27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಬಾಜೆ: ಜಮೀನಿಗೆ ಅಳವಡಿಸಿದ ಮರದ ಬೇಲಿಯನ್ನು ತೆಗೆದು ಹಾಕಿ ಅಡಿಕೆಕೊಂಡು ಹೋದ ಪ್ರಕರಣ: ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ: ಮರದ ಬೇಲಿಯನ್ನು ತೆಗೆದು ಹಾಕಿ ಅಡಿಕೆ ಮರದಿಂದ ಅಡಿಕೆಕೊಂಡು ಹೋಗಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿಬಾಜೆ ಗ್ರಾಮದ ಎಲಿಯಮ್ಮ(67ವ) ಎಂಬವರು ಶಿಬಾಜೆ ಗ್ರಾಮದಲ್ಲಿರುವ ಜಮೀನಿಗೆ ಅಳವಡಿಸಿದ ಮರದ ಬೇಲಿಯನ್ನು ಸಿ.ಎಮ್.ಉಲಹನನ್ ಮತ್ತು ಸಿ.ಎಮ್.ರಾಜು ಎಂಬವರು ತೆಗೆದು ಹಾಕಿದ್ದಾರೆ. ಸದ್ರಿ ಜಾಗ ತಮ್ಮದೆಂದು ಹೇಳಿ ಜಮೀನಿನಲ್ಲಿದ್ದ ಅಡಿಕೆ ಮರದಿಂದ ಅಡಿಕೆಗಳನ್ನು ತೆಗೆಯುತ್ತಿದ್ದಾರೆ.
ನ.16ರಂದು ಬೆಳಿಗ್ಗೆ ಎಲಿಯಮ್ಮ ಅವರು ಜಾಗಕ್ಕೆ ಹೋದ ಸಮಯ ಆಪಾದಿತರು ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜಾಗದಲ್ಲಿದ್ದ ಅಡಿಕೆ ಮರದಿಂದ ಬಿದ್ದ ಸುಮಾರು ಅರ್ಧ ಗೋಣಿ ಚೀಲದಷ್ಟು ಅಡಿಕೆಯನ್ನು ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ವಿಚಾರಿಸಿದಾಗ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 90/2023ರಂತೆ ಕಲಂ 447, 506 ಜೊತೆಗೆ 34 ಐಪಿ ಸಿಯಂತೆ ಪ್ರಕರಣ ದಾಖಲಾಗಿದೆ.

Related posts

ಪರೀಕ ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕರಾಟೆ ಸ್ಪರ್ಧೆ

Suddi Udaya

ಕಡಿರುದ್ಯಾವರ ಆನೆ ಸಂತ್ರಸ್ತರ ಹೋರಾಟ ಸಮಿತಿಯಿಂದ ಕಾಡಂಚಿನಲ್ಲಿ ಆನೆಕಂದಕ ಮತ್ತು ಸೋಲಾರ್ ವಿದ್ಯುತ್ ಬೇಲಿ ರಚನೆಯ ಬೇಡಿಕೆಗೆ ಮನವಿ

Suddi Udaya

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳ ಗಿರಿಯಲ್ಲಿ ಸಂಭ್ರಮದ ನಾಗರಪಂಚಮಿ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

Suddi Udaya

ರಾಜ್ಯ ಮಟ್ಟದ ಸ್ಕೂಲ್ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ : ಎಸ್.ಡಿ.ಎಂ ಶಾಲೆಯ ವಿದ್ಯಾರ್ಥಿನಿ ಪ್ರಥಮ

Suddi Udaya
error: Content is protected !!