23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ: ಬೊಳ್ಳಜ್ಜ ಕ್ಷೇತ್ರದಲ್ಲಿ ಸ್ವಾಮಿ ಬೊಳ್ಳಜ್ಜ ಸಮವಸ್ತ್ರ ಅನಾವರಣ

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಆವರಣದಲ್ಲಿ ನೆಲೆನಿಂತ ಕಾರಣೀಕ ಬೊಳ್ಳಜ್ಜನ ಕ್ಷೇತ್ರದಲ್ಲಿ ಸ್ವಾಮಿ ಬೊಳ್ಳಜ್ಜ ಸಮವಸ್ತ್ರವನ್ನು ಅನಾವರಣಗೊಳಿಸಲಾಯಿತು.

ಪ್ರಸಿದ್ದ ದೈವ ನರ್ತಕ ಬೇಬಿ ಪರವ ಅವರು ಸ್ವಾಮಿ ಬೊಳ್ಳಜ್ಜ ಹೆಸರಿನಲ್ಲಿ ಕ್ರೀಡಾಕೂಟಕ್ಕೆ ಸಮವಸ್ತ್ರ ಮಾಡಿದ್ದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ, ಸುದ್ದಿ ಉದಯ ಪತ್ರಿಕೆಯ ಉಪಸಂಪಾದಕ ಸಂತೋಷ್ ಪಿ ಕೋಟ್ಯಾನ್ ಅನಾವರಣಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ನಿಕಟಪೂರ್ವಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್, ಬಳಂಜ ಗ್ರಾಮ‌ ಪಂಚಾಯತ್ ಸದಸ್ಯ ಬಾಲಕೃಷ್ಣ ಪೂಜಾರಿ ಯೈಕುರಿ, ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸಂಚಾಲಕ ಹರೀಶ್ ವೈ ಚಂದ್ರಮ, ಬೊಂಟ್ರೋಟ್ಟು ಕ್ಷೇತ್ರದ ಟ್ರಸ್ಟಿ ಗಣೇಶ್ ಪೂಜಾರಿ, ಯುವಶಕ್ತಿ ಫ್ರೆಂಡ್ಸ್ ತಂಡದ ಸದಸ್ಯ ಕರುಣಾಕರ ಹೆಗ್ಡೆ ಬೊಕ್ಕಸ, ದೈವ ನರ್ತಕ ಬೇಬಿ ಪರವ, ಸುದ್ದಿ ಉದಯ ವಾರಪತ್ರಿಕೆಯ ಪ್ರತಿನಿಧಿ ಅಶೋಕ್ ಕುಲಾಲ್, ಪ್ರಮುಖರಾದ ಜಯನ್ ಮೇಸ್ತ್ರಿ, ರಾಕೇಶ್ ಹಿಮರಡ್ಡ,ಅನಿಲ್ ಬೊಂಟ್ರೋಟ್ಟು ಮೊದಲಾದವರು ಉಪಸ್ಥಿತರಿದ್ದರು.

Related posts

ಸೆ.8: ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಶೈಕ್ಷಣಿಕ ಸಾಧನೆಗೆ ಸರಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ

Suddi Udaya

ಪುಂಜಾಲಕಟ್ಟೆ: ಬೇರ್ಕಳ ಪೆರುವಾರು ಮನೆಯ ಬಾಬು ಶೆಟ್ಟಿ ನಿಧನ

Suddi Udaya

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಬೆನಕ ಆಸ್ಪತ್ರೆಯ ವಿಸ್ತೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

Suddi Udaya

ಬೆಳ್ತಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂ.ಮಾ. ಪ್ರಾ. ಶಾಲೆಗೆ ಹಲವು ಪ್ರಶಸ್ತಿ

Suddi Udaya

ನಾರಾವಿ ಶ್ರೀ ಕೃಷ್ಣ ಹೋಟೆಲ್ ನ ಮಾಲಕ ಚಂದ್ರಕಾಂತ ಹೆಗ್ಡೆ ನಿಧನ

Suddi Udaya

ಪೆರ್ಮುಡ ಶ್ರೀ ಜಗದೀಶ್ವರ ಭಜನಾ ಮಂಡಳಿ ಕುಣಿತ ಭಜನಾ ಉದ್ಘಾಟನಾ ಕಾರ್ಯಕ್ರಮ

Suddi Udaya
error: Content is protected !!