26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಸ.ಪ್ರ.ದ. ಕಾಲೇಜಿನಲ್ಲಿ ರೋವರ್ ರೇಂಜರ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

ಬೆಳ್ತಂಗಡಿ : ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನ. 18 ರಂದು 2023- 24ನೇ ಸಾಲಿನ ರೋವರ್ ರೇಂಜರ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಚಟುವಟಿಕೆಗಳನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನ ರೇಂಜರ್ ಲೀಡರ್ ದೀಪಿಕಾ ಎಸ್ ಇವರು ಉದ್ಘಾಟಿಸಿದರು.

ನಂತರ ಯುವ ರೆಡ್ ಕ್ರಾಸ್ ಘಟಕ ಹಾಗೂ ರೋವರ್ ರೇಂಜರ್ ಘಟಕಗಳ ಉದ್ದೇಶ ಮತ್ತು ಅದರಲ್ಲಿ ವಿದ್ಯಾರ್ಥಿಗಳ ಪಾತ್ರ ಏನು ಎಂಬುದನ್ನು ಸವಿವರವಾಗಿ ತಿಳಿಸಿದರು. ಈ ಘಟಕಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಸಂಸ್ಕಾರ ಸಾಮಾಜಿಕ ಕಳಕಳಿ ಹಾಗೂ ರಾಷ್ಟ್ರಕ್ಕೆ ಪೂರಕವಾಗಿ ನಡೆದುಕೊಳ್ಳುವ ವ್ಯಕ್ತಿತ್ವವನ್ನು ಬೆಳೆಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ರಾಘವ ಎನ್ ಇವರು ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಡಾ. ಸುಬ್ರಹ್ಮಣ್ಯ ಕೆ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಐಕ್ಯೂ ಎಸಿ ಸಂಚಾಲಕರಾದ ಡಾ. ಕುಶಾಲಪ್ಪ, ರೋವರ್ ಸ್ಕೌಟ್ ಲೀಡರ್ ಡಾ| ರವಿ ಎಮ್ ಏನ್ ಮತ್ತು ರೇಂಜರ್ ಲೀಡರ್ ಪ್ರೊಫೆಸರ್ ರಾಜೇಶ್ವರಿ ಉಪಸ್ಥಿತರಿದ್ದರು.

ದ್ವಿತೀಯ ಬಿಕಾಂನ ಭವ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಥಮ ಬಿ.ಕಾಂ ನ ರಕ್ಷಿತಾ ಸ್ವಾಗತಿಸಿ ಪ್ರಥಮ ಬಿಬಿಎ ವೀಕ್ಷಿತ ಧನ್ಯವಾದ ಅರ್ಪಿಸಿದರು.

Related posts

ಶ್ರೀ ಧ.ಮಂ.ಅ.ಹಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಬಳಂಜ- ಅಳದಂಗಡಿ ಸಂಪರ್ಕಿಸುವ ಬಾವಲಿಗುಂಡಿ ಬಳಿ ಗುಡ್ಡ ಕುಸಿತ, ಸಂಚಾರ ಸ್ಥಗಿತ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸವಣಾಲು ಅ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಮಾವಿನಕಟ್ಟೆ: ಸ್ವಾತಿ ಎಂ. ಶೆಟ್ಟಿರವರಿಗೆ ಬೆಸ್ಟ್ಔಟ್ ಗೋಯಿಂಗ್ ಸ್ಟೂಡೆಂಟ್ ಅವಾರ್ಡ್ ಪ್ರಶಸ್ತಿ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವ ಪೂರ್ವಾಭಾವಿ ಸಭೆ

Suddi Udaya

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲಕ್ಕೆ ಪಂಚಕಲ್ಯಾಣಗೊಂಡ 24 ತೀರ್ಥಂಕರರ ಜಿನ ಬಿಂಬಗಳಿಗೆ ಅಭಿಷೇಕ

Suddi Udaya
error: Content is protected !!