ಬೆಳ್ತಂಗಡಿ: ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆ ವಿರುದ್ಧ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಧಾರ ರಹಿತ ಸುದ್ದಿ ಪ್ರಸಾರಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಉದ್ಯಮಿ ಅಶ್ವಥ್ ಹೆಗ್ಡೆಯವರ ವಿರುದ್ಧ ಅನೇಕ ದಿನಗಳಿಂದ ಆಧಾರ ರಹಿತ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಸದ್ರಿ ಆರೋಪಗಳ ವಿರುದ್ಧ ಮಾನ್ಯ ಉಚ್ಚ ನ್ಯಾಯಾಲಯವು ವಿಚಾರಣೆ ನಡೆಸಿ ತಡೆಯಾಜ್ಞೆ ನೀಡಿದ್ದರೂ, ಕೆಲವೊಂದು ವ್ಯಕ್ತಿಗಳು ವೈಯಕ್ತಿಕ ಹಿತಾಸಕ್ತಿಯಿಂದ ಅಶ್ವಥ್ ಹೆಗ್ಡೆ ಮತ್ತು ಅವರ ಸಂಸ್ಥೆ ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಆಕ್ಷೇಪಾರ್ಹ ಪದಗಳಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ವರದಿ ಮಾಡುತ್ತಿದ್ದು,ಸದ್ರಿ ಸುಳ್ಳು ವರದಿಗಳ ವಿರುದ್ಧ ಅಶ್ವಥ್ ಹೆಗ್ಡೆಯವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಲ್ಲಿ , ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ನಿರ್ಬಂಧಿಸಿದೆ. ಅಶ್ವಥ್ ಹೆಗ್ಡೆಯವರ ಪರವಾಗಿ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ , ಪ್ರಕಾಶ್ ಶರ್ಮ ವಾದಿಸಿದ್ದರು ಹಾಗೂ ಸುಯೋಗ್ ಹೇರಳೆ ವಕಾಲತ್ ವಹಿಸಿದ್ದರು.
ಅಶ್ವಥ್ ಹೆಗ್ಡೆಯವರು ಈಗಾಗಲೇ ಆಧಾರ ರಹಿತವಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಿ ಮಾನ ಹಾನಿ ಮಾಡಿ ಮಾನಸಿಕ ಹಿಂಸೆಯನ್ನು ನೀಡಿರುವವರ ವಿರುದ್ಧ 10ಕೋಟಿ ಪರಿಹಾರ ಆಗ್ರಹಿಸಿ ಕ್ರಿಮಿನಲ್ ಮಾನಹಾನಿ ಮೊಕದ್ದಮೆಯನ್ನು ಹೂಡುವುದಾಗಿ ತಿಳಿಸಿದ್ದಾರೆ.