ನ.19: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ರೋಗ ತಪಾಸಣಾ ಶಿಬಿರ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಗ್ಗಡೆಯವರ ಹಾಗೂ ಮಾತೃಶ್ರೀ ಅಮ್ಮನವರ ನಿರ್ದೇಶನದಂತೆ ನ.19 ರಂದು ಆದಿತ್ಯವಾರ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.೦೦ರವರೆಗೆ ಮಕ್ಕಳ ರೋಗ ತಪಾಸಣಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ 14 ವರ್ಷದೊಳಗಿನ ಎಲ್ಲಾ ಮಕ್ಕಳ ರೋಗ ತಪಾಸಣೆ ಉಚಿತವಾಗಿ ನಡೆಸಲಾಗುವುದು.

ಅಸ್ತಮ, ಉಬ್ಬಸ ಅತಿಸಾರ (ಅತಿಭೇದಿ), ಮಲಬದ್ಧತೆ, ಜ್ವರ, ಅಲರ್ಜಿ, ರ್‍ಯಾಶಸ್ (ದದ್ದುಗಳು), ಚರ್ಮದ ಸೋಂಕು, ಕೆಮ್ಮು, ಕಫ, ಹೊಟ್ಟೆ ನೋವು, ಹಲ್ಲುನೋವು, ಕಟ್ಟಿಕೊಳ್ಳುವ ಮೂಗು, ವಾಕರಿಕೆ ಮತ್ತು ವಾಂತಿ, ಪೌಷ್ಟಿಕಾಂಶದ ಕೊರತೆ, ಮೂರ್ಛೆರೋಗ, ಮಕ್ಕಳ ಬೆಳವಣಿಗೆಯ ಮೌಲ್ಯಮಾಪನ, ಜಾಂಡೀಸ್, ಸಾಮಾನ್ಯ ಪರೀಕ್ಷೆಗಳನ್ನು ನಡೆಸಲಾಗುವುದು.

ಮಕ್ಕಳರೋಗ ತಜ್ಞರಾದ ಡಾ| ಅರ್ಚನಾ ಕೆ.ಎಂ MBBS., MD (Pediatric) ಮಕ್ಕಳ ರೋಗ ತಪಾಸಣೆ ನಡೆಸಲಿದ್ದಾರೆ. ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿರುತ್ತದೆ. ಒಳರೋಗಿ ವಿಭಾಗದಲ್ಲಿ 10% , ಔಷಧದಲ್ಲಿ 10% , ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ದೊರೆಯಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!