April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚುನಾವಣಾ ಆಯೋಗದ ಆದೇಶದಂತೆ ಶತಾಯುಷಿ ಮತದಾರಿಗೆ ಪ್ರಮಾಣ ಪತ್ರ: ಇಳಂತಿಲದಲ್ಲಿ 102 ವರ್ಷದ ಹುಟ್ಟು ಹಬ್ಬ ಆಚರಿಸಿದ ಖತಿಜರಿಗೆ ಪ್ರಮಾಣ ಪತ್ರ ವಿತರಣೆ

ಬೆಳ್ತಂಗಡಿ: ಶತಾಯುಷಿ ಮತದಾರರನ್ನು ಮತದಾನದಲ್ಲಿ ಗರಿಷ್ಠ ಭಾಗವಹಿಸುವಿಕೆಯಲ್ಲಿ ಖಚಿತಪಡಿಸಿಕೊಳ್ಳಲು ಭಾರತ ಚುನಾವಣಾ ಆಯೋಗವು ಆದೇಶ ನೀಡಿದ್ದು, ಈಗಾಗಲೇ ತಾಲೂಕಿನಲ್ಲಿರುವ ಶತಾಯುಷಿ ಮತದಾರರನ್ನು ಸ್ಥಳೀಯ ಗ್ರಾಮ ಪಂಚಾಯತ್ ಮೂಲಕ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಅವರನ್ನು ಗೌರವಯುತವಾಗಿ ಅಭಿನಂದಿಸಿ, ಸನ್ಮಾನಿಸಿ ಅವರಿಗೆ ಪ್ರಮಾಣ ಪತ್ರವನ್ನು ನೀಡುವ ಕಾರ್ಯ ಆರಂಭಗೊಂಡಿದೆ.


ಅದರಂತೆ ನ.20 ರಂದು ಇಳಂತಿಲ ಗ್ರಾಮ ಪಂಚಾಯತು ವ್ಯಾಪ್ತಿಯ ಜೋಗಿಬೆಟ್ಟು ಎಂಬಲ್ಲಿರುವ ಖತಿಜ ಎಂಬವರ ಮನೆಗೆ ಇಳಂತಿಲ ಗ್ರಾಮ ಪಂಚಾಯತದವರು ಭೇಟಿ ನೀಡಿದಾಗ ಖತಿಜ ಅವರ 102ನೇ ಹುಟ್ಟು ಹಬ್ಬದ ದಿನವಾಗಿತ್ತು. ಹುಟ್ಟು ಹಬ್ಬ ಆಚರಿಸುವುದರ ಮೂಲಕ ಶತಾಯುಷಿ ಖತಿಜ ಅವರನ್ನು ಗೌರವಯುತವಾಗಿ ಅಭಿನಂದಿಸಿ, ಸನ್ಮಾನಿಸಿ, ಪ್ರಮಾಣ ಪತ್ರವನ್ನು ನೀಡಲಾಯಿತು.

Related posts

ವಿಪರೀತ ಮಳೆ : ತೆಕ್ಕಾರು ಅತಿಜಮ್ಮ ರವರ ಮನೆಯ ಮಹಡಿ ಸಂಪೂರ್ಣ ಹಾನಿ

Suddi Udaya

ಬೆಳಾಲು: ವ್ಯಕ್ತಿಯೋರ್ವರಿಗೆ ದ್ವಿಚಕ್ರ ವಾಹನ ಡಿಕ್ಕಿ

Suddi Udaya

ಫೆ.27-29: ಶಿಬಾಜೆ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ವಾರ್ಷಿಕೋತ್ಸವ

Suddi Udaya

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಮೇಳೈಸಿದ ಕೆಸರುಗದ್ದೆ ಕ್ರೀಡಾಕೂಟ

Suddi Udaya

ರಾಜ್ಯ ಮಟ್ಟದ ಪೊಲೀಸ್‌ ಇಲಾಖಾ ಕ್ರೀಡಾಕೂಟ: ಪೋರ್ಟ್ರೇಟ್ ಪಾರ್ಲೆ ಟೆಸ್ಟ್ ನಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯ ವಿಜಯಕುಮಾ‌ರ್ ರೈ ತೃತೀಯ ಸ್ಥಾನ

Suddi Udaya
error: Content is protected !!