38.6 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಸಾಮಾಜಿಕ ಜಾಲತಾಣದಲ್ಲಿ ಸಿ.ಎಂ. ಸಿದ್ದರಾಮಯ್ಯರವರ ಬಗ್ಗೆ ಅಶ್ಲೀಲ ಆಡಿಯೋ ವೈರಲ್: ರಜಿತ್ ಕೊಕ್ಕಡ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ : ಸಿ.ಎಂ ಸಿದ್ದರಾಮಯ್ಯರವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ರೀತಿಯಲ್ಲಿ ಮಾತಾನಾಡಿದ ಆಡಿಯೋ ವೈರಲ್ ಅಗಿದ್ದು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನ.19 ರಂದು ಸಂಜೆ ದೂರು ನೀಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿಯಾಗಿರುವ ವೃತ್ತಿಯಲ್ಲಿ ಸೆಲೂನ್ ಅಂಗಡಿಯಲ್ಲಿ ಕೆಲಸ ಮಾಡುವ ರಜಿತ್ ಕೊಕ್ಕಡ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಬಗ್ಗೆ ಅಶ್ಲೀಲವಾಗಿ ನಿಂದಿಸಿ ಮಾತಾನಾಡಿರುವ ಆಡಿಯೋ ಹರಿಯಬಿಟ್ಟಿದ್ದು ಇದರ ಬಗ್ಗೆ ಬೆಳ್ತಂಗಡಿ ಕಾಂಗ್ರೆಸ್ ಕಾರ್ಯಕರ್ತ ಹಕಿಮ್ ಕೊಕ್ಕಡ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಧರ್ಮಸ್ಥಳ ಪೊಲೀಸರು ಆರೋಪಿ ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿ ರಜಿತ್ ಕೊಕ್ಕಡ ಮೇಲೆ ಐಪಿಸಿ 1860 (u/s 153A,504,505(2)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಹಕಿಮ್ ಕೊಕ್ಕಡ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿದೇವ್ ಅರಿಗ, ಯುವ ಇಂಟಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಗೌಡ ಸವಣಾಲು, ಸುಧೀರ್ ದೇವಾಡಿಗ, ರಬಿನ್,ಮೋಹಿತ್ ಜೊತೆಯಲ್ಲಿದ್ದರು.

Related posts

ಬೆಳ್ತಂಗಡಿ : ಶ್ರೀಮತಿ ಆಲಿಸ್ ಪಿರೇರಾ ನಿಧನ

Suddi Udaya

ಭತ್ತದ ಸಾಂಪ್ರದಾಯಿಕ ತಳಿಗಳ ಸಂರಕ್ಷಕ ಸಾವಯವ ಕೃಷಿಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಬಿ.ಕೆ ದೇವರಾವ್ ರಿಗೆ ಬೆಳ್ತಂಗಡಿ ತಾಲೂಕು ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಗೌರವಾರ್ಪಣೆ

Suddi Udaya

ಮಾ.30: ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ಕುಣಿತ ಭಜನಾ ಮಂಡಳಿಯಿಂದ ಬರಾಯ ಭಜನಾ ಕಮ್ಮಟ ಉತ್ಸವ

Suddi Udaya

ಬೆಳ್ತಂಗಡಿ ಸ್ಥಳೀಯ ಸಂಸ್ಥೆಯಿಂದ ಕಬ್- ಬುಲ್ ಬುಲ್ಸ್ ಉತ್ಸವ, ಸ್ಕೌಟ್ಸ್- ಗೈಡ್ಸ್ ಮೇಳ, ರೋವರ್ಸ್‌ – ರೇಂಜರ್ಸ್‌ ಸಮಾಗಮ

Suddi Udaya

ಬೆಳ್ತಂಗಡಿ: ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆ ಯಾದ ಸೇಬಾಷ್ಟಿಯನ್ ಪಿ ಸಿ ರವರಿಗೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ವತಿಯಿಂದ ಅಭಿನಂದನೆ

Suddi Udaya

ತೆಂಕಕಾರಂದೂರು: ಶಾಲಾ ಆವರಣದಲ್ಲಿ ಹೂವಿನ ಕುಂಡಗಳನ್ನು ಪುಡಿಗೊಳಿಸಿದ ಕಿಡಿಗೇಡಿಗಳು

Suddi Udaya
error: Content is protected !!