24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳಾಲು ಶ್ರೀ ಧ.ಮಂ ಪ್ರೌಢ ಶಾಲೆಯಲ್ಲಿ ಅಣಬೆ ಬೇಸಾಯ ತರಬೇತಿ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಪೋಷಕರ ಸಮಾವೇಶದ ಸಂದರ್ಭದಲ್ಲಿ ಅಣಬೆ ಕೃಷಿ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರಗಿತು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ್ ಕೊಲ್ಲಿಮಾರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಳಾಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಸುಲೈಮಾನ್ ಭೀಮಂಡೆಯವರು ಆಗಮಿಸಿದ್ದು, ಅಣಬೆ ಕೃಷಿಯ ಮಾಹಿತಿಯೊಂದಿಗೆ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಅತ್ಯಂತ ಸುಲಭ ಮತ್ತು ಕಡಿಮೆ ವೆಚ್ಚದಲ್ಲಿ, ಮನೆ ಬಳಕೆ ಹಾಗೂ ಆರ್ಥಿಕ ದೃಷ್ಟಿಕೋನದಿಂದಲೂ ಮಾಡಬಹುದಾದ ಕೃಷಿಯೆಂದರೆ ಅಣಬೆ ಬೇಸಾಯ ಮಾತ್ರ ಎನ್ನುತ್ತಾ ಮಾಹಿತಿ ನೀಡಿದರು.

ಮುಖ್ಯ ಶಿಕ್ಷಕರಾದ ರಾಮಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬಹಳಷ್ಟು ಮಂದಿ ಪೋಷಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕರಾದ ಶಿಕ್ಷಕರಾದ ಗಣೇಶ್ವರ ರವರು ಸ್ವಾಗತಿಸಿ, ಕೋಕಿಲಾರವರು ವಂದಿಸಿದರು, ಸುಮನ್ ರವರು ಕಾರ್ಯಕ್ರಮ ನಿರೂಪಿಸಿದರು.

Related posts

ಮಡಂತ್ಯಾರು: ವರ್ತಕ ಬಂಧು ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ: ಚರ್ಮಗಂಟು ರೋಗದ ಎರಡನೇ ಅಲೆಯೇ ಎಂಬ ಸಂದೇಹ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಇಲOತಿಲ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದ ಸಭೆ

Suddi Udaya

ಉಪ್ಪಿನಂಗಡಿ: ನೇತ್ರಾವತಿ ಮತ್ತು ಕುಮಾರಧಾರ ನದಿಯಲ್ಲಿ ಉಕ್ಕಿ ಹರಿಯುತ್ತಿರುವ ಪ್ರವಾಹ

Suddi Udaya

ಬೆಳ್ತಂಗಡಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

Suddi Udaya

ಶಿರ್ಲಾಲು: ಶ್ರೀ ತುಳಸಿ ಮೆನ್ಸ್ ಪಾರ್ಲರ್ ಶುಭಾರಂಭ

Suddi Udaya
error: Content is protected !!