April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ: ಶ್ರೀಮಾತ ನಾಲ್ಕೂರು ಸಂಘಟನೆಯಿಂದ ವಾಲಿಬಾಲ್ ಪಂದ್ಯಾವಳಿ, ಸಾಧಕರಿಗೆ ಸನ್ಮಾನ

ಬಳಂಜ: ಶ್ರೀಮಾತಾ ನಾಲ್ಕೂರು ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ವಾಲಿಬಾಲ್ ಪಂದ್ಯಾವಳಿಯು ಬಳಂಜ ಶ್ರೀ ದೈವ ಕೊಡಮಣಿತ್ತಾಯ ಆವರಣದಲ್ಲಿ ನ. 18 ರಂದು ನಡೆಯಿತು.

ಪಂದ್ಯಾವಳಿಯ ಉದ್ಘಾಟನೆಯನ್ನು ಹಿರಿಯರಾದ ನೋಣಯ್ಯ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.

ವೇದಿಕೆಯಲ್ಲಿ ಬಳಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯಶೋಧರ ಶೆಟ್ಟಿ ಅಟ್ಲಾಜೆ, ಸದಸ್ಯ ಬಾಲಕೃಷ್ಣ ಪೂಜಾರಿ ಯೈಕುರಿ,ಸುದ್ದಿ ಉದಯ ವಾರಪತ್ರಿಕೆಯ ಉಪಸಂಪಾದಕ ಸಂತೋಷ್ ಪಿ ಕೋಟ್ಯಾನ್,ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಪೂಜಾರಿ ಜೈಮಾತ,ಪ್ರಗತಿ ಪರ ಕೃಷಿಕ ವಿಶ್ವನಾಥ ಹೊಳ್ಳ, ಬೆಳ್ತಂಗಡಿ ಭಾರತ್ ಆಟೋ ಕಾರ್ಸ್ ಸಂಸ್ಥೆಯ ಉದ್ಯೋಗಿ ಪ್ರವೀಣ್ ಕುಮಾರ್ ಹೆಚ್.ಎಸ್,ಯುವ ಉದ್ಯಮಿ ಪ್ರವೀಣ್ ಪೂಜಾರಿ ಲಾಂತ್ಯಾರು,ಯುವ ಉದ್ಯಮಿ ಸಚಿನ್ ಶೆಟ್ಟಿ ಕುರೆಲ್ಯ,ಮಂಗಳೂರು ಮಾಂಡೋವಿ ಮೋಟಾರ್ಸ್ ಉದ್ಯೋಗಿ ಯತೀಶ್ ವೈ.ಎಲ್ ಬಳಂಜ,ಯುವ ಉದ್ಯಮಿ ಸಾಧಿಕ್ ಬಳಂಜ,ಸುನೀಲ್ ಪಡಂಗಡಿ,ಹಿರಿಯರಾದ ಸಂಜೀವ ಶೆಟ್ಟಿ ನಾಲ್ಕೂರು,ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ಗುರುಪ್ರಸಾದ್ ಹೆಗ್ಡೆ ದರಿಮಾರ್, ಪ್ರಗತಿಪರ ಕೃಷಿಕ ಸುರೇಶ್ ಪೂಜಾರಿ ಹೇವ,ಯುವ ಉದ್ಯಮಿ ಪುರಂದರ ಪೆರಾಜೆ, ಬಳಂಜ ವಾಲಿಬಾಲ್ ಕ್ಲಬ್ ಕಾರ್ಯದರ್ಶಿ ಯೋಗೀಶ್ ಆರ್ ಯೈಕುರಿ,ಯುವ ಉದ್ಯಮಿ ಜಗದೀಶ್ ಪೆರಾಜೆ, ನೀಲಯ್ಯ ಕೆ ಕಾವಡಿ,ಉದ್ಯಮಿ ಶಮಂತ್ ಬಳಂಜ ಉಪಸ್ಥಿತರಿದ್ದರು.

ಸನ್ಮಾನ: ಶ್ರೀಮಾತ ನಾಲ್ಕೂರು ತಂಡದ ವತಿಯಿಂದ ಶ್ರೀ ದೈವ ಕೊಡಮಣಿತ್ತಾಯ ಆವರಣ ಗೋಡೆ ಸಮಿತಿ ಅಧ್ಯಕ್ಷ ಗಣೇಶ್ ಬಿಕೆ,ಸುರ್ಯ ಬರಮೇಲು ಹಾಗೂ ಮೋಟಾರು ಬೈಕ್ ರೈಡರ್ ಸಂತೋಷ್ ತೋಟದಪಲ್ಕೆ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮಾತ ನಾಲ್ಕೂರು ತಂಡದ ಸದಸ್ಯರಾದ ಸನತ್ ಶೆಟ್ಟಿ,ಸ್ವರೂಪ್ ಶೆಟ್ಟಿ, ಹರೀಶ್ ಮಜ್ಜೇನಿ, ಪುರಂದರ ಪೆರಾಜೆ, ಸಮಂತ್ ಅಂಚನ್,ನಿಶಾಂತ್,ಆದರ್ಶ್,ರಕ್ಷಿತ್, ಅವಿನಾಶ್, ರಾಜೇಶ್, ನಿತೀಶ್, ವಿಘ್ನೇಶ್, ಆಕರ್ಷ್,ರಾಕೇಶ್, ಸುಶಾಂತ್, ರಿತೇಶ್, ಪುರಂದರ ಬಳೆಂಜ, ಹರ್ಷಿತ್, ಜತಿನ್, ಪ್ರಣಮ್, ರಚನ್, ರತನ್, ಶ್ರಿಜನ್, ಪ್ರಾಣೇಶ್, ಆದರ್ಶ್, ಅಶ್ರೀತ್, ಅಭಿಜಿತ್, ವಿಲಾಸ್, ರವಿತೇಜ, ಸುಜಿತ್ ಹೆಗ್ಡೆ,ಪ್ರಸಾದ್ ಬಳೆಂಜ, ಯಶ್ವಿತ್, ನದೇಶ್ ಶೆಟ್ಟಿ, ಅಶೋಕ್, ಶ್ರೀಕಾಂತ್, ಮಧು ಶೆಟ್ಟಿ ಸಹಕರಿಸಿದರು.

Related posts

ಮರೋಡಿ: ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ – ಗೋಮಾಂಸ ಮಾರಾಟಕ್ಕೆ ಯತ್ನಿಸಿದ ಅಜಿದ್ ಬಂಧನ

Suddi Udaya

ಧರ್ಮಸ್ಥಳ: ಶ್ರೀ. ಧ.ಮಂ. ಆಂ.ಮಾ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಮಾಜಿ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ವಿಧಿವಶ

Suddi Udaya

ಸಹಕಾರಿ ಸಂಘದ ವತಿಯಿಂದ ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಅವರಿಗೆ ಅಭಿನಂದನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೊಸ ವರ್ಷದ ಪ್ರಯುಕ್ತ ರಂಗಪೂಜೆ ಹಾಗೂ ಉತ್ಸವಾದಿಗಳು

Suddi Udaya

ನಿರಂತರ ಮಳೆ: ನಡ ಅಂತ್ರಾಯಪಲ್ಕೆಯ ಗುಡ್ಡ ಕುಸಿತ- ಶ್ಯಾಮ್‌ಸುಂದರ್‌ರ ಮನೆಯ ಕಂಪೌಂಡ್‌ಗೆ ಹಾನಿ

Suddi Udaya
error: Content is protected !!