September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವ

ಇಂದಬೆಟ್ಟು: ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವವು ಕಾರ್ಕಳ ದಾನಶಾಲಾ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಜ.4 ರಿಂದ 10 ವರೆಗೆ ನಡೆಯಲಿದೆ.

ಇಂದು( ಜ.4) ತೋರಣ ಮುಹೂರ್ತ, ವಿಮಾನ ಶುದ್ಧಿ, ಯಕ್ಷರಾಧನೆ, ಧ್ವಜಾರೋಹಣ, ನಿತ್ಯವಿಧಿ ಸಹಿತ ಕ್ಷೀರಾಭಿಷೇಕ ನಡೆಯಿತು.

ಈ ವೇಳೆ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿಯ ಸದಸ್ಯರು, ಬಂಗ್ವಾಡಿ ಮಾಗಣೆಯ ಸಮಸ್ತರು ಉಪಸ್ಥಿತರಿದ್ದರು.

ಸಂಜೆ ಶ್ರೀ ಕ್ಷೇತ್ರಪಾಲ ದೇವರಿಗೆ ಆರಾಧನಾ ಪೂರ್ವಕ ಕಲಾರೋಪಣೆ ನಡೆಯಲಿದೆ.

Related posts

ಸಿಎ ಪರೀಕ್ಷೆಯಲ್ಲಿ ಉಜಿರೆಯ ವಫಾ ಉತ್ತೀರ್ಣ

Suddi Udaya

ಮರೋಡಿ: ವಿದ್ಯುತ್ ಪರಿವರ್ತಕದಿಂದ ಬೆಂಕಿ ಅವಘಡ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಹಿಂದಿ ದಿನಾಚರಣೆ

Suddi Udaya

ಎಕ್ಸೆಲ್ ವಿದ್ಯಾರ್ಥಿನಿ ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ಏಳನೆಯ ಸ್ಥಾನ

Suddi Udaya

ಎಸ್ ಡಿ ಎಂ ಎನ್ ಎಸ್ ಎಸ್ ಘಟಕಕ್ಕೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೌರವ

Suddi Udaya

ಕಸ್ತೂರಿ ರಂಗನ್ ವರದಿ ಸಚಿವರ ಹೇಳಿಕೆಗೆ ದ.ಕ ಮಲೆಕುಡಿಯ ಸಂಘ ತೀವ್ರ ಆಕ್ಷೇಪ

Suddi Udaya
error: Content is protected !!