ಉಜಿರೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಹಾಗೂ ಎಲ್ಲಾ ಕರಿಯ ಅಂಗ ಸಂಸ್ಥೆ & ಗಲ್ಫ್ ಘಟಕ ಮತ್ತು ಅಲ್ – ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಹಳೇಪೇಟೆ ಇದರ ಸಹಯೋಗದೊಂದಿಗೆ ಮಾದಕ ದ್ರವ್ಯದ ವ್ಯಸನದ ವಿರುದ್ದ ಜನಜಾಗೃತಿ ಅಭಿಯಾನ ನ. 17 ರಂದು ಬದ್ರುಲ್ ಹುದಾ ಮದರಸ ಹಾಲ್ ಹಳೇಪೇಟೆ ಉಜಿರೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಇಸ್ಮಾಯಿಲ್ ಮದನಿ ಅಲ್ ಆದಿ ತಂಗಳ್ ಉಜಿರೆ ದುವಾ ನೆರವೇರಿಸಿದರು. ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಮುದರ್ರಿಸ್, ಎಮ್.ಜೆ ಎಮ್. ಉಜಿರೆ ಉದ್ಘಾಟಿಸಿ ಯುವ ಜನರೇ ಎಚ್ಚರ ಮಾದಕ ವಸ್ತುಗಳ ಸೇವನೆ ನಾವೇ ಸಾವಿಗೆ ಆಹ್ವಾನ ಕೊಟ್ಟಂತೆ ಎಂದು ಹೇಳಿದರು.
ಕಾರ್ಯಕ್ರಮದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಧನ್ ರಾಜ್ ಟಿ.ಎಮ್ ಮಾತನಾಡುತ್ತಾ ಮಾದಕ ವಸ್ತುಗಳ ವ್ಯಸನ ಕೇವಲ ವ್ಯಕ್ತಿತ್ವಕ್ಕಷ್ಟೇ ಅಲ್ಲ. ಇಡೀ ಸಮಾಜದ ಸ್ವಾಸ್ಥ್ಯಕ್ಕೆ ದೊಡ್ಡ ಬೆದರಿಕೆ ಕುಟುಂಬ ಬದುಕನ್ನೇ ನಾಶ ಮಾಡುವ ಸಾಮಾಗ್ರಿಯಾಗಿದೆ. ಮಾದಕ ಚಟ ಹಾಗೂ ಅದರ ಸಾಗಾಣಿಕೆಯ ದುಷ್ಟರಿಣಾಮಗಳ ಕುರಿತು ಅರಿವು ಮೂಡಿಸುವ ಹಿತ ಮಾತುಗಳನ್ನಾಡಿದರು

ಈ ಸಂದರ್ಭದಲ್ಲಿ ಮೋಹಿಯುದ್ದಿನ್ ಜುಮಾ ಮಸೀದಿ ಅಧ್ಯಕ್ಷ ಬಿ.ಎಮ್ ಅಬ್ದುಲ್ ಹಮೀದ್ ಅವರು ಸಬ್ ಇನ್ಸ್ಪೆಕ್ಟರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು., ವೇದಿಕೆಯಲ್ಲಿ ಯು.ಎ ಹಮೀದ್, ಯು.ಕೆ ಹನೀಫ್, ಎಸ್.ಎಮ್ ಕೋಯಾ ತಂಗಳ್, ಇಸ್ಮಾಯಿಲ್ ಶಾಫಿ, ಇಬ್ರಾಹಿಂ ಅತ್ತಾಜೆ, ಅಬೂಬಕ್ಕರ್ ಮುಗುಳಿ ಹಾಗೂ ಅರಬಿಕ್ ಮದರಸದ ಉಸ್ತಾದ್ ರವರು ಉಪಸ್ಥಿತರಿದ್ದರು,
ಕಾರ್ಯಕ್ರಮವನ್ನು ಅಲ್ ಅಮೀನ್ ಯಂಗ್ ಮೆನ್ಸ್ ಅಧ್ಯಕ್ಷರು ಸ್ವಾಗತಿಸಿದರು, ಕಾರ್ಯದರ್ಶಿ ಫಝಲ್ ರಹಿಮಾನ್ ಕೋಯಾ ಧನ್ಯವಾದಗೈದರು. ಪಝಲ್ ರಹಿಮಾನ್ ಕೋಯ ನಿರೂಪಿಸಿದ್ದರು.