಟಿ ಸಿ.ವಿ.ಕೆ ಕನ್ಟ್ರಕ್ಷನ್ ಹುಬ್ಬಳ್ಳಿ, ಬಿಸಿ ನೀರಿನ ಫಿಲ್ಟರ್ ಒದಗಿಸಿದ ಕೊರಗಪ್ಪ ಹೆಗ್ಡೆ ಸುದೇಮುಗೇರು, ಸಿಹಿ ತಿಂಡಿ ಒದಗಿಸಿದ ಯುವರಾಜ ಹೆಗ್ಡೆ
ಆಟದ ಸಾಮಾನುಗಳನ್ನು ಒದಗಿಸಿದವರು, ಭೋಜನದ ವ್ಯವಸ್ಥೆ ಮತ್ತು, ಮಕ್ಕಳ ಪುಸ್ತಕ ಚೀಲ ಇಡಲಿಕ್ಕೆ ರಾಕ್ ಒದಗಿಸಿದ ಜಗದೀಶ್ ಡಿ.,ಧ್ವನಿವಧ೯ಕದ ವ್ಯವಸ್ಥೆ ಒದಗಿಸಿ ಚಂದ್ರಕಾಂತ್ , ಹೂವಿನ ಅಲಂಕಾರ ಮಾಡಿದ ಕೇಶವ ಹೆಗ್ಡೆ ಇವರನ್ನುಸನ್ಮಾನಿಸಲಾಯಿತು. 35 ಸ್ಮರಣಿಕೆ ಒದಗಿಸಿದ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಮಕ್ಕಳ ದಿನಾಚರಣೆ ಅಂಗವಾಗಿ ಅಂಗನವಾಡಿ ಪುಟಾಣಿಗಳಿಗೆ, ಅಂಗನವಾಡಿಯ ನಿಕಟಪೂರ್ವ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಆರೋಗ್ಯ ಸಹಾಯಕಿ ಶ್ರೀಮತಿ ಕಮಲ ಇವರನ್ನು ಗೌರವಿಸಲಾಯಿತು. ಅಂಗನವಾಡಿ ಸಹಾಯಕಿ ರೋಹಿಣಿ ಸಹಕರಿಸಿದರು.
ಸಿಂಧೂಶ್ರೀ ಇವರ ಪ್ರಾಥ೯ನೆ ಬಳಿಕ ವಾಡ್೯ ಸದಸ್ಯ ಡಿ. ಜಗದೀಶ್ ಸ್ವಾಗತಿಸಿದರು. ಪತ್ರಕರ್ತ ಆಶ್ರಫ್ ಆಲಿಕುಂಞಿ ಕಾಯ೯ಕ್ರಮ ನಿರೂಪಿಸಿದರು. ಜಿ.ಪಂ.ಇಂಜಿಯರಿಂಗ್
ಉಪವಿಭಾಗದ ಸಿಬಂದಿ ಅಶೋಕ್ ಧನ್ಯವಾದ ವಿತ್ತರು.